ಮದುವೆಯಾಗಿ 3 ತಿಂಗಳೊಳಗೆ ಪ್ರಿಯಾಂಕಾ ಚೋಪ್ರಾ-ನಿಕ್ ಜೊನಾಸ್ ವಿಚ್ಛೇದನದ ಸುದ್ದಿ ಸತ್ಯ ಏನು?
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ಮದುವೆ ಬಿ ಟೌನ್‌ನಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಸಾಕಷ್ಟು ಸೌಂಡ್ ಮಾಡಿತ್ತು. ತನಗಿಂತ ಕಿರಿಯ ಅಮೆರಿಕದ ಗಾಯಕ ನಿಕ್‌ನನ್ನು ಮದುವೆಯಾದಾಗ ಸಖತ್ ಟ್ರೋಲ್‌ಗೆ ಗುರಿಯಾಗಿದ್ದರು ಮೇರಿ ಕೋಮ್ ನಟಿ. ಮದುವೆಯಾಗಿ 3 ತಿಂಗಳಿಗೆ ದಂಪತಿಗಳು ಈಗಾಗಲೇ ವಿಚ್ಛೇದನಕ್ಕೆ ರೆಡಿಯಾಗಿದ್ದಾರೆ ಎಂದು ಯುಎಸ್ ನಿಯತಕಾಲಿಕೆ ವರದಿ ಮಾಡಿತ್ತು. ಸತ್ಯ ಏನು?
ಮದುವೆಯಾಗಿ ಕೇವಲ 3 ತಿಂಗಳಿಗೆ ಯುಎಸ್ ನಿಯತಕಾಲಿಕೆ ವರದಿ ಮಾಡಿದ ಪಿಗ್ಗಿ ಹಾಗೂ ನಿಕ್‌ರ ಡಿವೋರ್ಸ್ ಸುದ್ದಿಗೆ ಫ್ಯಾನ್ಸ್ ಶಾಕ್ ಆಗಿದ್ದರು.
ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ಮತ್ತು ನಿಕ್ ಜೊನಾಸ್ ಪರಸ್ಪರ ಉತ್ತಮ ಸಂಬಂಧ ಹೊಂದಿಲ್ಲ ಮತ್ತು ದಂಪತಿಗಳು ಈಗಾಗಲೇ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ಪತ್ರಿಕೆಯೊಂದು ಹೇಳಿತ್ತು.
'36 ವರ್ಷದ ನಟಿ ಮತ್ತು 26 ವರ್ಷದ ಗಾಯಕ ಶೀಘ್ರವಾಗಿ ಪ್ರೀತಿಯಿಂದ ಹೊರಗುಳಿಯುತ್ತಿದ್ದಾರೆ, ಏಕೆಂದರೆ ಅವರು 'ನಿಜವಾಗಿಯೂ ಒಬ್ಬರಿಗೊಬ್ಬರು ತಿಳಿದುಕೊಳ್ಳಲು ಪ್ರಾರಂಭಿಸುತ್ತಿದ್ದಾರೆ' ಎಂದು OK ಮ್ಯಾಗಜೀನ್‌ನಲ್ಲಿ ವರದಿಯಾಗಿತ್ತು' ಎಂಬುದನ್ನು gossipcop.com ವರದಿ ಮಾಡಿತ್ತು.
'ಅವರು ಕೆಲಸ, ಪಾರ್ಟಿ ಮಾಡುವುದು, ಒಟ್ಟಿಗೆ ಸಮಯ ಕಳೆಯುವುದು ಎಲ್ಲದರ ಬಗ್ಗೆ ಜಗಳ ಮಾಡುತ್ತಿದ್ದಾರೆ. ನಿಕ್ ಮತ್ತು ಪ್ರಿಯಾಂಕಾ ಅವರು ಅವಸರಿಸಿದರು ... ಮತ್ತು ಈಗ ಅವರು ಬೆಲೆ ತೆರುತ್ತಿದ್ದಾರೆ. ಅವರ ಮದುವೆ ನೇತಾಡುತ್ತಿದೆ' ಎಂದು ಮೂಲವೊಂದು ಹೇಳಿತ್ತು.
