ಬಾಯ್ಫ್ರೆಂಡ್ ಜೊತೆ ಹೃತಿಕ್ ರೋಷನ್ ಮಾಜಿ ಪತ್ನಿ ರೊಮ್ಯಾಂಟಿಕ್ ಫೋಟೋ ವೈರಲ್
ಹೃತಿಕ್ ರೋಷನ್ (Hritik Roshan) ಅವರ ಮಾಜಿ ಪತ್ನಿ ಸುಸ್ಸೇನ್ ಖಾನ್ (Sussanne khan) ಈಗ ಸದ್ದು ಮಾಡುತ್ತಿದ್ದಾರೆ. ಗಾಯಕಿ ಸಬಾ ಆಜಾದ್ ಅವರೊಂದಿಗಿನ ಸಂಬಂಧಕ್ಕಾಗಿ ಹೃತಿಕ್ ಈ ದಿನಗಳಲ್ಲಿ ಸುದ್ದಿಯಲ್ಲಿದ್ದರೆ, ಅವರ ಮಾಜಿ ಪತ್ನಿ ಕೂಡ ತಮ್ಮ ರಿಲೆಷನ್ಶಿಪ್ ಕಾರಣದಿಂದ ಚರ್ಚೆಯಲ್ಲಿದ್ದಾರೆ. ಸುಝೇನ್ ಕೆಲವು ಸಮಯದಿಂದ ಆರ್ಸ್ಲಾನ್ ಗೋನಿಯೊಂದಿಗೆ ಡೇಟ್ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ, ಪ್ರಸ್ತುತ ಇಬ್ಬರೂ ಕ್ಯಾಲಿಫೋರ್ನಿಯಾದಲ್ಲಿ ರಜಾ ದಿನಗಳಲ್ಲಿದ್ದಾರೆ. ಅಲ್ಲಿಂದ ಸುಸ್ಸೇನ್ Instagram ನಲ್ಲಿ ಕೆಲವು ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಜೋಡಿಯ ರೋಮ್ಯಾಂಟಿಕ್ ಪೋಟೋಗಳು ಸಖತ್ ವೈರಲ್ ಆಗಿವೆ.
ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸೇನ್ ಖಾನ್ ಈ ದಿನಗಳಲ್ಲಿ ತನ್ನ ಗೆಳೆಯ ಅರ್ಸ್ಲಾನ್ ಗೋನಿಯೊಂದಿಗೆ ಕ್ಯಾಲಿಫೋರ್ನಿಯಾದಲ್ಲಿ ಹಾಲಿಡೇ ಆನಂದಿಸುತ್ತಿದ್ದಾರೆ. ಅಲ್ಲಿನ ಕೆಲವು ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಇಬ್ಬರೂ ತುಂಬಾ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ಫೋಟೋಗಳಲ್ಲಿ ಇಬ್ಬರೂ ಒಬ್ಬರಿಗೊಬ್ಬರು ತುಂಬಾ ಹತ್ತಿರದಲ್ಲಿ ಕಾಣುತ್ತಾರೆ. ಆರ್ಸ್ಲಾನ್ ಸುಸೇನ್ ಖಾನ್ ಅವರನ್ನು ಚುಂಬಿಸುತ್ತಿರುವುದನ್ನು ಫೋಟೋಗಳಲ್ಲಿ ಕಾಣಬಹುದು. ಆದರೆ ಕೆಲವು ಚಿತ್ರಗಳಲ್ಲಿ ಇಬ್ಬರೂ ಸಾರ್ವಜನಿಕವಾಗಿ ರೊಮ್ಯಾಂಟಿಕ್ ಆಗಿರುವುದನ್ನು ಕಾಣಬಹುದು. ಅರ್ಸ್ಲಾನ್ ಟಿವಿ ನಟ ಅಲಿ ಗೋನಿಯ ಸಹೋದರ.
