ಸೊಸೆ ಮೀರಾ ಬಗ್ಗೆ ಶಾಹಿದ್ ತಾಯಿ ನೀಲಿಮಾ ಹೇಳೋದೇನು?
ಬಾಲಿವುಡ್‌ನ ಯಂಗ್ ಹಾಗೂ ಸ್ಟೈಲ್ಟಿಶ್ ಕಪಲ್‌ಗಳ ಪಟ್ಟಿಯಲ್ಲಿ ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್ ಒಬ್ಬರು. ಇವರ ನಡುವಿನ ವಯಸ್ಸಿನ ಅಂತರದ ಕಾರಣದಿಂದ ತುಂಬಾ ಟ್ರೋಲ್‌ಗೆ ಗುರಿಯಾಗಿತ್ತು ಈ ಜೋಡಿ. ಆದರೆ ಈಗ ಶಾಹಿದ್ ಮೀರಾರ ಪ್ರೀತಿಯಿಂದ ಫ್ಯಾನ್ಸ್ ಮನಗೆದ್ದಿದ್ದಾರೆ. ಸಂದರ್ಶನವೊಂದರಲ್ಲಿ ಶಾಹಿದ್ ತಾಯಿ ನೀಲಿಮಾ ಅಜೀಮ್ ಮೀರಾ ಬಗ್ಗೆ ಹೇಳಿದ ಮಾತುಗಳು ವೈರಲ್ ಆಗಿದೆ. ಸೊಸೆಯ ಮೇಲೆ ನೀಲಿಮಾರ ಅಭಿಪ್ರಾಯ ಇಲ್ಲಿದೆ.
ಬಾಲಿವುಡ್‌ನ ಯಂಗ್ ಹಾಗೂ ಸ್ಟೈಲ್ಟಿಶ್ ಕಪಲ್‌ಗಳ ಪಟ್ಟಿಯಲ್ಲಿ ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್ ಒಬ್ಬರು.
ಶಾಹಿದ್ ಮೀರಾರ ತಮ್ಮ ಪ್ರೀತಿಯಿಂದ ಫ್ಯಾನ್ಸ್ ಮನ ಗೆದ್ದಿದ್ದಾರೆ.
ಸಂದರ್ಶನವೊಂದರಲ್ಲಿ, ನಟಿ ನೀಲಿಮಾ ಅಜೀಮ್ ಮಗ ಶಾಹಿದ್ ಕಪೂರ್ ಪತ್ನಿ ಮಿರಾ ರಜಪೂತ್ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮೀರಾಳ ಕಾರಣದಿಂದ ತನ್ನ ಮಗ ಶಾಹಿದ್ ಕಪೂರ್ ತುಂಬಾ ಸಂತೋಷವಾಗಿದ್ದಾನೆ ಎಂದು ಹೇಳುವ ಮೂಲಕ ಮಾತು ಪ್ರಾರಂಭಿಸಿದರು ನೀಲಿಮಾ.
ಅತ್ತೆ ನೀಲಿಮಾ ಮೀರಾಳಿಗೆ ಅಭಿನಂದನೆ ಸಲ್ಲಿಸಿ, ಅವಳು ಇಡೀ ಕುಟುಂಬವನ್ನು ಒಟ್ಟಿಗೆ ಸೇರಿಸಿದ್ದಾಳೆಂದರು. ಚಿಕ್ಕ ವಯಸ್ಸಿನಲ್ಲಿ, ಮೀರಾ ಯಶಸ್ವಿ ಸ್ಟಾರ್ ಜೊತೆ ತನ್ನ ಮದುವೆಯನ್ನು ಮತ್ತು ಮಾಧ್ಯಮಗಳ ಗಮನವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ ಎಂದು ಸೊಸೆಯನ್ನು ಹಾಡಿ ಹೊಗಳಿದ್ದಾರೆ ಶಾಹೀದ್ ಅಮ್ಮ.
'ಅವಳು (ಮೀರಾ) ನನಗೆ ತಿಳಿದಿರುವ ಅತ್ಯಂತ ನಾನ್‌ಡ್ರಾಮ್ಯಾಟಿಕ್ ವ್ಯಕ್ತಿ. ನಾವೆಲ್ಲ ನಟರು ಅತ್ಯಂತ ಡ್ರಾಮ್ಯಾಟಿಕ್. ನನಗೆ ಮಗಳಿಲ್ಲ, ಆದ್ದರಿಂದ ಮೀರಾ ನನ್ನ ಮಗಳು. ಅವಳು ಇಡೀ ಕುಟುಂಬವನ್ನು ಒಟ್ಟಿಗೆ ತಂದಿದ್ದಾಳೆ. ಶಾಹಿದ್ ಮತ್ತು ನಮ್ಮೆಲ್ಲರಿಗೂ ಅವಳು ನೀಡುವ ಪ್ರೀತಿ ಮತ್ತು ಸಂತೋಷ ಅದ್ಭುತ,' ಎಂದು ಪಿಂಕ್ವಿಲ್ಲಾ ಜೊತೆ ಸಂದರ್ಶನರಲ್ಲಿ ಮಾತನಾಡಿದ ನೀಲಿಮಾ ಹೇಳಿದರು.
ಶಾಹಿದ್ ಆರಂಭದಲ್ಲಿ ತುಂಬಾ ನಾಚಿಕೆಪಡುತ್ತಿದ್ದ ಮತ್ತು ನಾನು ಅವರ ಸಂಬಂಧಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇನೆ ಎಂದು ನೋಡಬೇಕೆಂದು ಬಯಸಿದ್ದ. ಹಾಗಾಗಿ ನಾನು ಅವಳನ್ನು ಭೇಟಿಯಾದಾಗ, ಅವಳು ತುಂಬಾ ಕೇರ್‌ಫ್ರೀ, ಸ್ವೀಟ್ ಹಾಗೂ ಯಂಗ್ ಎಂದು ನಾನು ಭಾವಿಸಿದೆ.
ಆದರೆ ನಂತರ, ಯಶಸ್ವಿ ಸ್ಟಾರ್ ಪತ್ನಿಯಾಗಿ ನಿಭಾಯಿಸಿದ ರೀತಿ ನಮಗೆ ಎಲ್ಲಾ ಆಶ್ಚರ್ಯ ತಂದಿದೆ. ಎಲ್ಲರ ಮುಂದೆ ಸ್ವತಃ ಅವಳನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾಳೆ. ತುಂಬಾ ಮುಖ್ಯವಾಗಿ ಅವಳು ಶಾಹಿದ್‌ನನ್ನು ತುಂಬಾ ಸಂತೋಷಪಡಿಸಿದ್ದಾಳೆ ಮತ್ತು ಇಶಾನ್ ಮತ್ತು ನನ್ನ ಕುಟುಂಬವು ಈಗ ಪೂರ್ಣಗೊಂಡಿದೆ ಎಂದು ಸೊಸೆಯ ಮೆಚ್ಚುಗೆ ಮಾತಾನಾಡಿದರು.
ಶಾಹಿದ್ ಮತ್ತು ಮೀರಾ ಜುಲೈ 7, 2015 ರಂದು ದೆಹಲಿಯಲ್ಲಿ ವಿವಾಹವಾದರು.
ಈ ಕಪಲ್‌ಗೆ ಮಿಶಾ ಮತ್ತು ಜೈನ್ ಕಪೂರ್ ಎಂಬ ಇಬ್ಬರು ಮಕ್ಕಳಿದ್ದಾರೆ.