ಮದುವೆಯಾದಾಗ ನಟಿ 'ಕೂಲ್ ಮತ್ತು ಈಸಿ ಗೋಯಿಂಗ್' ಎಂದು ನಿಕ್ ನಂಬಿದ್ದರು ಎಂದು ಮೂಲಗಳು ತಿಳಿಸಿವೆ.
'ಆದರೆ ಇತ್ತೀಚೆಗೆ ನಿಕ್ ಅವಳನ್ನು ಕಂಟ್ರೋಲಿಂಗ್ ಸೈಡ್‌ನ್ನು ನೋಡಿದ್ದಾನೆ. ಅವಳು ಕೋಪವನ್ನು ಸಹ ಹೊಂದಿದ್ದಾಳೆ. ಇದು ಮದುವೆಯಾಗುವರೆಗೆ ನಿಕ್‌ಗೆ ತಿಳಿದಿರಲಿಲ್ಲ.' ಎಂಬುದು ರಿಪೋರ್ಟ್.
'ಈಗ ಮದುವೆಯನ್ನು ಕೊನೆಗೊಳಿಸಬೇಕೆಂದು ನಿಕ್ ಫ್ಯಾಮಿಲಿ ಬೇಡಿಕೊಳ್ಳುತ್ತಿದೆ. ಪ್ರಿಯಾಂಕಾ ಪ್ರಬುದ್ಧ ಮಹಿಳೆ ಸೆಟ್ಲ್ ಆಗಿ ಮತ್ತು ಮಕ್ಕಳನ್ನು ಹೊಂದಲು ಸಿದ್ಧಳಾಗಿದ್ದಾಳೆ ಎಂದು ಮೊದಲಿಗೆ ನಿಕ್ ಕುಟುಂಬ ಭಾವಿಸಿತ್ತು ಆದರೆ ಈಗ ಅವಳು 21 ವರ್ಷದ ಹಾಗೆ ವರ್ತಿಸುವ ಪಾರ್ಟಿ ಗರ್ಲ್ ಎಂದು ಭಾವಿಸುತ್ತಾರೆ' ಎಂದು ವರದಿಯಾಗಿತ್ತು.
'ನಿಕ್ ಮತ್ತು ಪ್ರಿಯಾಂಕಾ ತುಂಬಾ ಬೇಗ ವಿವಾಹವಾದರು ಎಂಬ ಸುದ್ದಿ ಇದೆ ಪ್ರಿನ್ಯುಪ್ಚಲ್ ಒಪ್ಪಂದವನ್ನು ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಲಿಲ್ಲ'. ಅದ್ದರಿಂದ ಬೇರೆಯಾಗಲು ಹಣಕ್ಕೆ ಸಂಬಂಧಿಸಿದ ದೊಡ್ಡ ಜಗಳ ಕಾರಣವಾಗಬಹುದು ಎಂದು ಮೂಲ ಹೇಳಿತ್ತು.
ವಿವಾಹದ ನಂತರ ಪ್ರಿಯಾಂಕಾ ಕಂಟ್ರೋಲ್ ಮಾಡುವುದನ್ನು ಕೂಡ ನಿಕ್ ಕಂಡುಕೊಂಡಿದ್ದಾನೆ ಎಂದು ಹೇಳುವ ಮಟ್ಟಿಗೆ ವರದಿಯಾಗಿತ್ತು.
ಆದಾಗ್ಯೂ, ಪೀಸೀ ವಕ್ತಾರರು ವದಂತಿಗಳನ್ನು ತಳ್ಳಿಹಾಕಿದ್ದಾರೆ, 'ಯಾವುದೇ ಸತ್ಯವಿಲ್ಲ' ಮತ್ತು ಈ ವದಂತಿಗಳು 'ಅಸಂಬದ್ಧ' ಎಂದು ಹೇಳಿದ್ದಾರೆ ಎಂದು ಮತ್ತೊಂದು ಸುದ್ದಿ ವರದಿ ಮಾಡಿತ್ತು.