ಡೇನಿಯಲ್ ವೆಬ್‌ರನ್ನೇಕೆ ವರಿಸಿದೆ? ಸನ್ನಿ ಲಿಯೋನ್ ಹೇಳುತ್ತಾರೆ ಅವರ ಮದುವೆ ಕಥೆ!
ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತು ಅವರ ಪತಿ ಡೇನಿಯಲ್ ವೆಬರ್ ಅತ್ಯಂತ ಸ್ವೀಟ್ ಸೆಲೆಬ್ರಿಟಿ ದಂಪತಿಯೊಲ್ಲಿ ಒಬ್ಬರು. ಸನ್ನಿ ತಮ್ಮ ಪತಿ ಡೇನಿಯಲ್ ವೆಬರ್ ಅವರನ್ನು ಮದುವೆಯಾಗಲು ಕಾರಣ ಏನು ಗೊತ್ತಾ? ಇತ್ತೀಚೆಗೆ ಸ್ವತ: ಸನ್ನಿ ಈ ವಿಷಯವನ್ನು ಬಹಿರಂಗಪಡಿಸಿದರು. ಇಲ್ಲಿದೆ ನೋಡಿ ಆ ಕಾರಣ.
ಸನ್ನಿ ಲಿಯೋನ್‌ಗೆ ವಿಶ್ವದ ತುಂಬೆಲ್ಲಾ ಅಭಿಮಾನಿಗಳು. ಅವರ ಜೊತೆ ಅವರ ಪತಿ ಡೇನಿಯಲ್ ವೆಬರ್ ಸಹ ಸಖತ್ ಫೇಮಸ್. ಈ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಇದ್ದಾರೆ.
ಸನ್ನಿ ಲಿಯೋನ್ ಹಾಗೂ ಪತಿ ಡಾನಿಯಲ್ ವೆಬರ್ ತಮ್ಮ ದಿನ ನಿತ್ಯದ ಚಟುವಟಿಗಳನ್ನು ಫ್ಯಾನ್ಸ್ ಜೊತೆ ಸೋಶಿಯಲ್ ಮೀಡಿಯಾ ಫೋಸ್ಟ್ ಮೂಲಕ ಹಂಚಿಕೊಳ್ಳುತ್ತಲೇ ಇರುತ್ತಾರೆ. ಫ್ಯಾನ್ಸ್ ಈ ಕ್ಯೂಟ್ ಕಪಲ್ ಅನ್ನು ತುಂಬಾ ಇಷ್ಟ ಪಡುತ್ತಾರೆ.
Sunny Leone
ಸನ್ನಿ ಲಿಯೋನ್, ಪ್ರಸ್ತುತ ಭಾರತದಲ್ಲಿದ್ದಾರೆ. ತಮ್ಮ ಪತಿ ಮತ್ತು ಮಕ್ಕಳ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ನಟಿ ತಮ್ಮ ಮಕ್ಕಳೊಂದಿಗೆ ರಾಖಿ ಹಬ್ಬವನ್ನು ಆಚರಿಸಿದ್ದಾರೆ. ಡೇನಿಯಲ್ ಮತ್ತು ಅವರ ಮಕ್ಕಳಾದ ನಿಶಾ, ನೋವಾ ಮತ್ತು ಆಶರ್ ಜೊತೆಯ ರಕ್ಷ ಬಂಧನದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Sunny Leone
ಲಿಯೋನ್ ಸನ್ನಿ ತಮ್ಮ ರಾಖಿ ಆಚರಣೆಯ ಫೋಟೋಗಳಲ್ಲಿ, ಅವರ ಮಗಳು ನಿಶಾ ಕುರ್ತಾ ಧರಿಸಿ, ಕುರ್ತಾ ಪೈಜಾಮಾ ಧರಿಸಿದ ತನ್ನ ಇಬ್ಬರು ಸಹೋದರರಿಗೆ ರಾಖಿಗಳನ್ನು ಕಟ್ಟುತ್ತಿದ್ದಾಳೆ. ಮಕ್ಕಳ ಈ ಕ್ಯೂಟ್ ಫೋಟೋಗಳನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.