ಸುಸ್ಸಾನೆ ಖಾನ್ ಅವರು ಗೆಳೆಯ ಅರ್ಸ್ನಲ್ ಗೋನಿ ಅವರೊಂದಿಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಫೋಟೋ ಕ್ಯಾಪ್ಷನ್ ಜೊತೆ ಸುಸ್ಸಾನ್ ಲೈಟ್, ಹಾರ್ಟ್, ಲೈಟ್ನಿಂಗ್, ಕ್ಯಾಮೆರಾ ಮತ್ತು ವೇವ್ಸ್ನಂತಹ ಅನೇಕ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.
'ನಿಮಗೆ ಏನು ಹೇಳಿದ್ದಾರೋ ಗೊತ್ತಿಲ್ಲ, ಆದರೆ ಸಮಯ ಮೀರುತ್ತಿದೆ. ಆದ್ದರಿಂದ ಅದನ್ನು ಚಿನ್ನದಂತೆ ಕಳೆಯಿರಿ. ನನ್ನ ಪ್ರೀತಿಯ ಕ್ಯಾಲಿಫೋರ್ನಿಯಾ, ನಮ್ಮ ಅತ್ಯುತ್ತಮ ಬೇಸಿಗೆಯನ್ನು ನಮಗೆ ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು' ಎಂದು ಫೋಟೋ ಶೀರ್ಷಿಕೆಯಲ್ಲಿ ಬರದಿದ್ದಾರೆ. ಸುಝೇನ್ ಹಂಚಿಕೊಂಡಿರುವ ಈ ವೀಡಿಯೊದಲ್ಲಿ, ಅವರಿಬ್ಬರ ರೊಮ್ಯಾಂಟಿಕ್ ಕ್ಷಣಗಳಿಂದ ಸ್ನೇಹಿತರನ್ನು ಭೇಟಿಯಾಗುವುದು, ರುಚಿಯಾದ ಆಹಾರವನ್ನು ತಿನ್ನುವುದು ಸೇರಿದಂತೆ ಹಲವು ಸುಂದರ ಕ್ಷಣಗಳನ್ನು ತೋರಿಸಲಾಗಿದೆ.
ಈ ಪ್ರವಾಸಕ್ಕೂ ಮುನ್ನ ದಂಪತಿ ಪ್ರೀತಿ ಜಿಂಟಾ ಅವರನ್ನು ಭೇಟಿಯಾಗಿದ್ದರು. ಸುಝೇನ್ ಅವರ ಫೋಟೋಗಳು ಮತ್ತು ವೀಡಿಯೊಗಳ ಕುರಿತು ಪ್ರತಿಕ್ರಿಯಿಸಿದ ಪ್ರೀತಿ, ನಾನು ನಿಮ್ಮಿಬ್ಬರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ. ಜೊತೆಗೆ ಹೃದಯದ ಎಮೋಜಿಯನ್ನೂ ಹಂಚಿಕೊಂಡಿದ್ದಾರೆ.
ಸುಸ್ಸಾನೆ ಖಾನ್ ಮತ್ತು ಹೃತಿಕ್ ರೋಷನ್ 2000 ರಲ್ಲಿ ವಿವಾಹವಾದರು. ಮದುವೆಗೂ ಮುನ್ನ ಇಬ್ಬರೂ ಪರಸ್ಪರ ಡೇಟಿಂಗ್ ಕೂಡ ಮಾಡಿದ್ದರು. ಇಬ್ಬರಿಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, ಮದುವೆಯಾದ ಕೆಲ ವರ್ಷಗಳ ನಂತರ ಅಂದರೆ 2014ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು.
ವಿಚ್ಛೇದನದ ನಂತರವೂ ದಂಪತಿ ತಮ್ಮ ಮಕ್ಕಳ ಸಂತೋಷಕ್ಕಾಗಿ ಜೊತೆಯಾಗಿ ಕಾಲ ಕಳೆಯುತ್ತಿದ್ದರು. ಈಗ ಇಬ್ಬರಿಗೂ ಹೊಸ ಜೀವನ ಸಂಗಾತಿ ಸಿಕ್ಕಿದ್ದಾರೆ. ಆದರೆ, ಇಬ್ಬರೂ ಎರಡನೇ ಮದುವೆಯಾಗುವ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.