OTTಯಲ್ಲಿ ಈ ವಾರ ಸಾಲು ಸಾಲು ಸಿನಿಮಾಗಳ ಬಿಡುಗಡೆ, ಛಾವಾ ಇಂದೇ ರಿಲೀಸ್
ಈ ವಾರದ OTT ಆಕರ್ಷಕ ಥ್ರಿಲ್ಲರ್‌ಗಳು, ಹಾರರ್ ಮತ್ತು ವೈವಿಧ್ಯಮಯ ಮಿಶ್ರಣದ ಚಿತ್ರಗಳನ್ನು ಹೊತ್ತು ಬರುತ್ತಿದೆ. Netflix, Prime Video, SonyLIV, ಮತ್ತು JioHotstar ನಂತಹ ಪ್ರಮುಖ ವೇದಿಕೆಗಳಲ್ಲಿ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಚಿತ್ರಗಳ ವಿವರ ಇಲ್ಲಿದೆ.

ವಿಕ್ಕಿ ಕೌಶಲ್,ರಶ್ಮಿಕಾ ಮಂದಣ್ಣ ಅಭಿನಯದ ಐತಿಹಾಸಿಕ-ಆಕ್ಷನ್ ಸಿನಿಮಾ ಚಾವಾ OTTಯಲ್ಲಿ ಬಿಡುಗಡೆಯಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಇದು ಲಭ್ಯವಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರದಲ್ಲಿ ಮರಾಠಾ ಯೋಧ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಮತ್ತು ರಶ್ಮಿಕಾ ಮಂದಣ್ಣ ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ ಈ ಚಿತ್ರ ಇಲ್ಲಿವರೆಗೆ ಸರಿ ಸುಮಾರು 600 ಕೋಟಿ ರೂ ಕಲೆಕ್ಷನ್ ಮಾಡಿದೆ. ಚಿತ್ರ ಬಿಡುಗಡೆಯಾಗಿ 60 ದಿನಗಳಾಗಿದೆ. ಈ ಚಿತ್ರದಲ್ಲಿ ಅಕ್ಷಯ್ ಖನ್ನಾ ಚಕ್ರವರ್ತಿ ಔರಂಗಜೇಬನ ಪಾತ್ರ ನಿರ್ವಹಿಸಿದ್ದಾರೆ. ಇದು ಶಿವಾಜಿ ಸಾವಂತ್ ಅವರ ಕಾದಂಬರಿಯನ್ನು ಆಧರಿಸಿದ ಚಿತ್ರವಾಗಿದೆ.
ಛೋರಿ 2 - ಪ್ರೈಮ್ ವಿಡಿಯೋ, ಏಪ್ರಿಲ್ 11
ನುಶ್ರತ್ ಭರುಚ್ಚಾ ಅಭಿನಯದ ಛೋರಿ 2 ಏಪ್ರಿಲ್ 11 ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ವಿಶಾಲ್ ಫ್ಯೂರಿಯಾ ನಿರ್ದೇಶಿಸಿದ್ದಾರೆ. ಮಗಳನ್ನು ದುಷ್ಟ ಪಂಥದಿಂದ ರಕ್ಷಿಸಬೇಕು ಮತ್ತು ಆಳವಾಗಿ ಬೇರೂರಿರುವ ಮೂಢನಂಬಿಕೆಗಳ ಸುತ್ತ ಸುತ್ತುವ ಕಥೆ ಇದಾಗಿದೆ.
ಪ್ರವಿಂಕೂಡು ಶಪ್ಪು: ಸೋನಿಲೈವ್-ಏಪ್ರಿಲ್ 11
ಈ ಮನಮುಟ್ಟುವ ಮಲಯಾಳಂ ಥ್ರಿಲ್ಲರ್ ಚಿತ್ರದಲ್ಲಿ, ದೂರದ ಹಳ್ಳಿಯೊಂದರಲ್ಲಿ ನಡೆಯುವ ಕೊಲೆಯ ರಹಸ್ಯವನ್ನು ಪರಿಶೀಲಿಸುವ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಬೆಸಿಲ್ ಜೋಸೆಫ್ ನಾಯಕನಾಗಿ ನಟಿಸಿದ್ದಾರೆ. ಗ್ರಾಮೀಣ ಸತ್ಯಾಸತ್ಯತೆಯೊಂದಿಗೆ ಸಸ್ಪೆನ್ಸ್ ಅನ್ನು ಬೆರೆಸಿರುವ ಈ ಚಿತ್ರವು ತನ್ನ ಮನಮುಟ್ಟುವ ಅಪರಾಧ ನಿರೂಪಣೆಗಾಗಿ ಗಲ್ಲಾಪೆಟ್ಟಿಗೆಯಲ್ಲಿ ಪ್ರಶಂಸೆ ಗಳಿಸಿದೆ.
