- Home
- Entertainment
- Cine World
- 43 ವರ್ಷ ಆದ್ರೂ 4ನೇ ಮದ್ವೆಗೆ ರೆಡಿಯಾದ ಖ್ಯಾತ ನಟಿ ವನಿತಾ; ಈಗಲೂ ಮಕ್ಳು ಆಗುತ್ತಾ ಎಂದು ಕಾಲೆಳೆದ ನೆಟ್ಟಿಗರು
43 ವರ್ಷ ಆದ್ರೂ 4ನೇ ಮದ್ವೆಗೆ ರೆಡಿಯಾದ ಖ್ಯಾತ ನಟಿ ವನಿತಾ; ಈಗಲೂ ಮಕ್ಳು ಆಗುತ್ತಾ ಎಂದು ಕಾಲೆಳೆದ ನೆಟ್ಟಿಗರು
ಸದಾ ಮದುವೆ ವಿಚಾರಗಳಲ್ಲಿ ಸುದ್ದಿಯಾಗುತ್ತಿರುವ ವನಿತಾ ವಿಜಯ್ ಕುಮಾರ್. ಕಟ್ಕೊಂಡ್ ಬಿಟ್ಟೋಗೋದು ಯಾಕೆ?

19ನೇ ವಯಸ್ಸಿಗೆ ಸಿನಿಮಾರಂಗದಲ್ಲಿ ಸಖತ್ ಮಿಂಚಿದ ನಟಿ ವನಿತಾ ವಿಜಯ್ ಕುಮಾರ್ ಇತ್ತೀಚಿಗೆ ತಮ್ಮ ವೈವಾಹಿಕ ಜೀವನದ ವಿಚಾರಗಳಿಂದ ಸಖತ್ ಸುದ್ದಿಯಲ್ಲಿ ಇದ್ದಾರೆ.
ಸೆಪ್ಟೆಂಬರ್ 2000ರಲ್ಲಿ ಆಕಾಶ್ ಎಂಬುವವರನ್ನು ವನಿತಾ ಮದುವೆ ಮಾಡಿಕೊಂಡರು. ಈ ಜೋಡಿಗೆ 2001ರಲ್ಲಿ ಮಗ, 2005ರಲ್ಲಿ ಮಗಳು ಜನಿಸಿದ್ದಳು. ಆದರೆ ಮಗಳು ಹುಟ್ಟಿದ ವರ್ಷನೇ ಡಿವೋರ್ಸ್ ಪಡೆದರು.
ಕಾನೂನು ಪ್ರಕಾರಣ ಮಕ್ಕಳಿಬ್ಬರು ಪೋಷಕರಿಗೆ ಸಮಯ ಕೊಡಬೇಕು ಅಂತ ಆಯ್ತು ಅದರೆ ಮಗ ತಾತನ ಜೊತೆ ಉಳಿದುಕೊಂಡು ಆ ನಂತರ ಸಂಪೂರ್ಣವಾಗಿ ತಂದೆ ಆಕಾಶ್ ಪರನಿಂತ.
ಡಿವೋರ್ಸ್ ನಡುವೆ ವನಿತಾ 2010ರಲ್ಲಿ ಕೋರಿಯೋಗ್ರಾಫರ್ ರಾಬರ್ಟ್‌ರನ್ನು ಪ್ರೀತಿಸಲು ಶುರು ಮಾಡಿದ್ದರು. 2013ರಲ್ಲಿ ಅನೌನ್ಸ್ ಮಾಡಿದ್ದರು ಆದರೆ 2017ರಲ್ಲಿ ಬ್ರೇಕಪ್ ಆಗಿರುವುದಾಗಿ ಪೋಸ್ಟ್ ಹಾಕಿದ್ದರು.
2020ರಲ್ಲಿ ಫೋಟೋಗ್ರಾಫರ್ ಪೀಟರ್ ಪೌಲ್‌ರನ್ನು ಪ್ರೀತಿಸಿ ಮದುವೆ ಮಾಡಿಕೊಂಡರು. ಪೀಟರ್‌ಗೆ ಆಗಲೇ ಇಬ್ಬರು ಮಕ್ಕಳಿದ್ದರು. ಆದರೆ ಪೀಟರ್ ತಮ್ಮ ಪತ್ನಿ ಜೊತೆ ಡಿವೋರ್ಸ್ ಪಡೆಯದೆ ವನಿತಾರನ್ನು ಮದುವೆ ಆಗಿದ್ದಾಳೆ ಎಂದು ದೊಡ್ಡ ಕೇಸ್ ನಡೆಯಿತ್ತು. ಆದರೆ ಮದುವೆ ಇನ್ನೂ ರಿಜಿಸ್ಟರ್ ಆಗಿರಲಿಲ್ಲ ಹಾಗೂ ಕೇಸ್ ದೊಡ್ಡದಾಗುತ್ತಿದ್ದ ಕಾರಣ ವನಿತಾ ಬ್ರೇಕಪ್ ಮಾಡಿಕೊಂಡರು.
ಆದರೆ ಈಗ ಮತ್ತೆ ನಾಲ್ಕನೇ ಸಲ ಮದುವೆ ಆಗುತ್ತಿರುವುದಾಗಿ ವನಿತಾ ಪೋಸ್ಟ್ ಮಾಡಿದ್ದಾರೆ. ಅದುವೇ ತಮ್ಮ ಮಾಜಿ ಬಾಯ್‌ಫ್ರೆಂಡ್ ರಾಬರ್ಟ್ ಜೊತೆ. ಹೀಗಾಗಿ ಮದುವೆ ವಿಚಾರಗಳಿಂದ ವನಿತಾ ಸುದ್ದಿಯಲ್ಲಿದ್ದಾರೆ.
43ನೇ ವಯಸ್ಸಿಗೆ ನಾಲ್ಕು ಮದುವೆ ಆಗುತ್ತಿರುವ ಈಕೆಗೆ ಮಕ್ಕಳು ಮಾಡಿಕೊಳ್ಳಬೇಕು ಅನ್ನೋ ಆಸೆನಾ ಅಥವಾ ಪದೇ ಪದೇ ಮಧುಮಗಳಂತೆ ರೆಡಿ ಆಗಬೇಕು ಅಂತ ಆಸೆನಾ? ಅಷ್ಟಕ್ಕೂ ಈ ವಯಸ್ಸಲ್ಲಿ ಮಕ್ಕಳಾಗುತ್ತಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.