ಭಾರತದಲ್ಲಿ ನಿಷೇಧಿಸಿದ ಈ ವಿವಾದಾತ್ಮಕ ಚಿತ್ರಗಳೀಗ ಒಟಿಟಿಯಲ್ಲಿ ಲಭ್ಯ!
ಕೆಲವು ಸಿನಿಮಾಗಳು ಕಥಾ ವಸ್ತುಗಳ ಕಾರಣದಿಂದ ವಿವಾದಗಳನ್ನು ಸೃಷ್ಟಿಸಿವೆ. ಆ ರೀತಿ ಹಲವು ಸಿನಿಮಾಗಳು ಬ್ಯಾನ್ ಸಹ ಆಗಿವೆ, ಹೀಗೆ ಚಿತ್ರ ಮಂದಿರಗಳಲ್ಲಿ ನಿಷೇಧಿತ ಅಥವಾ ಸೆನ್ಸಾರ್ ಮಂಡಳಿಯಿಂದ ನಿರಾಕರಣೆ ಈಗ ಓಟಿಟಿ ಫ್ಲಾಟ್ ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿವೆ .ಥಿಯೇಟರ್‌ಗಳಲ್ಲಿ ನಿಷೇಧಿತ ಟಾಪ್ ಹತ್ತು ಭಾರತೀಯ ವಿವಾದಾತ್ಮಕ ಚಲನಚಿತ್ರಗಳಿವು.
ಫೈರ್:
ವಿವಾದಗಳನ್ನು ಹುಟ್ಟುಹಾಕುತ್ತಿದ್ದ ಫೈರ್ ಅನ್ನು ಥಿಯೇಟ್ರಿಕಲ್ ಸ್ಕ್ರೀನಿಂಗ್‌ದ ನಿಷೇಧಿಸಲಾಗಿದೆ. ಆದರೆ ಈಗ YouTube ನಲ್ಲಿ ಲಭ್ಯವಿದೆ.
ಬ್ಲ್ಯಾಕ್ ಫ್ರೈಡೇ :
ಬ್ಲ್ಯಾಕ್ ಫ್ರೈಡೇ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಅನುಮತಿ ಸಿಗಲಿಲ್ಲ. ಆದರೆ ಅದು ಈಗ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಪರ್ಜಾನಿಯಾ:
ಸೆನ್ಸಾರ್ ಮಂಡಳಿಯು ಬಿಡುಗಡೆಯನ್ನು ನಿರಾಕರಿಸಿದ ಧಾರ್ಮಿಕ ಗಲಭೆಗಳಿಗೆ ಸಂಬಂಧಿಸಿದ ಪರ್ಜಾನಿಯಾ ಸಿನಿಮಾ ಈಗ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ
ಲೋವ್:
ಲೋವ್ ಚಲನಚಿತ್ರವು ಗೇ ಜೋಡಿಯ ಸಂಬಂಧಗಳನ್ನು ಎತ್ತಿ ತೋರಿಸುತ್ತದೆ. ಆದ್ದರಿಂದ ಅದು ನಿಷೇಧವನ್ನು ಎದುರಿಸಿತು ಆದರೆ ಈಗ ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್ ಮಾಡುತ್ತಿದೆ.
ಅನ್‌ಫ್ರೀಡಮ್:
ಲೆಸ್ಬಿಯನ್ ಜೋಡಿಯ ಸುತ್ತ ಸುತ್ತುವ ಕಥೆಯ ಹೊಂದಿರುವ ಅನ್‌ಫ್ರೀಡಮ್ ಸಿನಿಮಾವನ್ನು ಸೆನ್ಸಾರ್ ಮಂಡಳಿ ನಿರಾಕರಿಸಿದ ನಂತರ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಕಾಮ ಸೂತ್ರ - ಎ ಟೇಲ್ ಆಫ್ ಲವ್:
ಅತ್ಯಂತ ವಿವಾದಾತ್ಮಕ ಚಲನಚಿತ್ರಗಳಲ್ಲಿ ಒಂದಾದ ಕಾಮ ಸೂತ್ರ - ಎ ಟೇಲ್ ಆಫ್ ಲವ್ ಈಗ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಲಭ್ಯವಿದೆ.
ವಾಟರ್:
ದೀಪಾ ಮೆಹ್ತಾ ಅವರ ವಿಧವೆಯ ಜೀವನದ ಸುತ್ತ ಸುತ್ತುವ ವಾಟರ್ ವಿವಾದಾತ್ಮಕ ಚಲನಚಿತ್ರ ಈಗ YouTube ನಲ್ಲಿ ಲಭ್ಯವಿದೆ.
ಬ್ಯಾಂಡಿಟ್ ಕ್ವೀನ್:
ಬ್ಯಾಂಡಿಟ್ ಕ್ವೀನ್ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನಿಷೇಧಿಸಲಾಗಿದೆ. ಆದರೆ ಈಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿದೆ. ಇದು ಫೋಲನ್ ದೇವಿಯ ಜೀವನವನ್ನು ಆಧರಿಸಿದೆ.
ಆಂಗ್ರೀ ಇಂಡಿಯನ್ ಗಾಡೆಸೆಸ್:
ಆಂಗ್ರೀ ಇಂಡಿಯನ್ ಗಾಡೆಸೆಸ್ ಸಿನಿಮಾವನ್ನು ಸೆನ್ಸಾರ್ ಮಂಡಳಿಯು ನಿಷೇಧಿಸಿದೆ. ಆದರೆ ಈ ಚಿತ್ರವು ಈಗ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.
ಫಿರಾಕ್:
ಗೋಧ್ರಾ ಗಲಭೆಗಳನ್ನು ಆಧರಿಸಿದ ಫಿರಾಕ್ ಚಿತ್ರವನ್ನು ನಿಷೇಧಿಸಲಾಗಿದೆ. ಈಗ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಲಭ್ಯವಿದೆ.