MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಗೆಳತಿ ಗಂಡನನ್ನೇ ಮದುವೆಯಾಗಿದ್ದ ನಟಿ ಹನ್ಸಿಕಾ ಮೋಟ್ವಾನಿಗೂ ಡಿವೋರ್ಸ್ ಕೊಟ್ಟ ಸೋಹೈಲ್; ಸ್ನೇಹಿತೆ ಶಾಪ ಬಿಡಲಿಲ್ಲ!

ಗೆಳತಿ ಗಂಡನನ್ನೇ ಮದುವೆಯಾಗಿದ್ದ ನಟಿ ಹನ್ಸಿಕಾ ಮೋಟ್ವಾನಿಗೂ ಡಿವೋರ್ಸ್ ಕೊಟ್ಟ ಸೋಹೈಲ್; ಸ್ನೇಹಿತೆ ಶಾಪ ಬಿಡಲಿಲ್ಲ!

ನಟಿ ಹನ್ಸಿಕಾ ಮೋಟ್ವಾನಿ, ತನ್ನ ಆತ್ಮೀಯ ಗೆಳತಿಯ ಗಂಡ ಸೋಹೈಲ್ ಕಟೂರಿಯಾ ಅವರನ್ನು ಮದುವೆಯಾಗಿದ್ದರು. ಮದುವೆಯಾದ 4 ವರ್ಷಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ, ಈಗ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಗೆಳತಿಗೆ ಮಾಡಿದ ಮೋಸಕ್ಕೆ ತಕ್ಕ ಶಾಸ್ತಿಯಾಗಿದೆ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.

2 Min read
Author : Sathish Kumar KH
Published : Mar 11 2026, 06:30 PM IST
Share this Photo Gallery
  • FB
  • TW
  • Linkdin
  • Whatsapp
16
ಗೆಳತಿ ಗಂಡನ ಬುಟ್ಟಿಗೆ ಹಾಕೊಂಡಿದ್ದ ನಟಿ
Image Credit : X

ಗೆಳತಿ ಗಂಡನ ಬುಟ್ಟಿಗೆ ಹಾಕೊಂಡಿದ್ದ ನಟಿ

ಸೆಲೆಬ್ರಿಟಿಗಳ ಜೀವನ ವಿವಾದಾತ್ಮಕವಾಗಿ ಇರುತ್ತದೆ ಎಂಬುದಕ್ಕೆ ನಟಿ ಹನ್ಸಿಕಾ ಮೋಟ್ವಾನಿ ಜೀವನವೇ ಸಾಕ್ಷಿಯಾಗಿದೆ. ತನ್ನ ಆತ್ಮೀಯ ಗೆಳತಿಯ ಗಂಡನನ್ನೇ ಬುಟ್ಟಿಗೆ ಬೀಳಿಸಿಕೊಂಡಿದ್ದ ನಟಿ ಹನ್ಸಿಕಾ, ಗೆಳತಿ ಜೀವನಕ್ಕೆ ಕೊಳ್ಳಿ ಇಟ್ಟು, ಆಕೆಗೆ ಡಿವೋರ್ಸ್ ಕೊಡಿಸಿ ತಾನು ಆತನನ್ನು ಮದುವೆ ಮಾಡಿಕೊಂಡಿದ್ದಳು. ಒಬ್ಬರ ಸಂಸಾರವನ್ನು ಒಡೆದು ತಾನು ಮದುವೆ ಮಾಡಿಕೊಂಡಿದ್ದ ಗಂಡನೊಂದಿಗೆ ನೆಟ್ಟಗೆ ಸಂಸಾರ ಮಾಡಲಾಗದೇ ಇದೀಗ 3 ವರ್ಷಕ್ಕೆ ತಾನೂ ವಿಚ್ಛೇದನ ನೀಡಿದ್ದಾರೆ. ಗೆಳತಿಗೆ ಮಾಡಿದ ಶಾಪ ತಟ್ಟದೇ ಬಿಡಲಿಲ್ಲ ಎಂಬ ಮಾತು ನೆಟ್ಟಿಗರಿಂದ ಕೇಳಿಬರುತ್ತಿದೆ.

26
ದೇಶಮುದುರು ಮೂಲಕ ಸಿನಿಮಾ ಪಾದಾರ್ಪಣೆ
Image Credit : Instagram

ದೇಶಮುದುರು ಮೂಲಕ ಸಿನಿಮಾ ಪಾದಾರ್ಪಣೆ

ಬಾಲ್ಯದಲ್ಲಿಯೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಹನ್ಸಿಕಾ 15ನೇ ವಯಸ್ಸಿಗೆ ನಾಯಕಿಯಾದರು. ಬಾಲನಟಿಯಾಗಿ ಬಾಲಿವುಡ್‌ನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ ಹನ್ಸಿಕಾ, 'ದೇಶಮುದುರು' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಟಾಲಿವುಡ್‌ನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ ನಂತರ, ಕಾಲಿವುಡ್‌ನಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನೀಡಿದರು. ಹನ್ಸಿಕಾ ತಮ್ಮ 30ನೇ ವರ್ಷಕ್ಕೆ 50 ಚಿತ್ರಗಳನ್ನು ಪೂರ್ಣಗೊಳಿಸಿದರು. ನಂತರ ಮದುವೆಯಾಗಿ ಚಿತ್ರರಂಗದಿಂದ ದೂರವಾದರು.

