ಗಾನಗಾರುಡಿಗ ಎಸ್‌ಪಿ ಬಾಲಸುಬ್ರಮಣ್ಯಂ ಅಭಿನಯಿಸಿದ ಚಿತ್ರಗಳು ಇಲ್ಲಿವೆ
ಗಾನಗಾರುಡಿಗ ಎಸ್‌ಪಿ ಬಾಲಸುಬ್ರಹ್ಮಣ್ಯಂ ಕಾಲವಾಗಿ ಇಂದಿಗೆ ಮೂರು ವರ್ಷಗಳು ಕಳೆದಿವೆ. ಆದರೆ ಅವರ ಹಾಡುಗಳ ಮೂಲಕ ಇಂದಿಗೂ ಜೀವಂತ. 14 ಭಾಷೆ 40 ಸಾವಿರಕ್ಕೂ ಹೆಚ್ಚು ಹಾಡು ಕನ್ನಡಾಂಬೆಯ ದತ್ತು ಪುತ್ರ ಎಸ್‌ಪಿ ಬಾಲಸುಬ್ರಹ್ಮಣ್ಯಂ ಮಾಡಿರೋ ದಾಖಲೆ ಯಾರೂ ಮುರಿಯಲಿಕ್ಕಿಲ್ಲ. ಅವರು ಹಲವು ಸಿನಿಮಾಗಳು ನಟಿಸಿದ್ದರೂ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರ ಅಭಿನಯದ ಸಿನಿಮಾಗಳು ಇಲ್ಲಿವೆ
ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಹ್ಮಣ್ಯಂ ಎಂದರೆ ಬಹಳಷ್ಟು ಜನರಿಗೆ ತಕ್ಷಣ ಗೊತ್ತಾಗಲಿಕ್ಕಿಲ್ಲ ಆದರೆ ಸಂಕ್ಷಿಪ್ತವಾಗಿ ಎಸ್‌ಪಿಬಿ ಎಂದರೆ ಸಾಕು ತಕ್ಷಣ ಕಣ್ಮುಂದೆ ಬರುವುದು, ಕಿವಿಯಲ್ಲಿ ಸಂಗೀತ ಲಹರಿ ಕೇಳಲಾರಂಭಿಸಿಬಿಡುತ್ತದೆ. ಬಹುಶಃ ಎಸ್‌ಪಿ ಬಾಲಸುಬ್ರಹ್ಮಣ್ಯಂ ಹೆಸರು ಕೇಳದ ಭಾರತೀಯ ಸಂಗೀತ ಪ್ರೇಮಿಗಳ ಇಲ್ಲ ಎನ್ನಬಹುದು.
ಎಸ್‌ಪಿಬಿ ನಮ್ಮನ್ನಗಲಿ ಮೂರು ವರ್ಷಗಳು ಕಳೆದರೂ ಹಾಡುಗಳ ಮೂಲಕವೇ ನಮ್ಮಲ್ಲಿನ್ನೂ ಜೀವಂತ ಇದ್ದಾರೆ. ಹಾಡುಗಳ ಮೂಲಕವೇ ನಮ್ಮ ನೆನಪಿಗೆ ಬರುತ್ತಾರೆ. ಎದೆ ತುಂಬಿ ಹಾಡುತ್ತಲೇ ಇದ್ದಾರೆ. ಇಂದು ಅವರ ಹಾಡುಗಳು, ಸಿನಿಮಾಗಳಲ್ಲಿ ಅಭಿನಯಿಸಿದ ಅವರ ಪಾತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇಂತಹ ಗಾಯಕ, ನಟ ಮತ್ತೆ ಹುಟ್ಟಿಬರಲಿ ಅಭಿಮಾನಿಗಳು ಬೇಡುತ್ತಿದ್ದಾರೆ.
ಎಷ್ಟೋ ಜನರಿಗೆ ಎಸ್‌ಪಿಬಿ ಹಾಡುತ್ತಾರೆಂಬುದು ಗೊತ್ತು. ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು ಎಂಬುದು ಗೊತ್ತೇ ಇಲ್ಲ. 'ಕೆಳದಿ ಕಣ್ಮಣಿ' ತಮಿಳು ಚಿತ್ರರಂಗದಲ್ಲಿ ಎಸ್‌ಪಿಬಿ ಅವರ ಮೊದಲ ಪ್ರಮುಖ ಚಿತ್ರವಾಗಿದೆ. ಚಿತ್ರದ ಪ್ರಸಿದ್ಧ ಹಾಡು (ಮಣ್ಣಿಲ್ ಐಂದಾ ಕಾದಲ್ಬ ಹಳ ಜನಪ್ರಿಯವಾಗಿದೆ. ಇನ್ನೊಂದು ಪ್ರಮುಖ ಚಿತ್ರದಲ್ಲಿ ಸಾಯಿ ಬಾಬಾ ಭಕ್ತನಾಗಿ ಅವರ ಅಭಿನಯ ಮರೆಯಲು ಸಾಧ್ಯವೇ?
ಎಸ್‌ಪಿಬಿ ನಟಿಸಿದ ಮಣಿರತ್ನಂ ಅವರ ತಿರುದ ತಿರುದ ಚಿತ್ರದಲ್ಲಿ ಸಿಬಿಐ ಅಧಿಕಾರಿಯಾಗಿ ಅವರು ಅತ್ಯುತ್ತಮ ಅಭಿನಯ ನೀಡಿದರು. ಆ ಪಾತ್ರಕ್ಕೆ ಅವರಲ್ಲದೆ ಬೇರೆ ಅಭಿನಯಿಸಿದ್ದರೂ ಸೂಕ್ತವೆನಿಸುತ್ತಿರಲಿಲ್ಲ ಎಂಬಷ್ಟು ಮನೋಜ್ಞವಾಗಿದೆ ಅವರ ಅಭಿನಯ.
ಪ್ರಿಯಮನವಳೆ ಚಿತ್ರದಲ್ಲಿ ವಿಜಯ್ ತನ್ನ ಮಗನ ವೈವಾಹಿಕ ಜೀವನದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವ ಉದ್ಯಮಿ ತಂದೆಯಾಗಿ ಅದ್ಭುತವಾದ ನಟನೆಯನ್ನು ನೀಡಿದ್ದಾರೆ.