ಬಾಲಿವುಡ್ ಪ್ರವೇಶ... ಕೊನೆಗೂ ಅಂತರಾಳ ತಿಳಿಸಿದ ಸಿದ್ಧಾರ್ಥ್ ಮಲ್ಯ
ಲಂಡನ್(ಸೆ. 27) ಮದ್ಯದ ದೊರೆ ಎಂದೇ ಹೆಸರು ಪಡೆದುಕೊಂಡಿದ್ದ ವಿಜಯ್ ಮಲ್ಯ(Vijay Mallya) ಇದೀಗ ಆರ್ಥಿಕ ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದಾರೆ. ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ ಮಲ್ಯ(Siddharth Mallya) ಬಾಲಿವುಡ್ (Bollywood) ಗೆ ಪ್ರವೇಶ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆ ಕುರಿತ ಒಂದು ಅಪ್ ಡೇಟ್ ಇಲ್ಲಿದೆ.
ಮಾಧ್ಯಮದೊಂದಿಗೆ ಮಾತನಾಡುತ್ತ ಸಿದ್ಧಾರ್ಥ ತಾನು ಬಾಲಿವುಡ್ ಗೆ ಸಲ್ಲುವ ವ್ಯಕ್ತಿ ಅಲ್ಲ ಎಂದಿದ್ದಾರೆ. ನಾನು ಟಿಪಿಕಲ್ ಬಾಲಿವುಡ್ ಹೀರೋ ಆಗಲು ಸಾಧ್ಯವಿಲ್ಲ ಎಂದಿದ್ದಾರೆ.
ನಾನು ಯಾವುದಾದರೂ ಒಂದು ಕ್ಷೇತ್ರ ಆಯ್ಕೆ ಮಾಡಿಕೊಂಡರೆ ಅದಕ್ಕೆ ಸಂಪೂರ್ಣ ನ್ಯಾಯ ನೀಡಬೇಕು. ನನ್ನಿಂದ ಯಾವ ಕೆಲಸ ಸಾಧ್ಯವೋ ಅದನ್ನೇ ಮಾಡುತ್ತೇನೆ ಎಂದರು.
ಅಲ್ಲದೇ ನಾನು ಪಾಶ್ಚಿಮಾತ್ಯ ದೇಶಗಳಲ್ಲಿಯೇ ಬೆಳೆದವನು. ಭಾರತೀಯ ವೀಕ್ಷಕರು ನನ್ನನ್ನು ಇಷ್ಟ ಪಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಹಾಗಾದರೆ ಹಾಲಿವುಡ್ ಪ್ರವೇಶ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ನಾನು ನಟನೆ ವಿಚಾರದಲ್ಲಿ ಯಾವುದೋ ಪೋಕಸ್ ಮಾಡುತ್ತಿಲ್ಲ ಮುಂದಕ್ಕೆ ಕಾದು ನೋಡಬೇಕು ಎಂದಿದ್ದಾರೆ.
ಸಿದ್ಧಾರ್ಥ ಇದೀಗ ಒಬ್ಬ ಬರಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಕುರಿತು ಬರೆದುಕೊಂಡಿದ್ದಾರೆ, ನಾನು ನನ್ನ ಇಮೇಜ್ ಬಗ್ಗೆ ತಲೆ ಕೆಡಿಸಿಕೊಂಡಿಯೂ ಇಲ್ಲ ಎಂದು ಹೇಳಿದ್ದಾರೆ.
Brahman Naman ಎನ್ನುವ ವೆಬ್ ಮೂವಿಯಲ್ಲಿಯೂ ಮಲ್ಯ ಕಾಣಿಸಿಕೊಂಡಿದ್ದರು. ಕೆಲವು ಡಾಕ್ಯುಮೆಂಟರಿಯಲ್ಲಿಯೂ ಪಾತ್ರ ನಿರ್ವಹಣೆ ಮಾಡಿದ್ದರು. ಆದರೆ ಈಗ ಬಾಲಿವುಡ್ ಪ್ರವೇಶದ ಬಗ್ಗೆ ಸಾಧ್ಯತೆ ಇಲ್ಲ ಎಂದು ತಿಳಿಸಿದ್ದಾರೆ.
ನಾನು ಹಣ ಗಳಿಕೆಯ ಉದ್ದೇಶದಿಂದ ಪುಸ್ತಕ ಬರೆದಿಲ್ಲ. ಜೀವನದ ಸತ್ಯಗಳು ಏನು ಇರುತ್ತವೆ ಎಂಬುದನ್ನು ತಿಳಿಸುವುದಕ್ಕೆ ಈ ಪುಸ್ತಕ ಬರೆದೆ ಎಂಬ ವಿಚಾರವನ್ನು ಮಲ್ಯ ತಿಳಿಸಿದ್ದಾರೆ.
ಮದ್ಯದ ದೊರೆ ಎಂದೇ ಹೆಸರು ಪಡೆದುಕೊಂಡಿದ್ದ ವಿಜಯ್ ಮಲ್ಯ(Vijay Mallya) ಇದೀಗ ಆರ್ಥಿಕ ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದಾರೆ. ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ ಮಲ್ಯ(Siddharth Mallya) ಬಾಲಿವುಡ್ (Bollywood) ಗೆ ಪ್ರವೇಶ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆ ಕುರಿತ ಒಂದು ಅಪ್ ಡೇಟ್ ಇಲ್ಲಿದೆ.