Related Articles

Related image1
Hansika Divorce: ಗಂಡನಿಂದ ದೂರವಾದ ಪುನೀತ್‌ ರಾಜ್‌ಕುಮಾರ್ ಹೀರೋಯಿನ್‌: 4 ವರ್ಷದ ದಾಂಪತ್ಯ ಜೀವನ ಅಂತ್ಯ!
Related image2
ಪುನೀತ್ ಹೀರೋಯಿನ್ ದಾಂಪತ್ಯದಲ್ಲಿ ಬಿರುಕು? ಡಿವೋರ್ಸ್ ಬಗ್ಗೆ ಹನ್ಸಿಕಾ ಗಂಡ ಹೇಳಿದ್ದೇನು?
36
ಪುನೀತ್ ರಾಜ್‌ಕುಮಾರ್ ಜೊತೆಗೆ ಸಿನಿಮಾ
Image Credit : Twitter

ಪುನೀತ್ ರಾಜ್‌ಕುಮಾರ್ ಜೊತೆಗೆ ಸಿನಿಮಾ

'ಮಾಪ್ಪಿಳ್ಳೈ' ಚಿತ್ರದ ಮೂಲಕ ಕಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಹನ್ಸಿಕಾ, ದಕ್ಷಿಣ ಭಾರತದ ಸ್ಟಾರ್ ನಟರಾದ ಅಲ್ಲು ಅರ್ಜುನ್, ಪುನೀತ್ ರಾಜ್ ಕುಮಾರ್ (ಬಿಂದಾಸ್ ಸಿನಿಮಾ), ವಿಜಯ್, ಸೂರ್ಯ, ಶಿವಕಾರ್ತಿಕೇಯನ್, ಕಾರ್ತಿ ಮುಂತಾದ ಸ್ಟಾರ್ ನಟರೊಂದಿಗೆ ನಟಿಸಿ ಸ್ಟಾರ್ ನಟಿಯಾದರು. ತೂಕ ಇಳಿಸಿಕೊಂಡ ನಂತರ ಅವರಿಗೆ ಚಿತ್ರಗಳ ಅವಕಾಶಗಳು ಕಡಿಮೆಯಾದವು.

46
ರಾಜಸ್ಥಾನ ಕೋಟೆಯಲ್ಲಿ ಅದ್ಧೂರಿ ಮದುವೆ
Image Credit : Instagram / Hansika Motwani

ರಾಜಸ್ಥಾನ ಕೋಟೆಯಲ್ಲಿ ಅದ್ಧೂರಿ ಮದುವೆ

ಇನ್ನು ನಟಿಹನ್ಸಿಕಾ ಮೋಟ್ವಾನಿ ತನ್ನ ಗೆಳತಿಯೊಂದಿಗೆ ಓಡಾಡುವಾಗ ಆಕೆಯ ಗಂಡನನ್ನೇ ಬುಟ್ಟಿಗೆ ಬೀಳಿಸಿಕೊಂಡಿದ್ದರು. ನಂತರ, ತನ್ನ ಗೆಳತಿಗೆ ಡಿವೋರ್ಸ್ ಕೊಡಿಸಿ, ಗೆಳತಿಯ ಗಂಡನೊಂದಿಗೆ 2ನೇ ಮದಿವೆ ಮಾಡಿಕೊಂಡರು. 2022ರಲ್ಲಿ ತನ್ನ ಗೆಳತಿಯ ಗಂಡ ಸೋಹೈಲ್ ಕಟೂರಿಯಾ ಅವರನ್ನು ಮದುವೆಯಾದರು. ರಾಜಸ್ಥಾನದ ಒಂದು ಹಳೆಯ ಕೋಟೆಯಲ್ಲಿ ಅವರ ವಿವಾಹ ಅದ್ದೂರಿಯಾಗಿ ಕೋಟ್ಯಾಂತರ ರೂ, ಹಣವನ್ನು ಖರ್ಚು ಮಾಡಿ ಮದುವೆಯಾದರು.

