ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿರುವ ಶ್ರದ್ಧಾ ಕಪೂರ್ ಫೋಟೋ ವೈರಲ್!
ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಈ ದಿನಗಳಲ್ಲಿ ಬಾಯ್‌ಫ್ರೆಂಡ್ ರೋಹನ್ ಶ್ರೇಷ್ಠಾ ಜೊತೆ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಮಾಲ್ಡೀವ್ಸ್‌ನಲ್ಲಿ ವೇಕೆಷನ್‌ನಲ್ಲಿರುವ ಶ್ರದ್ಧಾರ ಕೆಲವು ಪೋಟೋಗಳು ವೈರಲ್ ಆಗಿವೆ. ಒಂದು ಫೋಟೋದಲ್ಲಿ ಶ್ರದ್ಧಾ ಸಮುದ್ರದ ದಡದಲ್ಲಿ ಬ್ರೇಕ್‌ಫಾಸ್ಟ್ ಮಾಡುತ್ತಿದ್ದಾರೆ. ಶಾರ್ಟ್ ಹಾಗೂ ಬ್ರಾಲೆಟ್ ಟಾಪ್ ಧರಿಸಿ ಕೂದಲು ಓಪನ್ ಬಿಟ್ಟಿರುವ ಶ್ರದ್ಧಾರ ನೋ ಮೇಕಪ್ ಪೋಟೋವನ್ನು ಫ್ಯಾನ್ಸ್ ಸಖತ್ ಇಷ್ಟಪಟ್ಟಿದ್ದಾರೆ.
ಶ್ರೀದೇವಿ ಅವರ ಚಾಲ್‌ಬಾಜ್ ಸಿನಿಮಾದ ರಿಮೇಕ್‌ನಲ್ಲಿ ನಟಿಸಲಿದ್ದಾರೆ. ಇದೇ ಮೊದಲಬಾರಿಗೆ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಕ್ತಿ ಕಪೂರ್ ಪುತ್ರಿ.
ಶ್ರದ್ಧಾರ ನೋ ಮೇಕಪ್ ಪೋಟೋವನ್ನು ಫ್ಯಾನ್ಸ್ ಸಖತ್ ಇಷ್ಟಪಟ್ಟಿದ್ದಾರೆ.
ಈ ದಿನಗಳಲ್ಲಿ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಇರುವ ನಟಿ ಮಧ್ಯದಲ್ಲಿ ಸಮಯ ತೆಗೆದುಕೊಂಡು ಹಾಲಿಡೇ ಕೂಡ ಎಂಜಾಯ್ ಮಾಡುತ್ತಿದ್ದಾರೆ.
ಸಮುದ್ರದ ದಡದಲ್ಲಿ ಹಳದಿ ಡ್ರೆಸ್ ಜೊತೆ ಕಿವಿಯ ಮೇಲೆ ಹೂವು ಹಾಗೂ ಸನ್‌ಗ್ಲಾಸ್ ಜೊತೆ ಕಾಣಿಸಿಕೊಂಡಿರುವ ಶ್ರದ್ದಾರ ಪೋಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಶ್ರದ್ಧಾರ ಹಾಲಿಡೇ ಫೋಟೋಗಳು ಬಾರಿ ಲೈಕ್ ಪಡೆದಿವೆ.
ಹಾರ್ಟ್ ಹಾಗೂ ಬೆಂಕಿ ಎಮೋಜಿಗಳ ಜೊತೆ ಬ್ಯುಟಿಫುಲ್ ಎಂದೂ ಕಾಮೆಂಟ್ ಮಾಡಿದ್ದಾರೆ ಫಾಲೋವರ್ಸ್.
ಶೀಘ್ರದಲ್ಲೇ ಇವರ ಅಡ್ವೆಂಚರ್ ಸಿನಿಮಾ ಹಲೋ ಚಾರ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.
ಅವರು ಈ ಚಿತ್ರವನ್ನು ವಿಡಿಯೋ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಆದರ್ ಜೈನ್ ಮತ್ತು ಜಾಕಿ ಶ್ರಾಫ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.