ಲಕ್ಷಾಂತರ fans ಇದ್ದರೂ ಇಷ್ಷಪಟ್ಟವರ ಪ್ರೀತಿ ಸಿಗಲೇ ಇಲ್ಲ ಈ ಲೆಜೆಂಡರಿ ನಟಿಗೆ

First Published 1, Aug 2020, 4:51 PM

ಬಾಲಿವುಡ್‌ನ ದುರಂತ ರಾಣಿ ಎಂದು ಕರೆಯಲ್ಪಡುವ ಮೀನಾ ಕುಮಾರಿ  87ನೇ ಹುಟ್ಟುಹಬ್ಬ. ಆಗಸ್ಟ್ 1, 1933 ರಲ್ಲಿ ದಾದರ್ (ಮುಂಬೈ) ನಲ್ಲಿ ಜನಿಸಿದ ಮೀನಾ ಕುಮಾರಿ ನಿಜವಾದ ಹೆಸರು ಮಹಾಜಿ ಬಾನೊ. ಅಂದಹಾಗೆ, 1951ರಲ್ಲಿ ಮೀನಾ ಕುಮಾರಿ ನಿರ್ದೇಶಕ ಕಮಲ್ ಅಮ್ರೋಹಿ ಅವರನ್ನು 'ತಮಾಶಾ' ಚಿತ್ರದ ಸೆಟ್‌ನಲ್ಲಿ ಭೇಟಿಯಾದರು. ಮರು ವರ್ಷವೇ ಈ ಇಬ್ಬರು ವಿವಾಹವಾದರು. ಮದುವೆಯ ನಂತರ, ಕಮಲ್ ಮೀನಾ ಕುಮಾರಿಯನ್ನು ಚಲನಚಿತ್ರಗಳಲ್ಲಿ ನಟಿಸುವುದನ್ನು ತಡೆಯಲಿಲ್ಲ, ಆದರೆ ಅವಳನ್ನು ಅನುಮಾನಿಸಿದರು. ಈ ಕಾರಣದಿಂದಾಗಿ ಅನೇಕ ನಿರ್ಬಂಧಗಳನ್ನು ವಿಧಿಸಲಾಯಿತು.ಕೊನೆ ಕಾಲದಲ್ಲಿ ಆಸ್ಪತ್ರೆ ಬಿಲ್‌ಗೂ ಹಣವಿರಲಿಲ್ಲವಂತೆ ಬಾಲಿವುಡ್‌ನ ಲೆಜೆಂಡರಿ ನಟಿಯ ಬಳಿ.

ಮೀನಾ ಕುಮಾರಿಯ ಮೇಕಪ್ ಕೋಣೆಗೆ ಯಾರೂ ಗಂಡಸರು ಹೋಗುವ ಹಾಗಿಲ್ಲ. ಸಂಜೆ 6.30ರೊಳಗೆ ಅವರದ್ದೇ ಕಾರಲ್ಲಿ ಮನೆಗೆ ಮರಳಬೇಕು ಎಂಬ ಗಂಡನ ಎಲ್ಲಾ  ಕಂಡಿಷನ್‌ಗಳನ್ನು ಮೀನಾ ಒಪ್ಪಿಕೊಂಡು, ಚಿತ್ರಗಳಲ್ಲಿ ನಟಿಸುತ್ತಿದ್ದರು.

ಆದರೂ ಕೆಲವೊಮ್ಮೆ ಮನೆಗೆ ಬರುವುದು ತಡವಾಗುತ್ತಿತ್ತು. ಹೆಂಡತಿ ಮೇಲೆ ಅನುಮಾನದಿಂದ, ಕಮಲ್ ತಮ್ಮ ಸಹಾಯಕ ಬಕರ್ ಅಲಿಯನ್ನು ಮೀನಾಳ ಬೇಹುಗಾರಿಕೆಗೆ ಇಟ್ಟಿದ್ದರು.

ಮಾರ್ಚ್ 1964ರಲ್ಲಿ, 'ಪಿಂಜ್‌ರೆ ಕೆ ಪಂಚಿ' ಚಿತ್ರದ ಮೂಹುರ್ತದ ಸಮಯದಲ್ಲಿ ಗುಲ್ಜಾರ್‌ ಮೀನಾ ಕುಮಾರಿಯ ಮೇಕಪ್ ರೂಮ್‌ಗೆ ಹೋಗಿದ್ದರು. ಈ ಕಾರಣಕ್ಕಾಗಿ ಬಕರ್ ಅಲಿ ಮೀನಾ ಕುಮಾರಿ ಕೆನ್ನೆಗೆ ಹೊಡೆದಿದ್ದರು.

ಮೀನಾ ಮತ್ತು ಕಮಲ್ ಸಂಬಂಧ ಸರಿಯಾಗಿರಲಿಲ್ಲ. ಅವಳು ನನ್ನೊಂದಿಗೆ ಎಲ್ಲ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದಳು. ಒಂದು ದಿನ ಪರಿಸ್ಥಿತಿಯನ್ನು ಕಮಲ್ ತಪ್ಪಾಗಿ ಅರ್ಥೈಸಿಕೊಂಡನು. ನಂತರ ಇಬ್ಬರ ಸಂಬಂಧ ಮತ್ತಷ್ಟು ಬಿಗಡಾಯಿಸಿತು. ' ಎಂದು ಗುಲ್ಜಾರ್ ಸಂದರ್ಶನವೊಂದರಲ್ಲಿ ಹೇಳಿದ್ದರು. ನಂತರ ಇಬ್ಬರೂ 1964ರಲ್ಲಿ ವಿಚ್ಛೇದನ ಪಡೆದರು.

ಪತಿ ಕಮಲ್ ಅಮ್ರೋಹಿಯಿಂದ ಬೇರ್ಪಟ್ಟ ನಂತರ, ಮೀನಾ ಕುಮಾರಿ ಹಾಗೂ ಧರ್ಮೇಂದ್ರರ (ವಿವಾಹಿತ) ಸಾಮೀಪ್ಯ ಬೆಳೆಯಲು ಪ್ರಾರಂಭಿಸಿದರು. ಮೀನಾ ಟಾಪ್ ಸ್ಟಾರ್ ಆಗಿದ್ದರೆ, ಧರ್ಮೇಂದ್ರ ನೆಲೆ ಕಾಣಲು ಹೆಣಗಾಡುತ್ತಿರುವ ನಟ ಆಗ. ಮೀನಾ ಆತನ ಕೆರಿಯರ್‌ ಉತ್ತಮಗೊಳಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದರು.

ಮೀನಾ ಕುಮಾರಿ 1966ರಲ್ಲಿ ಬಿಡುಗಡೆಯಾದ ಫೂಲ್ ಔರ್ ಪತ್ತರ್ ಚಿತ್ರಕ್ಕೆ ಧರ್ಮೇಂದ್ರರನ್ನು ಶಿಫಾರಸು ಮಾಡಿದ್ದರಂತೆ. ನಂತರ  ಚಿತ್ರವು ಆ ವರ್ಷದ ಅತಿದೊಡ್ಡ ಹಿಟ್ ಆಯಿತು. ಧರ್ಮೇಂದ್ರ ಬಾಲಿವುಡ್‌ನಲ್ಲಿ ನೆರೆಯೂರಲು ಸಾಧ್ಯವಾಯಿತು.

ಧರ್ಮೇಂದ್ರ ಮತ್ತು ಮೀನಾ ಕುಮಾರಿ ಸಂಬಂಧ ಸುಮಾರು 3 ವರ್ಷಗಳ ಕಾಲ ಮುಂದುವರಿಯಿತು. ಕಾಲ ಕಳೆದಂತೆ ಧರ್ಮೇಂದ್ರ ಕೂಡ ಕಮಲ್ ಅಮ್ರೋಹಿಯಂತೆ ಮೀನಾಳಿಂದ ದೂರವಾದರು. ಇದರ ನಂತರ, ಧರ್ಮೇಂದ್ರರ ಮೋಸದಿಂದ  ಆಕೆಯ ಹೃದಯ ಚೂರಾಯಿತು, ಮದ್ಯಪಾನಕ್ಕೆ ಅಡಿಕ್ಟ್ ಆದರು.

ಮೀನಾ ಕುಮಾರಿಗೆ ಲಕ್ಷಾಂತರ ಅಭಿಮಾನಿಗಳಿದ್ದರೂ, ಮೀನಾ ಇಷ್ಷಪಟ್ಟವರು ಅವಳ ಪ್ರೀತಿಯನ್ನು ಎಂದಿಗೂ ಅರ್ಥಮಾಡಿಕೊಳ್ಳಲಿಲ್ಲ. ಧರ್ಮೇಂದ್ರರ ದ್ರೋಹದ ನಂತರ ಮೀನಾ ಕುಮಾರಿ ಕುಡುತದ ಚಟ ಅಂಟಿಸಿಕೊಂಡರು. ತನ್ನ ಪರ್ಸ್‌ನಲ್ಲಿ ಸಣ್ಣ ಬಾಟಲಿ ಮದ್ಯವನ್ನೂ ಇಟ್ಟುಕೊಂಡಿರುತ್ತಿದ್ದರು. ಮೀನಾ ಕುಮಾರಿ ಆರೋಗ್ಯವು ಹದಗೆಟ್ಟು ಲೀವರ್‌ ಸಿರೋಸಿಸ್‌ ಆಯಿತು.

ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದರೂ ಜೀವಂತ ದಂತಕಥೆಯ ನಟಿ ಸ್ಥಾನಮಾನವನ್ನು ಗಳಿಸಿದರೂ, ಅವರ ಕೈಯಲ್ಲಿ ಕೊನೆಯ ಕ್ಷಣದಲ್ಲಿ ಚಿಕಿತ್ಸೆಗೆ ಹಣವೂ ಉಳಿದಿರಲಿಲ್ಲ.  ಮಾರ್ಚ್ 31, 1972 ರಂದು ನಿಧನರಾದಾಗ, ಆಸ್ಪತ್ರೆಯ ಬಿಲ್‌ ಹೇಗೆ ನೀಡುವುದು ಕಷ್ಟವಾಗಿತ್ತು.

ಮೀನಾ ಕುಮಾರಿಯ ಅಭಿಮಾನಿಯೊಬ್ಬರು ನಂತರ ಚಿಕಿತ್ಸೆಯ ಬಿಲ್‌ ಪಾವತಿಸಿದ್ದರು. ವಿಚ್ಛೇದಿತ ಗಂಡ ಕಮಲ್ ಅಮ್ರೋಹಿ ನೋಡಲು ಆಸ್ಪತ್ರೆಗೆ ಸಹ ಬರಲಿಲ್ಲ. ಮೀನಾ ಕುಮಾರಿ ಅನಾರೋಗ್ಯದ ಸ್ಥಿತಿಯಲ್ಲಿಯೂ ತನ್ನ ಅಪೂರ್ಣ ಚಿತ್ರ 'ಪಕಿಜಾ' ಚಿತ್ರದಲ್ಲಿ ಕೆಲಸ ಮಾಡಿದರು.

'ಪಕಿಜಾ' ಚಿತ್ರ 4 ಫೆಬ್ರವರಿ 1972 ರಂದು ಬಿಡುಗಡೆಯಾಯಿತು. ಮಾರ್ಚ್ 31, 1972 ರಂದು ಮೀನಾ ಕುಮಾರಿ ನಿಧನರಾದರು. ವಿಶೇಷವೆಂದರೆ, ಬಿಡುಗಡೆಯಾದಾಗ  'ಪಕಿಜಾ' ಫ್ಲಾಪ್ ಎಂದು ಪರಿಗಣಿಸಲಾಗಿತ್ತು, ಆದರೆ ಮೀನಾ ಕುಮಾರಿ ನಿಧನದ ನಂತರ ಚಿತ್ರ ಸೂಪರ್ ಹಿಟ್ ಆಯಿತು.

ಮೀನಾ ಕುಮಾರಿ ಅವರ 'ಸಾಹಿಬ್, ಬಿವಿ ಔರ್ ಗುಲಾಮ್' (1962) ಚಿತ್ರ ಕೂಡ ಯಶಸ್ವಿಯಾಗಿತ್ತು. ಈ ಚಿತ್ರದಲ್ಲಿ ಮೀನಾ ಕುಮಾರಿ ಕಿರಿಯ ಸೊಸೆ ಪಾತ್ರಕ್ಕೆ ಪುನರ್ಜೀವ ನೀಡಿದ್ದರು.

'ಪರಿಣಿತಾ' (1953), 'ಡೈರಾ' (1953), 'ಏಕ್ ರಾಸ್ತಾ' (1956), 'ಶಾರದಾ' 1957), 'ದಿಲ್ ಅಪ್ನಾ ಔರ್ ಪ್ರೀತ್ ಪರಾಯೆ' (1960), 'ದಿಲ್ ಏಕ್ ಮಂದಿರ' (1963) ), 'ಕಾಜಲ್' (1965) ಮತ್ತು 'ಫೂಲ್ ಪತ್ತರ್' (1966)   ಮೀನಾ ಕುಮಾರಿಯ ಹಿಟ್‌ ಚಿತ್ರಗಳಲ್ಲಿ ಕೆಲವು.

loader