ವಿಜಯ್ ಮತ್ತು ಸೂರ್ಯ ತಿರಸ್ಕರಿಸಿದ ಸೂಪರ್ ಹಿಟ್ ಸಿನಿಮಾ; ಯಾರ ಪಾಲಾಯ್ತು ಈ ಚಿತ್ರ?
ನಟ ವಿಜಯ್ ಮತ್ತು ಸೂರ್ಯ ತಿರಸ್ಕರಿಸಿದ ಸೂಪರ್ ಹಿಟ್ ಚಿತ್ರದ ಬಗ್ಗೆ ನಿರ್ದೇಶಕರು ಹೇಳಿರುವ ಮಾಹಿತಿ ಸದ್ಯ ವೈರಲ್ ಆಗಿದೆ.

ಸಂಡಕೋಳಿ:
ನಿರ್ದೇಶಕ ಲಿಂಗುಸಾಮಿ ನಿರ್ದೇಶನದಲ್ಲಿ 2005ರಲ್ಲಿ ಬಿಡುಗಡೆಯಾದ ಚಿತ್ರ 'ಸಂಡಕೋಳಿ'. ಈ ಚಿತ್ರ ನಟ ವಿಶಾಲ್ ವೃತ್ತಿ ಜೀವನದಲ್ಲಿ ದೊಡ್ಡ ತಿರುವು ನೀಡಿತು. ವಿಶಾಲ್ ಅದ್ಭುತ ಆಕ್ಷನ್ ಪಾತ್ರದಲ್ಲಿ ಮಿಂಚಿದ್ದರು, ಈ ಚಿತ್ರದಲ್ಲಿ ವಿಶಾಲ್ ಜೊತೆ ಮೀರಾ ಜಾಸ್ಮಿನ್ ನಾಯಕಿಯಾಗಿ ನಟಿಸಿದ್ದರು.
ಲಿಂಗುಸಾಮಿ ಹೇಳಿದ ಮಾಹಿತಿ:
ರಾಜ್‌ಕಿರಣ್, ಲಾಲ್, ಸುಮನ್ ಶೆಟ್ಟಿ, ಕಂಜಾ ಕರುಪ್ಪು, ತಲೈವಾಸಲ್ ವಿಜಯ್, ಷಣ್ಮುಗರಾಜನ್ ಸೇರಿದಂತೆ ಹಲವು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ವಿಶಾಲ್ ಅವರ ಸಹೋದರ ವಿಕ್ರಮ್ ಕೃಷ್ಣ ಜಿ ಕೆ ಫಿಲ್ಮ್ ಕಾರ್ಪೊರೇಷನ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ವಿಮರ್ಶಾತ್ಮಕವಾಗಿ ಮತ್ತು ಆರ್ಥಿಕವಾಗಿ ದೊಡ್ಡ ಯಶಸ್ಸನ್ನು ಗಳಿಸಿದ ಈ ಚಿತ್ರದ ಬಗ್ಗೆ ನಿರ್ದೇಶಕ ಲಿಂಗುಸಾಮಿ ಹೇಳಿರುವ ಮಾಹಿತಿ ಈಗ ವೈರಲ್ ಆಗಿದೆ.
ತಳಪತಿ ವಿಜಯ್:
ಈ ಚಿತ್ರದ ಕಥೆ ಬರೆದು ಮುಗಿಸಿದ ನಂತರ ನಿರ್ದೇಶಕ ಲಿಂಗುಸಾಮಿ ದಳಪತಿ ವಿಜಯ್ ಬಳಿ ಕಥೆ ಹೇಳಲು ಹೋದರಂತೆ. ಆಗ ಚಿತ್ರದ ಮೊದಲ ಭಾಗ ಕೇಳಿದ ತಳಪತಿ ವಿಜಯ್ ಬೇಡ ನಿಲ್ಲಿಸಿಬಿಡಿ ಅಂದರಂತೆ. ಎರಡನೇ ಭಾಗವನ್ನು ಕೇಳಿ ಎಂದು ಲಿಂಗುಸಾಮಿ ಹೇಳಿದಾಗ, ರಾಜಕಿರಣ್ ಸರ್ ಒಳಗೆ ಬಂದ ಮೇಲೆ ಆ ಚಿತ್ರದಲ್ಲಿ ನನ್ನನ್ನು ವಿಭಿನ್ನವಾಗಿ ತೋರಿಸಲು ಏನು ಇರಲು ಸಾಧ್ಯ? ಎಂದು ಹೇಳಿ ಈ ಚಿತ್ರವನ್ನು ತಿರಸ್ಕರಿಸಿದರಂತೆ.
ನಟಿಸಲು ನಿರಾಕರಿಸಿದ ಸೂರ್ಯ:
ಇದಾದ ನಂತರ ಈ ಕಥೆ ಸೂರ್ಯನ ಬಳಿ ಹೋಯಿತು, ಆದರೆ ಅವರಿಗೂ ಕೆಲವು ಕಾರಣಗಳಿಂದ ಈ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ನಂತರ ನಮ್ಮ ಹುಡುಗನನ್ನೇ ಹೀರೋ ಮಾಡಿ ಸಿನಿಮಾ ಮಾಡೋಣ ಎಂದು ವಿಕ್ರಮ್ ಕೃಷ್ಣ ಬಳಿ ಲಿಂಗುಸಾಮಿ ಹೇಳಿದಾಗ... ಅವರಿಬ್ಬರೂ ಓಕೆ ಅಂದರು. ಆಮೇಲೆ ಸಿನಿಮಾ ಪೂಜೆಯೊಂದಿಗೆ ಪ್ರಾರಂಭವಾಯಿತು, ನಂತರ ಪಕ್ಕಾ ಆಕ್ಷನ್ ಚಿತ್ರವಾಗಿ ಬಿಡುಗಡೆಯಾಯಿತು.
ಇಂಡಸ್ಟ್ರಿಗೆ ಬರಬೇಕು ಅಂತಿದೆ:
ವಿಶಾಲ್ ಅವರನ್ನು ಅಭಿಮಾನಿಗಳು ಸಂಭ್ರಮಿಸಿದರು, ಚಿತ್ರ ವಿಮರ್ಶಾತ್ಮಕವಾಗಿ ಮತ್ತು ಆರ್ಥಿಕವಾಗಿ ಯಶಸ್ವಿಯಾಯಿತು. ನಂತರ ಮತ್ತೆ ಲಿಂಗುಸಾಮಿಯನ್ನು ನೋಡಿದ ವಿಜಯ್, ಸಿನಿಮಾ ತುಂಬಾ ಚೆನ್ನಾಗಿದೆ. ಹುಡುಗ ಆಕ್ಷನ್ ಸೀನ್‌ನಲ್ಲಿ ಸೂಪರ್ ಆಗಿ ಮಾಡಿದ್ದಾನೆ ಅಂದರಂತೆ. ಅದೇ ರೀತಿ ಆ ಹುಡುಗ ಇಂಡಸ್ಟ್ರಿಗೆ ಬರಬೇಕು ಅಂತಿದೆ ಸಾರ್. ಅದಕ್ಕೆ ಈ ಕಥೆ ಅವನಿಗೆ ಹೋಗಿದೆ ಎಂದು ತುಂಬಾ ಕೂಲ್ ಆಗಿ ಹೇಳಿದ್ರು ಅಂತ ಲಿಂಗುಸಾಮಿ ಹೇಳಿದ್ದಾರೆ.