ದಿನಕ್ಕೆ 30 ಸಿಗರೇಟ್, ಬೆತ್ತಲೆ ಓಟ, 25 ವರ್ಷ ಸಣ್ಣವಳ ಜೊತೆ ಮದುವೆ… ಸದಾ ಸುದ್ದಿಯಲ್ಲಿರೋ ಈ ನಟ ಯಾರು ಹೇಳಿ…
ಇವರು ಬಾಲಿವುಡ್ ನ ಜನಪ್ರಿಯ ನಟ, ಮಾಡೆಲ್ ಕೂಡ ಹೌದು. ತಮ್ಮ ಫಿಟ್ನೆಸ್ ನಿಂದ ಸುದ್ದಿಯಲ್ಲಿರುವ ಇವರು, ತಮ್ಮ ನಗ್ನ ಓಟ, 25 ವರ್ಷ ಸಣ್ಣ ವಯಸ್ಸಿನವಳ ಜೊತೆ ಮದುವೆಯಾಗಿ ಮತ್ತಷ್ಟು ಹೆಡ್ ಲೈನ್ ಗಳಿಗೆ ಆಹಾರವಾದರು. ಯಾರಿವರು ಗೊತ್ತಾ?
ಮಿಲಿಂದ್ ಸೋಮನ್
ರೂಪದರ್ಶಿಯಾಗಿ ತಮ್ಮ ನಟನಾ ಕರಿಯರ್ ಪ್ರಾರಂಭಿಸಿದ ಮಿಲಿಂದ್ ಸೋಮನ್ (Milind Soman) ಅವರ ಫಿಟ್ನೆಸ್ ನೋಡಿದ್ರೆ ಅವರ ವಯಸ್ಸನ್ನು ಯಾರೂ ಕೂಡ ಊಹಿಸಲು ಸಾಧ್ಯವಿಲ್ಲ. ಮಿಲಿಂದ್ 1990 ರ ದಶಕದಲ್ಲಿ ಭಾರತೀಯ ಫ್ಯಾಷನ್ ಉದ್ಯಮಕ್ಕೆ ಕಾಲಿಟ್ಟರು ಮತ್ತು ಶೀಘ್ರದಲ್ಲೇ ಸೂಪರ್ ಮಾಡೆಲ್ ಆಗಿ ಖ್ಯಾತಿಯನ್ನು ಪಡೆದರು. ಅವರು ಅನೇಕ ದೊಡ್ಡ ಬ್ರಾಂಡ್ ಗಳ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.
ಅಂಕಿತಾ ಸೋಮನ್
ಸೂಪರ್ ಮಾಡೆಲ್ ಮತ್ತು ನಟ ಮಿಲಿಂದ್ ಸೋಮನ್ ಅವರ ಪತ್ನಿ ಅಂಕಿತಾ ಸೋಮನ್ (Ankita Soman) ಅವರಿಗಿಂತ 25 ವರ್ಷ ಚಿಕ್ಕವರು. ದೀರ್ಘಕಾಲ ರಿಲೇಶನ್ ಶಿಪ್ ನಲ್ಲಿದ್ದು ನಂತರ, ಇಬ್ಬರೂ ವಿವಾಹವಾದರು.ಇವರು ಕೂಡ, ಯೋಗ, ರನ್ನಿಂಗ್, ಫಿಟ್ನೆಸ್ ನಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.
ಈ ಜೋಡಿ ಭೇಟಿಯಾಗಿದ್ದು ಹೀಗೆ
ಒಮ್ಮೆ ಮಿಲಿಂದ್ ನೈಟ್ ಕ್ಲಬ್ ನಲ್ಲಿದ್ದಾಗ, ಅಲ್ಲಿ ಅಂಕಿತಾ ಬೇರೊಬ್ಬರೊಂದಿಗೆ ಡ್ಯಾನ್ಸ್ ಮಾಡುತ್ತಿದ್ದರಂತೆ. ಆಕೆಯನ್ನು ನೋಡಿದ ಕೂಡಲೇ ಇಂಪ್ರೆಸ್ ಆದ ಮಿಲಿಂದ್, ಆಕೆಗೆ ತಮ್ಮ ನಂಬರ್ ಕೊಟ್ಟಿದ್ದರಂತೆ. ಇದಾದ ನಂತರ ಮಾತುಕತೆಗಳು ಮತ್ತು ಡೇಟಿಂಗ್ ಎಲ್ಲವೂ ಪ್ರಾರಂಭವಾದವು. ಇಬ್ಬರು ಪ್ರೀತಿಯಲ್ಲಿ ಬಿದ್ದರು, ಕೊನೆಗೆ ಮದುವೆ ಕೂಡ ಆಗಿದ್ದಾರೆ ಈ ಜೋಡಿ.
