ಮದುವೆ ಸುಳಿವು ನೀಡಿದ ನಟಿ ಉರ್ಫಿ; 'ಅಯ್ಯೋ ನನ್ನ ಹೆಸರು ಮಾತ್ರ ತಗೋಬೇಡ' ಎಂದ ನೆಟ್ಟಿಗರು
ವಿಚಿತ್ರ ಬಟ್ಟೆ ಮೂಲಕವೇ ಸದ್ದು ಮಾಡುತ್ತಿದ್ದ ನಟಿ ಉರ್ಫಿ ಜಾವೇದ್ ಇದೀಗ ಮದುವೆ ಬಗ್ಗೆ ಸುಳಿವು ನೀಡಿದ್ದಾರೆ.
ಬಾಲಿವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ಸದಾ ಸುದ್ದಿ ಸುದ್ದಿಯಲ್ಲಿರುತ್ತಾರೆ. ದಿನಕ್ಕೊಂದು ರೀತಿಯ ಬಟ್ಟೆ ಧರಿಸಿ ಕ್ಯಾಮರಾ ಮುಂದೆ ಬರುವ ಉರ್ಫಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಾರೆ. ವಿಚಿತ್ರ ಉಡುಗೆಗಳ ಮೂಲಕವೇ ಉರ್ಫಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಉರ್ಫಿ ಸುದ್ದಿಯಾಗಿರುವುದು ಪ್ರೀತಿ-ಪ್ರೇಮದ ನಿಚಾರಕ್ಕೆ.
ಉರ್ಫಿ ಜಾವೇದ್ ಪ್ರೀತಿಯಲ್ಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣವಾಗಿದ್ದು ಉರ್ಫಿ ಹಂಚಿಕೊಂಡಿರುವ ಫೋಟೋ. ಉರ್ಫಿ ಪೋಸ್ಟ್ ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ. ಅಂದಹಾಗೆ ಉರ್ಫಿ ಶೇರ್ ಮಾಡಿರುವ ಪೋಸ್ಟ್‌ನಲ್ಲಿ ಏನಿದೆ ಅಂತಿರಾ, 'ಅವನು ಯೆಸ್ ಎಂದ...' ಎಂದು ಹೇಳಿದ್ದಾರೆ.
ಈ ಮೂಲಕ ಉರ್ಫಿ ಮದುವೆ ಬಗ್ಗೆ ಸುಳಿವು ನೀಡಿದ್ರಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಆದರೆ ಇನ್ನು ಕೆಲವರು ಕಾಲೆಳೆಯುತ್ತಿದ್ದಾರೆ. ಉರ್ಫಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
ಉರ್ಫಿ ತಾನು ಸಂಬಂಧದಲ್ಲಿ ಇದ್ದೀನಿ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಇದಕ್ಕೆ ನೆಟ್ಟಿಗರು ಅನೇಕ ಕಾಮೆಂಟ್ ಮಾಡಿದ್ದಾರೆ. 'ನನ್ನ ಹೆಸರನ್ನು ಎಲ್ಲರಾ ಮುಂದೆ ಬಹಿರಂಗ ಪಡಿಸಬೇಡ' ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ 'ನಾನು ಬಟ್ಟೆ ಧರಿಸಬೇಕಾ ಎಂಬ ಪ್ರಶ್ನೆಯಾಗಿತ್ತು' ಎಂದು ಹೇಳಿದ್ದಾರೆ.
ಉರ್ಫಿ ಈ ಹಿಂದೆ ಅನುಪಮಾ ಖ್ಯಾತಿಯ ಪರಾಸ್ ಕಲ್ನಾವತ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಇಬ್ಬರ ಸಂಬಂಧ ಮುರಿದು ಬಿದ್ದಿದ್ದು ಇದೀಗ ಉರ್ಫಿ ಮತ್ತೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಯಾರು ಎಂದು ರಿವೀಲ್ ಮಾಡಿಲ್ಲ.
ಉರ್ಫಿ ನಿಜಕ್ಕೂ ಮದ್ವೆ ಆಗುತ್ತಿದ್ದಾರಾ? ಅಥವಾ ಬೇರೆ ಯಾವುದಕ್ಕೋ ಪೋಸ್ಟ್ ಹಾಕಿದ್ದಾರಾ ಎನ್ನುವುದು ಕುತೂಹಲ ಮೂಡಿಸಿದೆ. ಈ ಬಗ್ಗೆ ಉರ್ಫಿನೇ ಸದ್ಯದಲ್ಲೇ ರಿವೀಲ್ ಮಾಡುವ ಸಾಧ್ಯತೆ ಇದೆ.