ಮಿನಿ ನವಾಬ್ ತೈಮೂರ್ ನ್ಯಾನಿ ಸಂಬಳ ಕೇಳಿದರೆ ದಂಗಾಗ್ತೀರಿ!
ಸೈಫೀನಾ ಮಗ ತೈಮೂರ್‌ನನ್ನು ಎತ್ತಿ ಕೊಳ್ಳುವ ಒಬ್ಬ ಕೇರ್ ಟೇಕರ್ ಫೋಟೋ ನೋಡಿರಬಹುದು ಅಲ್ವಾ? ಮೊದ ಮೊದಲಂತೂ ತೈಮೂರ್ ಕಂಡಲ್ಲೆಲ್ಲಾ ಈ ಮಧ್ಯ ವಯಸ್ಸು ದಾಟಿದ ತಾಯಿಯೂ ಇರುತ್ತಿದ್ದಳು. ತೈಮೂರ್ ನೋಡಿಕೊಳ್ಳಲು ಬಾಲಿವುಡ್ ನಟರಾದ ಸೈಫ್ ಆಲಿ ಖಾನ್ ಮತ್ತು ಕರೀನಾ ಕಪೂರ್ ಅಪಾಯಂಟ್ ಮಾಡಿಕೊಂಡ ನ್ಯಾನಿ ಇವರು. ಈ ಮಿನಿ ನವಾಬ್‌ನನ್ನು ನೋಡಿಕೊಳ್ಳಲು ಇರುವ ದಾದಿಯ ಸಂಬಳ ಕೇಳಿದರೆ ನೀವು ನಿಮ್ಮ ಕೆಲಸವನ್ನು ತ್ಯಜಿಸಲು ಬಯಸುವುದಂತೂ ಗ್ಯಾರಂಟಿ.

ತೈಮೂರ್ ಆಲಿ ಖಾನ್ ಸ್ಟಾರ್ ಕಪಲ್ ಕರೀನಾ ಕಪೂರ್ ಹಾಗೂ ಸೈಫ್ ಆಲಿ ಖಾನ್ ಪುತ್ರ.

ಬಾಲಿವುಡ್‌ನ ಮಿನಿ ನವಾಬ್‌ಗೆ ಈಗಾಗಲೇ ದೊಡ್ಡ ಅಭಿಮಾನಿ ಬಳಗವಿದೆ. ಈತನ ಹೆಸರಿನಲ್ಲಿ ಅನೇಕ ಫ್ಯಾನ್ ಕ್ಲಬ್‌ಗಳನ್ನು ಹೊಂದಿರುವ ಸ್ಟಾರ್ ಕಿಡ್.

ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ತೈಮೂರ್ ಅಲಿ ಖಾನ್ ಚಿತ್ರಗಳು ಮತ್ತು ವೀಡಿಯೊಗಳು ಎಲ್ಲರ ಫೇವರೇಟ್. ಕೆಲವೊಮ್ಮೆ ತೈಮೂರ್ ಜೊತೆಗೆ ನ್ಯಾನಿಯೂ ಕಾಣಿಸಿಕೊಳ್ಳುತ್ತಾರೆ.

ತೈಮೂರ್ ಕೇರ್ ತೆಗೆದುಕೊಳ್ಳುವವರಿಗೆ ಬಾರಿ ವೇತನ ನೀಡಲಾಗುತ್ತದೆ.

ಕರೀನಾ ಕಪೂರ್ ಮಗ ತೈಮೂರ್ ಅಲಿ ಖಾನ್ ದಾದಿಯ ಸಂಬಳ ಕೇಳಿದರೆ ದಂಗಾಗುವುದು ಖಚಿತ.

ಮನರಂಜನಾ ವೆಬ್‌ಸೈಟ್‌ವೊಂದರ ವರದಿಯು ತೈಮೂರ್‌ನ ದಾದಿಯ ಸಂಬಳದ ವಿವರ ಇಂತಿದೆ.