ಮಿಲಿಂದ್ ವೃತ್ತಿಜೀವನ
ಸೂಪರ್ ಮಾಡೆಲ್ (Super Model) ಆಗಿದ್ದ ಮಿಲಿಂದ್ ಸೋಮನ್ 1995 ರಲ್ಲಿ ಅಲಿಶಾ ಚಿನೈ ಅವರ ಮ್ಯೂಸಿಕ್ ವಿಡಿಯೋ 'ಮೇಡ್ ಇನ್ ಇಂಡಿಯಾ' ದೊಂದಿಗೆ ಉದ್ಯಮಕ್ಕೆ ಪ್ರವೇಶಿಸಿದರು. ಅಲಿಶಾ ಅವರ ಈ ಹಾಡು ಎಲ್ಲಾ ವಯಸ್ಸಿನವರ ಫೇವರಿಟ್ ಆಗಿದ್ದು, ಇದರಲ್ಲಿ ಮಿಲಿಂದ್ ಅವರ ಫಿಟ್ನೆಸ್ ಹೆಚ್ಚು ಜನರ ಗಮನ ಸೆಳೆದಿತ್ತು.
ವಿವಾದ ಸೃಷ್ಟಿಸಿದ ಫೋಟೊ
1995 ರಲ್ಲಿ, ಟಫ್ ಶೂಸ್ ಜಾಹೀರಾತಿನಲ್ಲಿ, ಮಿಲಿಂದ್ ಅವರು ಮಧು ಸಪ್ರೆ ಜೊತೆ ಕಾಣಿಸಿಕೊಂಡಿದ್ದರು. ಈ ಜಾಹೀರಾತಿನಲ್ಲಿ ಮಿಲಿಂದ್ ತಮ್ಮ ದೇಹದ ಮೇಲೆ ಹಾವನ್ನು ಸುತ್ತಿದ್ದರು.. ಈ ಜಾಹೀರಾತಿನಲ್ಲಿ, ಇಬ್ಬರೂ ಬೂಟುಗಳನ್ನು ಮಾತ್ರ ಧರಿಸಿದ್ದರು, ಮಿಲಿಂದ್ ಮತ್ತು ಮಧು ಬೆತ್ತಲಾಗಿದ್ದ ಈ ಜಾಹೀರಾತು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಇಂಜಿನಿಯರಿಂಗ್ ಪದವಿ ತೊರೆದ ಮಿಲಿಂದ್
ಮಿಲಿಂದ್ ಸೋಮನ್ 1965 ರಲ್ಲಿ ಸ್ಕಾಟ್ಲೆಂಡ್ನ ಗ್ಲ್ಯಾಸ್ಗೋದಲ್ಲಿ ಜನಿಸಿದರು. ಅವರು ಈವೆಂಟ್ ಮ್ಯಾನೇಜ್ಮೆಂಟ್ನಲ್ಲಿ ತೊಡಗಿಕೊಂಡರು. ಸುಮಾರು 30 ವರ್ಷಗಳಿಂದ ಈ ವ್ಯವಹಾರದಲ್ಲಿದ್ದಾರೆ ಅನ್ನೋದು ಕೆಲವೇ ಜನರಿಗೆ ತಿಳಿದಿದೆ. ಅವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದರು. ಆದರೆ ತಾನೊಬ್ಬ ಉತ್ತಮ ಇಂಜಿನಿಯರಿಂಗ್ ಆಗಲು ಸಾಧ್ಯ ಇಲ್ಲ ಎಂದು ಅವರು ಅರ್ಧದಲ್ಲೇ ಪದವಿ ಬಿಟ್ಟಿದ್ದರು.
ಈ ಚಿತ್ರಕ್ಕೆ ಆಫರ್ ಬಂದಿತ್ತು
ಮಿಲಿಂದ್ ವನ್ಯಜೀವಿ ಪ್ರೇಮಿಯಾಗಿದ್ದು, ಅವರ ಮನೆಯಲ್ಲಿ ಸಾಕು ಹಲ್ಲಿಗಳು ಮತ್ತು ಹಾವುಗಳಿವೆ ಎಂದು ವರದಿಯಾಗಿದೆ. ಮಿಲಿಂದ್ ಸೋಮನ್ ಅವರಿಗೆ 'ಜೋ ಜೀತಾ ವೋಹಿ ಸಿಕಂದರ್' ಚಿತ್ರದಲ್ಲಿ ದೀಪಕ್ ಟಿಜೋರಿ ಪಾತ್ರವನ್ನು ನೀಡಲಾಯಿತು, ಆದರೆ ಕೆಲವು ಕಾರಣಗಳಿಂದಾಗಿ ಅವರು ಈ ಚಿತ್ರವನ್ನು ಮಾಡಲು ಸಾಧ್ಯವಾಗಲಿಲ್ಲ.
