- Home
- Entertainment
- Cine World
- ಕೊರೆಯುವ ಚಳಿಯಲ್ಲಿ ಕ್ಯಾಂಪ್ ಫಯರ್, northern lights; ಡಿವೋರ್ಸ್ ವದಂತಿ ಬೆನ್ನಲೆ ಸೂರ್ಯ- ಜ್ಯೋತಿಕಾ ಟ್ರಿಪ್!
ಕೊರೆಯುವ ಚಳಿಯಲ್ಲಿ ಕ್ಯಾಂಪ್ ಫಯರ್, northern lights; ಡಿವೋರ್ಸ್ ವದಂತಿ ಬೆನ್ನಲೆ ಸೂರ್ಯ- ಜ್ಯೋತಿಕಾ ಟ್ರಿಪ್!
ಫಿನ್‌ಲ್ಯಾಂಡ್‌ಗೆ ವರ್ಷದ ಮೊದಲ ಟ್ರಿಪ್ ಮಾಡಿದ ಸೂರ್ಯ-ಜ್ಯೋತಿಕಾ. ಬೆಸ್ಟ್ ಕ್ಷಣಗಳನ್ನು ಹಂಚಿಕೊಂಡ ನಟಿ....

ಕಾಲಿವುಡ್ ಸೂಪರ್ ಕಪಲ್ ಸೂರ್ಯ ಮತ್ತು ಜ್ಯೋತಿಕಾ ವರ್ಷದ ಮೊದಲ ರಜೆಯನ್ನು ಫಿನ್‌ಲ್ಯಾಂಡ್‌ನಲ್ಲಿರುವ ಅರ್ಟಿಕ್ ಸರ್ಕಲ್‌ನಲ್ಲಿ ಕಳೆದಿದ್ದಾರೆ.
ಪ್ರವಾಸಿಗರು ನೋಡಲು ಹೆಚ್ಚು ಇಷ್ಟ ಪಡುವ ನಾರ್ಥನ್ ಲೈಟ್ಸ್ (Northern Lights) ನೋಡಿದ್ದಾರೆ. ಮಂಜಿನ ಮನೆಯಲ್ಲಿ ಉಳಿದುಕೊಂಡಿದ್ದಾರೆ.
ಹೆಚ್ಚಿಗೆ ಮಂಜು ಇರುವ ಸ್ಥಳದಲ್ಲಿ ಫಾಕ್ಸ್/ ಹಸ್ಕಿ (Fox/Huskie) ಬಳಸಿ ಚ್ಯಾರಿಯಟ್ ರೀತಿಯಲ್ಲಿ ಪ್ರಯಾಣ ಮಾಡುತ್ತಾರೆ, ಈ ಕ್ಷಣವನ್ನು ಜೋ-ಸೂರ್ಯ ಎಂಜಾಯ್ ಮಾಡಿದ್ದಾರೆ.
ಪ್ರತಿ ವರ್ಷ ಮಕ್ಕಳಾದ ದಿಯಾ ಮತ್ತು ದೇವ್ ಜೊತೆ ಪ್ರಯಾಣ ಮಾಡುತ್ತಾರೆ ಆದರೆ ಈ ಸಲ ಇವರಿಬ್ಬರೇ ಪ್ರಯಾಣಿಸಿ ಎಂಜಾಯ್ ಮಾಡಿದ್ದಾರೆ.
'2024 - ಈ ವರ್ಷ ಪೂರ್ತಿ ಪ್ರಯಾಣ ಮಾಡುವುದು. ಜನವರಿಯಲ್ಲಿ ಫಿನ್‌ಲ್ಯಾಂಡ್‌ಗೆ ಭೇಟಿ (ಆರ್ಟಿಕ್ ಸರ್ಕಲ್)' ಎಂದು ಜ್ಯೋತಿಕಾ ಬರೆದುಕೊಂಡಿದ್ದಾರೆ.
'ಗಂಡ ಆದವರು ಬೆಸ್ಟ್ ಫ್ರೆಂಡ್ ಮಾತ್ರವಲ್ಲದೆ ಒಳ್ಳೆಯ ಟ್ರ್ಯಾವಲ್ ಪಾರ್ಟನರ್ ಆಗಿದ್ದರೆ. ಈ ಗೋಲ್...ಕನಸು ನನಸಾಗುತ್ತದೆ' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಡಿವೋರ್ಸ್ ವದಂತಿ ಬೆನ್ನಲೆ ಜ್ಯೋತಿಕಾ ಮತ್ತು ಸೂರ್ಯ ಪ್ರಯಾಣ ಮಾಡಿದ್ದಾರೆ. ಗಾಸಿಪ್‌ಗಳಿಗೆ ಯಾವುದೇ ರೀತಿಯಲ್ಲಿ ರಿಯಾಕ್ಟ್ ಮಾಡದೇ ಇದ್ದರೂ ಈ ಕ್ಯೂಟ್ ರೊಮ್ಯಾಂಟಿಕ್ ವಿಡಿಯೋ ಉತ್ತರ ಕೊಡುತ್ತದೆ.