ಕರೀನಾ ಸೈಫ್ ಮಗನನ್ನು ನೋಡಿಕೊಳ್ಳುವವರು ಸಾವಿತಿ. ತೈಮೂರ್ ಪಕ್ಕದಲ್ಲಿ ಯಾವಾಗಲೂ ಕಾಣಿಸಿಕೊಳ್ಳುವ ಈಕೆ, ಅವನೊಂದಿಗೆ ಸೆಲ್ಫಿ ಕ್ಲಿಕ್ ಮಾಡಲು ಪ್ರಯತ್ನಿಸುವ ಜನರನ್ನು ದೂರ ತಳ್ಳುತ್ತಿರುತ್ತಾರೆ.

ನ್ಯಾನಿ ಸಾವಿತಿ ಪಡೆಯುವ ಸಂಬಳವು ಎಂಜಿನಿಯರ್‌ಗಳು, ಎಂಬಿಎಗಳು, ಮಧ್ಯಮ ಮಟ್ಟದ ಪತ್ರಕರ್ತರು, ಸರ್ಕಾರಿ ಅಧಿಕಾರಿಗಳು ಮತ್ತು ಐಟಿ ವೃತ್ತಿಪರರಿಗಿಂತ ಹೆಚ್ಚಿನದಾಗಿದೆ ಎಂದು ವರದಿ ಹೇಳುತ್ತದೆ.

'ತೈಮೂರ್‌ನ ದಾದಿ ತಿಂಗಳಿಗೆ 1.5 ಲಕ್ಷ ರೂ. ಬೆಸಿಕ್ ಸ್ಯಾಲರಿ ಪಡೆಯುತ್ತಾಳೆ. ಅವಳು ತನ್ನ ಮನೆಯಲ್ಲಿ ಕಳೆದ ಹೆಚ್ಚುವರಿ ಗಂಟೆಗಳ ಆಧಾರದ ಮೇಲೆ ಇದು 1.75 ಲಕ್ಷ ರೂ.ಗಳವರೆಗೂ ಹೋಗಬಹುದು'

'ಮಗುವಿನೊಂದಿಗೆ ಕಳೆದ ಪ್ರತಿ ಹೆಚ್ಚುವರಿ ಗಂಟೆಗೆ ಓವರ್ ಟೈಮ್ ಶುಲ್ಕವಿದೆ. ಜೊತೆಗೆ, ಬಾಂದ್ರಾ ಮತ್ತು ಸುತ್ತಮುತ್ತ ಮಗುವನ್ನು ಕರೆದೊಯ್ಯಲು ಅವಳ ಬಳಿ ಒಂದು ಕಾರು ಇದೆ' ಎಂದು ಮೂಲವೊಂದು ಪೋರ್ಟಲ್‌ಗೆ ಮಾಹಿತಿ ನೀಡಿದೆ.

ಅಷ್ಟೈ ಅಲ್ಲ, ಇವರ ಫಾರಿನ್ ಹಾಲಿಡೇ ಸಮಯದಲ್ಲಿ ತೈಮೂರ್ ದಾದಿ ಸಹ ಜೊತೆಗಿರುತ್ತಾರೆ.

ಸಾವಿತಿ ಮುಂಬೈನ ಜುಹುನಲ್ಲಿರುವ ಟಾಪ್ ಏಜೆನ್ಸಿಯವರು. ಬೆಬೊ ಜೊತೆಗೆ, ತುಷಾರ್ ಕಪೂರ್ ಮತ್ತು ಸೋಹಾ ಅಲಿ ಖಾನ್ ತಮ್ಮ ಪುಟ್ಟ ಮಕ್ಕಳಿಗಾಗಿ ಇದೇ ಏಜೆನ್ಸಿಯಿಂದ ದಾದಿಯರನ್ನು ಹೈಯರ್ ಮಾಡಿದ್ದಾರಂತೆ.

ಏಜೆನ್ಸಿ ಸಿಬ್ಬಂದಿಯ ಎಲ್ಲಾ ವಿಷಯ ಹಾಗೂ ಹಿನ್ನೆಲೆಯನ್ನು ಕೂಲಂಕುಷವಾಗಿ ಪರಿಶೀಲಿಸುತ್ತದೆ. ಬ್ಯುಸಿಯಾಗಿರುವ ಪೋಷಕರಿಗೆ ಯಾವುದೇ ಒತ್ತಡ ಬರದಂತೆ ಪೊಲೀಸ್ ವೇರಿಫಿಕೆಷನ್ ಕೂಡ ಮಾಡಲಾಗುತ್ತದೆ.