100 ದಿನಗಳ ನಂತರ ಪತ್ನಿ, ಅವಳಿ ಮಕ್ಕಳನ್ನು ನೋಡಿದ ನಟ; ಕಾರಣವೇನು?
ಟಾಲಿವುಡ್ ಖ್ಯಾತ ನಟ ವಿಷ್ಣು ಮಂಚು ಪತ್ನಿ ಹಾಗೂ ಮಕ್ಕಳು ಸಿಂಗಾಪುರದಲ್ಲಿ ಕಳೆದ 100 ದಿನಗಳ ಕಾಲ ಕೋವಿಡ್19 ಲಾಕ್ಡೌನ್ನಿಂದಾಗಿ ಸಿಲುಕಿಕೊಂಡಿದ್ದರು. ಈಗ ಭಾರತಕ್ಕೆ ಹಿಂದಿರುಗಿದ್ದಾರೆ....
ಕುಟುಂಬದ ಸದಸ್ಯರೊಬ್ಬರು ಅನಾರೋಗ್ಯದಿಂದ ಬಳಲಿದ್ದು, ನೋಡಲು ವಿಷ್ಣು ಕುಟುಂಬ ಸಿಂಗಾಪುರ್ಗೆ ತೆರಳಿದ್ದರು.
ವಿಷ್ಣು ತಂದೆ ಹುಟ್ಟು ಹಬ್ಬವಿದ್ದ ಕಾರಣ ಭಾರತಕ್ಕೆ ಲಾಕ್ಡೌನ್ ಮುನ್ನವೇ ಹಿಂದಿರುಗಿದ್ದರು.
ಭಾರತ ಲಾಕ್ಡೌನ್ ಸಮಯದಲ್ಲಿ ವಿಷ್ಣು ಮಕ್ಕಳಿಲ್ಲದೇ ಮನೆಯಲ್ಲಿ ಇರಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ವಿಷ್ಣು ಪತ್ನಿ ವಿರಾನಿಕಾ ಹಾಗೂ ಮಕ್ಕಳಾದ ಅರಿಯಾನಾ, ವಿವಿಯಾನಾ, ಆವ್ರಾಮ್ ಹಾಗೂ ಆರ್ಯ ವೈದ್ಯ ಸಿಂಗಾಪುರದಲ್ಲೇ ಸಿಲುಕಿಕೊಂಡಿದ್ದರು.
ಮಕ್ಕಳೊಟ್ಟಿಗೆ ತುಂಬಾನೇ ಅಟ್ಯಾಚ್ ಆಗಿರುವ ವಿಷ್ಣು, ಇದೇ ಮೊದಲ ಬಾರಿ ಮಕ್ಕಳಿಂದ ಇಷ್ಟು ದಿನ ದೂರವಿರುವುದಂತೆ.
ಪತ್ನಿ ಹಾಗೂ ಮಕ್ಕಳು ಮನೆ ಸೇರಿದ ಮೇಲೆ ಗಡ್ಡ ತೆಗೆಯುವುದಾಗಿ ವಿಡಿಯೋ ಮಾಡಿ ಮಾತನಾಡಿದ್ದರು.
ಸ್ವದೇಶಕ್ಕೆ ಮರಳಿದ ಫೋಟೋವನ್ನು ವಿರಾನಿಕಾ ಶೇರ್ ಮಾಡಿಕೊಂಡಿದ್ದರು.
ಫೋಟೋದಲ್ಲಿ ಮೂವರು ಮಾಸ್ಕ್ ಧರಿಸಿದ್ದಾರೆ.
ಈಗಿನ ಜನರೇಷನ್ನಲ್ಲಿ 4 ಮಕ್ಕಳಿಗೆ ಪೋಷಕರಾಗಿರುವ ಕಾರಣ ವಿಷ್ಣು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು.
ವಿರಾನಿಕಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅವರೇ ಶೇರ್ ಮಾಡಿಕೊಂಡಿರುವ ಫೋಟೋಗಳಿವು.