ದಿನಕ್ಕೆ 30 ಸಿಗರೇಟು ಸೇದುತ್ತಿದ್ದ ಮಿಲಿಂದ್
ಫಿಟ್ನೆಸ್ ಫ್ರೀಕ್ (Fitness Freek)ಆಗುವ ಮೊದಲು, ಮಿಲಿಂದ್ ದಿನಕ್ಕೆ 30 ಸಿಗರೇಟುಗಳನ್ನು ಸೇದುತ್ತಿದ್ದರು. 2004 ರಲ್ಲಿ, ಅವರು ಈ ಅಭ್ಯಾಸವನ್ನು ತಮ್ಮ ಜೀವನದಿಂದ ಶಾಶ್ವತವಾಗಿ ತೆಗೆದುಹಾಕಿದರು. 2012ರಲ್ಲಿ ದೆಹಲಿಯಿಂದ ಮುಂಬೈಗೆ 30 ದಿನಗಳಲ್ಲಿ 1500 ಕಿ.ಮೀ ಓಡುವ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದರು. ಅವರು ಭಾರತದ ಮೊದಲ ಇಂಗ್ಲಿಷ್ ಟಿವಿ ಧಾರಾವಾಹಿ 'ಎ ಮೌತ್ ಫುಲ್ ಆಫ್ ಸ್ಕೈ' ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. 'ನಾಗರಿಕ್' ಎಂಬ ಮರಾಠಿ ಚಿತ್ರದಲ್ಲಿನ ಪಾತ್ರಕ್ಕಾಗಿ ಮಿಲಿಂದ್ ತಮ್ಮ ಮೊದಲ ಪ್ರಶಸ್ತಿಯನ್ನು ಗೆದ್ದರು.
4 ವರ್ಷಗಳ ರಾಷ್ಟ್ರೀಯ ಚಾಂಪಿಯನ್
ಮಿಲಿಂದ್ ಸೋಮನ್ ಅತ್ಯುತ್ತಮ ಈಜುಗಾರ. ಅವರು ತಮ್ಮ 9 ನೇ ವಯಸ್ಸಿನಲ್ಲಿ ತಮ್ಮ ಮೊದಲ ರಾಷ್ಟ್ರೀಯ ಚಾಂಪಿಯನ್ ಶಿಪ್ ಪದಕವನ್ನು ಗೆದ್ದರು. ಅವರು 1984ರಿಂದ ಸತತ 4ವರ್ಷಗಳ ಕಾಲ ರಾಷ್ಟ್ರೀಯ ಚಾಂಪಿಯನ್ ಬ್ರೆಸ್ಟ್ ಸ್ಟ್ರೋಕ್ ಸ್ವಿಮ್ಮರ್ ಪ್ರಶಸ್ತಿಯನ್ನು ಪಡೆದಿದ್ದರು.
ಪಿಂಕಥಾನ್ ಮ್ಯಾರಥಾನ್ ಚಲನಚಿತ್ರೋದ್ಯಮದ ಈ ಸೂಪರ್ ಸ್ಟಾರ್ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ, ಅವುಗಳಲ್ಲಿ, ಅವರು ಭಾರತದಾದ್ಯಂತ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಪಿಂಕಥಾನ್ ಮ್ಯಾರಥಾನ್ ನ ಸಕ್ರಿಯ ಸದಸ್ಯರಾಗಿದ್ದರು. ಪತ್ನಿ ಅಂಕಿತಾ ಹಾಗೂ ಇವರ ತಾಯಿ ಉಷಾ ಸೋಮನ್ ಕೂಡ ಹಲವಾರು ಮ್ಯಾರಥಾನ್ ಗಳಲ್ಲಿ ಭಾಗಿಯಾಗಿದ್ದಾರೆ.
ಮಿಲಿಂದ್ ಸೋಮನ್ 2006 ರಲ್ಲಿ ಫ್ರೆಂಚ್ ನಟಿ ಮಿಲಿನ್ ಜಾಂಪೆನೊಯ್ ಅವರನ್ನು ವಿವಾಹವಾದರು, ಆದರೆ ಈ ವಿವಾಹವು ಕೇವಲ 3 ವರ್ಷಗಳಲ್ಲಿ ಕೊನೆಯಾಯಿತು. ಇನ್ನು ಮಿಲಿಂದ್ ಸೋಮನ್ ರನ್ನಿಂಗ್ ಹೊರತಾಗಿ ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಕೂಡ ಮಾಡಿದ್ದಾರೆ. ಸೈಫ್ ಅಲಿ ಖಾನ್ ಅವರ 'ಚೆಫ್' ಚಿತ್ರದಲ್ಲೂ ಅವರು ಕಾಣಿಸಿಕೊಂಡರು
ನಗ್ನವಾಗಿ ಓಡಿದ್ದ ಮಿಲಿಂದ್
ಮಿಲಿಂದ್ ಸೋಮನ್ ಅವರು ವಯಸ್ಸಾದರೂ ಹೇಗೆ ಫಿಟ್ ಆಗಿರಬಹುದು ಅನ್ನೋದನ್ನು 59ನೇ ವಯಸ್ಸಿನಲ್ಲಿ ತೋರಿಸಿಕೊಟ್ಟಿದ್ದಾರೆ. ಇನ್ನು ಮಿಲಿಂದ್ ಒಮ್ಮೆ ಬಟ್ಟೆಗಳಿಲ್ಲದೆ ನಗ್ನವಾಗಿ ಕಡಲತೀರದಲ್ಲಿ ರನ್ನಿಂಗ್ ಮಾಡುವ ಮೂಲಕವೂ ಭಾರಿ ಸುದ್ದಿಯಲ್ಲಿದ್ದರು.