ಅಪ್ಪ ಅಮ್ಮ ಬೇರೆಯಾದಾಗ ಈ ನಟಿಗೆ ಕೇವಲ ಒಂಬತ್ತು ವರ್ಷವಷ್ಟೇ!
ಸೈಫ್ ಅಲಿ ಖಾನ್ ಮತ್ತು ಅಮೃತ ಸಿಂಗ್ ಪುತ್ರಿ ಸಾರಾ ಅಲಿ ಖಾನ್ ಇನ್ಸ್ಟಾಗ್ರಾಮ್‌ನಲ್ಲಿ ಕೆಲವೊಮ್ಮೆ ಬಾಲ್ಯದ ಫೋಟೋಗಳನ್ನು ಹಂಚಿಕೊಳ್ಳುತ್ತಾಳೆ. ಇತ್ತೀಚೆಗೆ, ತಾಯಿ ಮತ್ತು ಸಹೋದರನ ಬಾಲ್ಯದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾಳೆ ಸಾರಾ. ಫೋಟೋ ಹಂಚಿಕೊಳ್ಳುವ ಮೂಲಕ ಸಾರಾ ತನ್ನ ತಾಯಿಗೆ ಕವಿತೆ ಬರೆದಿದ್ದಾರೆ. ಸಾರಾ ಕೇವಲ 9 ವರ್ಷದವಳಿದ್ದಾಗ ಸೈಫ್ ಆಲಿ ಖಾನ್ ಅಮೃತಾ ಸಿಂಗ್ ಡಿವೋರ್ಸ್ ಪಡೆದರು. ನಂತರದಿಂದ ಸಾರಾ ಹಾಗೂ ಇಬ್ರಾಹಿಂ ತಾಯಿ ಅಮೃತಾಳ ಜೊತೆಗೆ ಇದ್ದಾರೆ.
ಸಾರಾಳ ಈ ಫೋಟೋಗೆ ಅಭಿಮಾನಿಗಳು ಸಾಕಷ್ಟು ಪ್ರತಿಕ್ರಿಯಿಸುತ್ತಿದ್ದು ಬಾರಿ ಲೈಕ್ ಸಹ ಪಡೆದಿದೆ.
ಇತ್ತೀಚೆಗೆ, ಸಾರಾ ತನ್ನ ತಂದೆ ಸೈಫ್ ಅಲಿ ಖಾನ್ ಜೊತೆ ಫೋಟೋ ಪೋಸ್ಟ್ ಐ ಲವ್ ಯು ಅಬ್ಬಾ ಎಂದು ಬರೆದುಕೊಂಡಿದ್ದಳು.
ಸಾರಾ ತನ್ನ ಸಂದರ್ಶನವೊಂದರಲ್ಲಿ ನನ್ನ ತಾಯಿ ನನ್ನನ್ನು ಬಾಲ್ಯದಿಂದಲೂ ಬೆಳೆಸಿದ್ದಾಳೆ. ಸಹೋದರ ಇಬ್ರಾಹಿಂ ಹುಟ್ಟಿದ ನಂತರ ತಾಯಿ ವೃತ್ತಿಜೀವನದತ್ತ ಗಮನಹರಿಸಲಿಲ್ಲ ಎಂದು ಸಾರಾ ಹೇಳಿದ್ದಳು.
ಅಮೃತಾ ಮಕ್ಕಳನ್ನು ಬೆಳೆಸುವಲ್ಲಿ ತನ್ನ ಪೂರ್ಣ ಸಮಯವನ್ನು ಕಳೆದರು ಮತ್ತು ಅವರಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದರು. ಮಕ್ಕಳ ಆರೈಕೆಗಾಗಿ ಅಮೃತಾ ತನ್ನ ಕೆರಿಯರ್ ಬಿಟ್ಟರು.
ಸಾರಾ 9 ವರ್ಷದವಳಿದ್ದಾಗ ಅಮೃತ ಸಿಂಗ್ ಮತ್ತು ಸೈಫ್ ಅಲಿ ಖಾನ್ ಪರಸ್ಪರ ಬೇರ್ಪಟ್ಟರು.
ಕುಟುಂಬವು ಮದುವೆಗೆ ವಿರುದ್ಧವಾಗಿದ್ದ ಕಾರಣ ಸೈಫ್ ಅಲಿ ಖಾನ್ ತನಗಿಂತ 13 ವರ್ಷ ಹಿರಿಯ ಅಮೃತ ಸಿಂಗ್ ಅವರನ್ನು 1991 ರಲ್ಲಿ ರಹಸ್ಯವಾಗಿ ವಿವಾಹವಾದರು.
'ಪೋಷಕರು ಸಂತೋಷವಾಗಿರದೆ ಒಂದೇ ಮನೆಯಲ್ಲಿರುವುದಕ್ಕಿಂತ, ಅವರು ಪ್ರತ್ಯೇಕ ಮನೆಯಲ್ಲಿ ಉಳಿದು ಸಂತೋಷವಾಗಿರುವುದು ಒಳ್ಳೆಯದು. ನನಗೆ ಯಾವುದಕ್ಕೂ ಕೊರತೆಯಿಲ್ಲ. ಪಪ್ಪಾನನ್ನು ಭೇಟಿಯಾದಾಗ, ನಾವು ಅವರೊಂದಿಗೆ ತುಂಬಾ ಸಂತೋಷಪಡುತ್ತೇವೆ' ಎಂದು ಇಂಟರ್‌ವ್ಯೂವ್ ಒಂದರಲ್ಲಿ ಹೇಳಿದ್ದ ಸಿಂಬಾ ನಟಿ.
ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಹಿಸ್ಟರಿ ಮತ್ತು ಪೊಲಿಟಿಕಲ್‌ಸೈನ್ಸ್‌ನಲ್ಲಿ ಪದವಿ ಪಡೆದಿದ್ದಾಳೆ
2018 ರಲ್ಲಿ 'ಕೇದಾರನಾಥ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಸಾರಾಳ ಅವರ ಮುಂಬರುವ ಚಿತ್ರ ಕೂಲಿ ನಂ.ಒನ್ ಮತ್ತು ಅತರಂಗಿ.