ಭಾನುವಾರ ಈ ಥ್ರಿಲ್ಲರ್ ಸಿನಿಮಾಗಳನ್ನು ನೋಡಿ ಚಿಲ್ ಮಾಡಿ
ನಿಮ್ಮ ವಾರಾಂತ್ಯವನ್ನು ಮೂವಿ ನೋಡಿ ಎಂಜಾಯ್ ಮಾಡಲು ನೀವು ಬಯಸಿದ್ದರೆ, ಮಿಸ್ ಮಾಡದೇ ಈ ಸಿನಿಮಾಗಳನ್ನು ನೋಡಿ. ನೀವು ಖಂಡಿತಾ ಇಷೃಪಡ್ತೀರಿ.

ಇವತ್ತು ಭಾನುವಾರ, ಹೊರಗಡೆ ಮಳೆ ಬೇರೆ ಬರುತ್ತಿದೆ. ಈ ಸಮಯದಲ್ಲಿ ಮನೆಯಲ್ಲಿ ಓಟಿಟಿಯಲ್ಲಿ (OTT movies)ನೋಡಿ ಆನಂದಿಸಲು ಯಾವ ಸಿನಿಮಾ ಬೆಸ್ಟ್ ಎಂದು ನೀವು ಯೋಚನೆ ಮಾಡ್ತಿದ್ದರೆ, ಇಲ್ಲಿದೆ ಒಂದಷ್ಟು ಸಿನಿಮಾಗಳ ಲಿಸ್ಟ್. ನೋಡಿ ಎಂಜಾಯ್ ಮಾಡಿ.
ಡಿಎನ್ ಎ (ಜಿಯೋ ಹಾಟ್ ಸ್ಟಾರ್)
ಡಿಎನ್ ಎ (DNA) ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಹಾಗೂ ಹಿಂದಿಯಲ್ಲಿ ಲಭ್ಯವಿದೆ. ಈಗಷ್ಟೇ ಮಗುವಿಗೆ ಜನ್ಮ ನೀಡಿದ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆ ಡೆಲಿವರಿ ಬಳಿಕ ತನ್ನ ಮಗುವನ್ನು ಬದಲಾಯಿಸಲಾಗಿದೆ ಎನ್ನುತ್ತಾಳೆ. ಆದರೆ ಆಕೆಯನ್ನು ಯಾರೂ ನಂಬುವುದಿಲ್ಲ. ಆದರೆ ಆಕೆಯ ಮಾತನ್ನು ನಂಬುವ ಪತಿ ಮುಂದೆ ಏನು ಮಾಡುತ್ತಾನೆ ಅನ್ನೋದು ಕಥೆ.
ಬೈಸಿಕಲ್ ಡೇಸ್ (ಪ್ರೈಮ್ ವಿಡಿಯೋ)
ಈ ಸಿನಿಮಾ (bicycle days) ಹಿಂದಿಯಲ್ಲಿ ಲಭ್ಯವಿದೆ. ಈ ಸಿನಿಮಾ ಪ್ರತಿಯೊಬ್ಬರ ಬಾಲ್ಯದ ಜೀವನವನ್ನು ತೆರೆದಿಡುತ್ತದೆ. ಯಾರೆಲ್ಲಾ ಜೀವನದಲ್ಲಿ ಬೈಸಿಕಲ್ ಮುಖ್ಯ ಪಾತ್ರವಾಗಿತ್ತೋ, ಅವರಿಗೆ ಖಂಡಿತವಾಗಿಯೂ ಈ ಸಿನಿಮಾ ಇಷ್ಟವಾಗಬಹುದು. ಇದು ಹಳ್ಳಿಯ ಒಬ್ಬ ಹುಡುಗ ಮತ್ತು ಅವನ ಗುರುವಿನ ಕಥೆಯಾಗಿದೆ.
ರಂಗೀನ್ - ಪ್ರೈಮ್ ವಿಡೀಯೋ (ಹಿಂದಿ)
ನೇರ ಸ್ವಭಾವದ ಗಂಡನೊಬ್ಬ ತನ್ನ ಹೆಂಡತಿಯ ದ್ರೋಹಕ್ಕೆ ಪ್ರತಿಕ್ರಿಯೆಯಾಗಿ ಹಣಕೊಟ್ಟು ಇಂಟಿಮೆಸಿ ಮಾಡುವ ಕೆಲಸಕ್ಕೆ ಇಳಿಯುತ್ತಾನೆ, ಆದಾಗ್ಯೂ, ಅವನ ಅನನುಭವವು ಅವನ ಸಾಹಸಗಳು ಕೆಲವು ಅನಿರೀಕ್ಷಿತ ತಿರುವುಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ. ಅದೇನು ಅನ್ನೋದನ್ನು ತಿಳಿಯಲು ಮೂವಿ (Rangeen) ನೋಡಿ.
ರಾಂತ್ (ಜಿಯೋ ಹಾಟ್ ಸ್ಟಾರ್)
ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಹೊಸದಾಗಿ ನೇಮಕಗೊಂಡ ಪೊಲೀಸ್ ಇಬ್ಬರು ಜೊತೆಗೆ ನೈಟ್ ಶಿಫ್ಟ್ ಮಾಡುವ ಸಂದರ್ಭ ಒಲಿದು ಬರುತ್ತದೆ. ಈ ಸಂದರ್ಭದಲ್ಲಿ ಏನೆಲ್ಲಾ ಟ್ವಿಸ್ಟ್ ಟರ್ನ್ ಗಳು ತೆಗೆದುಕೊಳ್ಳುತ್ತದೆ ಅನ್ನೋದು ಕಥೆ. ವ್ಯವಸ್ಥೆಯಲ್ಲಿ ಆಳವಾದ ಬಿರುಕುಗಳನ್ನು ಬಹಿರಂಗಪಡಿಸುವ ಅಪಾಯ ಮತ್ತು ವೈಯಕ್ತಿಕ ಸಂದಿಗ್ಧತೆಗಳ ಕಥೆ ಇದಾಗಿದ್ದು, ಈ ಸಿನಿಮಾ (Ronth)ಮಲಯಾಲಂ, ಹಿಂದಿ, ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಲಭ್ಯವಿದೆ.
ಮಂಡಲ ಮರ್ಡರ್ಸ್ (ನೆಟ್’ಫ್ಲಿಕ್ಸ್)
ಇಬ್ಬರು ತನಿಖಾಧಿಕಾರಿಗಳು ಇತಿಹಾಸದಲ್ಲಿ ಬೇರೂರಿರುವ ಕೆಟ್ಟ ರಹಸ್ಯಗಳನ್ನು ಅನಾವರಣಗೊಳಿಸುವ ಮೂಲಕ, ಸರಣಿ ಕೊಲೆಗಳ ಹಿಂದಿನ ನಿಗೂಢತೆಯನ್ನು ಬಯಲು ಮಾಡುವ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಾರೆ. ಮುಂದೇನಾಗುತ್ತದೆ ಅನ್ನೋದೆ ಕಥೆಯ (Mandala Murders) ರಹಸ್ಯ. ಈ ಸಿನಿಮಾ ಹಿಂದಿ, ತಮಿಳು, ತೆಲುಗಿನಲ್ಲಿ ಲಭ್ಯವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