ಇತ್ತೀಚೆಗೆ, ಸನ್ನಿ VOOTನ 'ಫೀಟ್ ಅಪ್ ವಿತ್ ದಿ ಸ್ಟಾರ್ಸ್ 3' ಗೆ ಆಹ್ವಾನಿಸಲ್ಪಟ್ಟಿದ್ದರು. ಅಲ್ಲಿ ತನ್ನ ಪತಿ ಡೇನಿಯಲ್ ವೆಬರ್ ಜೊತೆಗಿನ ಸಂಬಂಧದ ಬಗ್ಗೆ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಿದ್ದಾರೆ ಸನ್ನಿ. ಹಾಗೆಯೇ ಅವರನ್ನು ಮದುವೆಯಾದ ಕಾರಣವನ್ನು ರಿವೀಲ್ ಮಾಡಿದ್ದಾರೆ.
ಈ ಕ್ಯಾನಿಡೀಡ್ ಚಾಟ್‌ನಲ್ಲಿ ಸನ್ನಿ ಅವರು ಡೇನಿಯಲ್ ವೆಬರ್ ಅವರನ್ನು ಏಕೆ ಮದುವೆಯಾದರು ಎಂದು ಕೇಳಲಾಯಿತು. ಮತ್ತು ಅದಕ್ಕೆ ನಟಿ ಉತ್ತರವೇನು ಗೊತ್ತಾ? 'ನಾನು ಡೇನಿಯಲ್‌ನ ನೃತ್ಯ ಕೌಶಲ್ಯವನ್ನು ಪ್ರೀತಿಸುತ್ತೇನೆ. ನಾನು ಅವನನ್ನು ಮದುವೆಯಾಗಲು ಇದು ಒಂದು ಕಾರಣವಾಗಿದೆ' ಎಂದು ಹೇಳಿದ್ದಾರೆ ಸನ್ನಿ.
ಮೊದಲ ಬಾರಿಗೆ ಲಾಸ್ ವೇಗಾಸ್‌ನ ಕ್ಲಬ್‌ನಲ್ಲಿ ಭೇಟಿಯಾದ ಸನ್ನಿ ಮತ್ತು ಡೇನಿಯಲ್ ಏಪ್ರಿಲ್ 9, 2011 ರಂದು ವಿವಾಹವಾದರು. ಈ ದಂಪತಿ ಪ್ರಸ್ತುತ ಮೂರು ಮಕ್ಕಳ ಪೋಷಕರು. 2017 ರಲ್ಲಿ ಸನ್ನಿ ಮತ್ತು ಡೇನಿಯಲ್ ನಿಶಾಳ ಪಾಲಕರಾದರು.
ಸನ್ನಿ ಡೇನಿಯಲ್ ದಂಪತಿ ನಿಶಾಳನ್ನು ಮಹಾರಾಷ್ಟ್ರದ ಲಾತೂರಿನಿಂದ ದತ್ತು ತೆಗೆದುಕೊಂಡರು. ನಂತರ, ಸರೋಗೆಸಿ ಮೂಲಕ ನೋವಾ ಮತ್ತು ಆಶರ್ ಎಂಬ ಇಬ್ಬರು ಗಂಡು ಮಕ್ಕಳನ್ನು ಪಡೆದರು.
ಸನ್ನಿ ಲಿಯೋನ್ ತಮಿಳು ಚಿತ್ರ ಶೆರೋದಲ್ಲಿ ಕಾಣಿಸಿಕೊಳ್ಳಲಿದ್ದು, ಅದರೊಂದಿಗೆ ಆಕೆ ತನ್ನ ಜೋಳಿಗೆಯಲ್ಲಿ ವೀರಮಾದೇವಿ, ರಂಗೀಲಾ, ಕೋಕಾ ಕೋಲಾ ಮತ್ತು ಹೆಲೆನ್ ಸಿನಿಮಾವನ್ನು ಕೂಡ ಹೊಂದಿದ್ದಾರೆ.