ಪರಾಕ್ರಮ ಮೆರೆದ ವಿಕ್ಕಿ ಕೌಶಲ್-ರಶ್ಮಿಕಾ ಜೋಡಿ, ಬಾಲಿವುಡ್‌ಗೆ ಭಾರೀ ಸಕ್ಸಸ್ ಕೊಟ್ರು!..ಅಲೆಲೇ...
ಕಿಂಗ್‌ಸ್ಟನ್: ZEE5 ಏಪ್ರಿಲ್ 13
ತೂವಥೋರ್ ಎಂಬ ಭಯಾನಕ ಕರಾವಳಿ ಪಟ್ಟಣದಲ್ಲಿ ನಡೆಯುವ ಈ ತಮಿಳು ಫ್ಯಾಂಟಸಿ-ಹಾರರ್ ಸಾಹಸ ಚಿತ್ರ. ಸಮುದ್ರ ಕಳ್ಳಸಾಗಣೆದಾರ ಕಿಂಗ್‌ಸ್ಟನ್ ಮಾರಕ ಶಾಪದೊಂದಿಗೆ ಹೋರಾಡುವ ಚಿತ್ರವಾಗಿದೆ. ಹಾರರ್ ಮತ್ತು ಆಳವಾದ ಸಮುದ್ರ ಸಾಹಸ ಪ್ರಿಯರಿಗೆ ಇದು ರೋಮಾಂಚಕ ಚಿತ್ರವಾಗಿದೆ.
ಸಿಕಂದರ್ ಬಿಟ್ಟಾಕಿ! ಛಾವಾ ದಾಖಲೆ ಮುರಿದು ಎಷ್ಟು ಕೋಟಿ ಗಳಿಸಿತು ಗೊತ್ತಾ ಈ ಸೌತ್ ಸಿನಿಮಾ?
ಪೈಂಕಿಲಿ - ಏಪ್ರಿಲ್ 11, ಮನೋರಮಾ ಮ್ಯಾಕ್ಸ್
ಮಲಯಾಳಂ ರೋಮ್ಯಾಂಟಿಕ್ ಹಾಸ್ಯ ಚಿತ್ರವಾಗಿದ್ದು, ಮಾನಸಿಕ ಅಸ್ವಸ್ಥತೆಯನ್ನು ನಟಿಸುವ ಪುರುಷ ಮತ್ತು ಫಿಕ್ಸ್ ಆಗಿರುವ ಮದುವೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಮಹಿಳೆಯ ವಿಲಕ್ಷಣ ಕಥೆಯನ್ನು ಹೊಂದಿದೆ.
court
ಕೋರ್ಟ್ - ರಾಜ್ಯ vs. ಎ ನೋಬಡಿ (ತೆಲುಗು) ಏಪ್ರಿಲ್ 11, ನೆಟ್‌ಫ್ಲಿಕ್ಸ್
ಹದಿಹರೆಯದವನನ್ನು ಸುಳ್ಳು ಆರೋಪಿಯನ್ನಾಗಿ ಮಾಡಿದ್ದನ್ನು ವಿರೋಧಿಸಿ ಆತನನ್ನು ಕಾನೂನಿನ ಹೋರಾಟದಲ್ಲಿ ಬಡಿಸಿಕೊಂಡು ಬರುವ ಆದರ್ಶವಾದಿ ವಕೀಲರ ಬಗ್ಗೆಗಿನ ಕಥೆಯಾಗಿದೆ. ಪ್ರಿಯದರ್ಶಿ ಪುಲಿಕೊಂಡ ಅವರ ಅಭಿನಯದ ಚಿತ್ರ ಇದು. ನಿರ್ದೇಶಕ ರಾಮ್ ಜಗದೀಶ್ ಚೊಚ್ಚಲ ಚಿತ್ರವಿದು.