- Home
- Entertainment
- Cine World
- ರವಿಶಂಕರ್ ಗುರೂಜಿ ಬಯೋಪಿಕ್‌ನಲ್ಲಿ ನಟಿಸಲು ವಿಕ್ರಾಂತ್ ಮಾಸಿ ತಯಾರಿ: ಚಿತ್ರದ ಹೆಸರೇನು?
ರವಿಶಂಕರ್ ಗುರೂಜಿ ಬಯೋಪಿಕ್‌ನಲ್ಲಿ ನಟಿಸಲು ವಿಕ್ರಾಂತ್ ಮಾಸಿ ತಯಾರಿ: ಚಿತ್ರದ ಹೆಸರೇನು?
ಕೊಲಂಬಿಯಾದ ಶೀತಲ ಸಮರಕ್ಕೆ ಪೂರ್ಣ ವಿರಾಮ ಹಾಡಿದ ಗುರೂಜಿ ಅವರ ಬದುಕಿನ ಘಟನೆ ಮುಖ್ಯ ಕಥಾನಕವಾಗಿ ರವಿಶಂಕರ ಗುರೂಜಿ ಅವರ ಬಯೋಪಿಕ್ ‘ವೈಟ್’ ಮೂಡಿಬರಲಿದೆ.

ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಬಯೋಪಿಕ್ ‘ವೈಟ್’ ಸೆಟ್ಟೇರಲು ಸಿದ್ಧವಾಗಿದೆ. ಇದರಲ್ಲಿ ಬಾಲಿವುಡ್ ನಟ ವಿಕ್ರಾಂತ್ ಮಾಸಿ ಅವರು ರವಿಶಂಕರ ಗುರೂಜಿ ಪಾತ್ರ ನಿರ್ವಹಿಸಲಿದ್ದು, ಆ ಪಾತ್ರದಲ್ಲಿ ನಟಿಸಲು ಸೂಕ್ತ ತಯಾರಿ ನಡೆಸುತ್ತಿದ್ದಾರೆ.
ಕೊಲಂಬಿಯಾದ ಶೀತಲ ಸಮರಕ್ಕೆ ಪೂರ್ಣ ವಿರಾಮ ಹಾಡಿದ ಗುರೂಜಿ ಅವರ ಬದುಕಿನ ಘಟನೆ ಮುಖ್ಯ ಕಥಾನಕವಾಗಿ ಮೂಡಿಬರಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಕ್ರಾಂತ್ ಮಾಸಿ, ಇದು ಅವರ ಜೀವನ ಮತ್ತು ವಿಶ್ವ ಇತಿಹಾಸದ ಒಂದು ಪ್ರಮುಖ ಭಾಗ.
ಕೊಲಂಬಿಯಾದಲ್ಲಿ ಮತ್ತು ವಿಶ್ವ ಶಾಂತಿಯನ್ನು ಪುನಃಸ್ಥಾಪಿಸುವಲ್ಲಿ ಅವರ ಕೊಡುಗೆಯ ಬಗ್ಗೆ ಭಾರತದಲ್ಲಿ ಅನೇಕರಿಗೆ ತಿಳಿದಿಲ್ಲ ಎಂಬುದು ದುರದೃಷ್ಟಕರ. ಈ ಚಿತ್ರದ ಮೂಲಕ ಆ ವಿಷಯಗಳನ್ನು ಹೇಳುತ್ತಿದ್ದೇವೆ.
ಅವರ ಪಾತ್ರವನ್ನು ಮಾಡುತ್ತಿರುವುದೇ ಒಂದು ಗೌರವ. ನಾನು ಅವರಂತಾಗಲು ಸಾಧ್ಯವೇ ಇಲ್ಲ. ಆದರೆ ನಟನಾಗಿ ಅವರನ್ನು ಜೀವಿಸಲು ಪ್ರಯತ್ನಿಸುತ್ತೇನೆ. ಈ ಪಾತ್ರ ಮಾಡಲು ಹೆಮ್ಮೆ ಇದೆ ಎಂದಿದ್ದಾರೆ.
ಬಾಲಿವುಡ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್ ನಿರ್ಮಾಪಕರಾದ ಮಹಾವೀರ್ ಜೈನ್ ಹಾಗೂ ಸಿದ್ಧಾರ್ಥ್ ಆನಂದ್ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಆಗಸ್ಟ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