56
ಎರಡು ವರ್ಷಕ್ಕೆ ಗಂಡನಿಂದ ದೂರ
Image Credit : instagram / Hansika Motwani

ಎರಡು ವರ್ಷಕ್ಕೆ ಗಂಡನಿಂದ ದೂರ

ಇನ್ನು ಗೆಳತಿಗೆ ಮೋಸ ಮಾಡಿ ಆಕೆಯ ಗಂಡನನ್ನು ಮದುವೆಯಾಗಿ ಕೇವಲ ಎರಡು ವರ್ಷವೂ ಸಂಬಂಧ ನೆಟ್ಟಗಿರಲಿಲ್ಲ. ಮದುವೆಯಾದ ಎರಡು ವರ್ಷಗಳ ನಂತರ, ಮೊದಲ ವಾರ್ಷಿಕೋತ್ಸವಕ್ಕೆ ಗಂಡನೊಂದಿಗೆ ಇನ್ಸ್ಟಾದಲ್ಲಿ ತರಹೇವಾರಿ ಫೋಟೋ ಪೋಸ್ಟ್ ಮಾಡಿದ್ದ ಹನ್ಸಿಕಾ, ಎರಡನೇ ವರ್ಷದ ವಾರ್ಷಿಕೋತ್ಸವಕ್ಕೆ ಗಂಡನೊಂದಿಗಿನ ಫೋಟೋಗಳನ್ನು ಹಾಕಲಿಲ್ಲ. ಇದರಿಂದ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ವದಂತಿ ಹಬ್ಬಿತು. ಸೋಹೈಲ್ ಕುಟುಂಬದೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗದೆ ಹನ್ಸಿಕಾ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ ಎನ್ನಲಾಗಿತ್ತು.

66
ನಾಲ್ಕು ವರ್ಷದೊಳಗೆ ಡಿವೋರ್ಸ್
Image Credit : Google

ನಾಲ್ಕು ವರ್ಷದೊಳಗೆ ಡಿವೋರ್ಸ್

ಹನ್ಸಿಕಾ ಮತ್ತು ಸೋಹೈಲ್ ಬೇರೆಯಾಗಿದ್ದಾರೆ ಎಂಬ ವದಂತಿ ಹಬ್ಬಿದ ನಂತರ, ವಿಚ್ಛೇದನ ಪಡೆಯಲಿದ್ದಾರೆ ಎಂಬ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಹನ್ಸಿಕಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಈ ವೇಳೆ ಹನ್ಸಿಕಾಳ ಗಂಡ ಸೋಹೈಲ್ ಕಟೂರಿಯಾ ಹಿಂದೂಸ್ತಾನ್ ಟೈಮ್ಸ್‌ಗೆ ಪ್ರತಿಕ್ರಿಯಿಸಿ, ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದ್ದರು. ಆದರೆ ಬೇರೆ ವಾಸಿಸುತ್ತಿರುವುದು ನಿಜವೇ, ವಿಚ್ಛೇದನದ ವದಂತಿಗಳಲ್ಲಿ ಸತ್ಯವಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿರಲಿಲ್ಲ. ಇದೀಗ ಇಬ್ಬರೂ ವಿಚ್ಛೇದನ ಪಡೆದು ಪರಸ್ಪರ ಬೇರಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ದಕ್ಷಿಣ ಭಾರತದ ನಟಿ
ನಟಿ
ಮದುವೆ
ಪ್ರೇಮ ವಿವಾಹ
Latest Videos
Recommended Stories
Recommended image1
Hansika Divorce: ಗಂಡನಿಂದ ದೂರವಾದ ಪುನೀತ್‌ ರಾಜ್‌ಕುಮಾರ್ ಹೀರೋಯಿನ್‌: 4 ವರ್ಷದ ದಾಂಪತ್ಯ ಜೀವನ ಅಂತ್ಯ!
Recommended image2
ಮುಸ್ಲಿಂ ಹುಡುಗನ ಇಷ್ಟಪಟ್ಟ ರುದ್ರಾಕ್ಷಿ ಮಾರೋ ಹುಡುಗಿ.. ನನಗೆ ಫರ್ಮಾನ್‌ ಖಾನ್‌ ಬೇಕೇ ಬೇಕು ಅಂತಾ ಹಠ ಹಿಡಿದಿದ್ಯಾಕೆ ಮೊನಾಲಿಸಾ?
Recommended image3
ಎರಡು ತಿಂಗಳ ಬಳಿಕ ಬಂತು ಲಾಕ್‌ಡೌನ್: ಇಲ್ಲಿದೆ ಅನುಪಮಾ ಪರಮೇಶ್ವರನ್ ಸಿನಿಮಾದ ಡೀಟೇಲ್ಸ್
Related Stories
Recommended image1
Hansika Divorce: ಗಂಡನಿಂದ ದೂರವಾದ ಪುನೀತ್‌ ರಾಜ್‌ಕುಮಾರ್ ಹೀರೋಯಿನ್‌: 4 ವರ್ಷದ ದಾಂಪತ್ಯ ಜೀವನ ಅಂತ್ಯ!
Recommended image2
ಪುನೀತ್ ಹೀರೋಯಿನ್ ದಾಂಪತ್ಯದಲ್ಲಿ ಬಿರುಕು? ಡಿವೋರ್ಸ್ ಬಗ್ಗೆ ಹನ್ಸಿಕಾ ಗಂಡ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved