ಶಿಲ್ಪಾಶೆಟ್ಟಿ ಅಕ್ಷಯ್ ಕುಮಾರ್ ಬ್ರೇಕಪ್: ಏಕಕಾಲದಲ್ಲಿ ಇಬ್ಬರಿಗೆ ಮೋಸ ಮಾಡಿದ ನಟ!
ಒಂದು ಕಾಲದಲ್ಲಿ ಬಾಲಿವುಡ್ (Bollywood) ಸೂಪರ್‌ಸ್ಟಾರ್, ಅಕ್ಷಯ್ ಕುಮಾರ್ (Akshay Kumar) ಅವರನ್ನು ಲೇಡೀಸ್ ಮ್ಯಾನ್ ಎಂದು ಕರೆಯಲಾಗುತ್ತಿತ್ತು .ಸಾಲು ಸಾಲು ಆಫೇರ್‌ಗಳು ಮತ್ತು ಸಹ-ನಟರೊಂದಿಗಿನ ಅವರ ಸಂಬಂಧಗಳು ಇದಕ್ಕೆ ಕಾರಣವಾಗಿದೆ. 90 ರ ದಶಕದ ಆರಂಭದಲ್ಲಿ, ನಟಿ ಟ್ವಿಂಕಲ್ ಖನ್ನಾ (Twinkle Khanna) ಳನ್ನುಮದುವೆಯಾದ ನಂತರವೂ ಅಕ್ಷಯ್ ರವೀನಾ ಟಂಡನ್, ಪೂಜಾ ಬಾತ್ರಾ, ಶಿಲ್ಪಾ ಶೆಟ್ಟಿ (Shilpa Shetty) ಜೊತೆ ಡೇಟಿಂಗ್ (Dating) ಮಾಡಿದ್ದರಂತೆ. ಖಿಲಾಡಿ ತು ಅನಾರಿ ಸಹನಟಿ ಶಿಲ್ಪಾ ಶೆಟ್ಟಿ ಜೊತೆಗಿನ ಅಕ್ಷಯ್ ಅವರ ಸಂಬಂಧ ಮತ್ತು ಅಸಹ್ಯಕರ ಬ್ರೇಕಪ್ (Break Up) ಬಗ್ಗೆ ವಿವರ ಇಲ್ಲಿದೆ.
ಅಕ್ಷಯ್ ಕುಮಾರ್ ಹಾಗೂ ಶಿಲ್ಪಾ ಶೆಟ್ಟಿಯ ಆಫೇರ್ ಮತ್ತು ಬ್ರೇಕಪ್ ಆ ಸಮಯದಲ್ಲಿ ಬಿ ಟೌನ್‌ನಲ್ಲಿ ದೊಡ್ಡ ಸುದ್ದಿ ಆಗಿತ್ತು ಮತ್ತು ಸಾಕಷ್ಟು ಸದ್ದು ಮಾಡಿತು. ನಂತರ ಶಿಲ್ಪಾ ಶೆಟ್ಟಿ (Shilpa Shetty) ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತಾಡಿದ್ದರು.
2000 ರಲ್ಲಿ ಸಂದರ್ಶನವೊಂದರಲ್ಲಿ, ಶಿಲ್ಪಾ ಶೆಟ್ಟಿ ಬ್ರೇಕಪ್, ವಂಚನೆ, ದ್ರೋಹ ಮತ್ತು ಅದರಿಂದ ಹೇಗೆ ಹೊರಬರಬಹುದು ಎಂಬುದರ ಕುರಿತು ಬಹಿರಂಗಪಡಿಸಿದರು. ತನ್ನ ಅತ್ಯುತ್ತಮ ಸ್ನೇಹಿತೆಯಾದ ಟ್ವಿಂಕಲ್ ಖನ್ನಾ (Twinkle Khanna) ಮತ್ತು ನನ್ನ ಜೊತೆ ಏಕ ಕಾಲದಲ್ಲಿ ಅಕ್ಷಯ್ ಮೋಸ ಮಾಡಿದ್ದರು ಎಂದಿದ್ದರು.
ಆದರೆ ಅವರು ಟ್ವಿಂಕಲ್ ವಿರುದ್ಧ ಯಾವುದೇ ಸಿಟ್ಟಿಲ್ಲ. ಏಕೆಂದರೆ ಅವಳ ಸಂಗಾತಿಯು ಅವರ ಸಂಬಂಧದಲ್ಲಿ ವಿಶ್ವಾಸ ದ್ರೋಹಿಯಾಗಿದ್ದ. 'ಅವನು ನನಗೆ ಮೋಸ ಮಾಡಬಹುದು, ಅದು ಕೂಡ ನಮ್ಮ ಸಂಬಂಧದೊಂದಿಗೆಎಂದು ನಾನು ನಿರೀಕ್ಷಿಸಿಯೇ ಇರಲಿಲ್ಲ,' ಎಂದು ಹೇಳಿದ್ದರು.
ಟ್ವಿಂಕಲ್ ಬಗ್ಗೆ ಮಾತನಾಡುತ್ತಾ, ಶಿಲ್ಪಾ ಆಕೆಯ ಬಗ್ಗೆ ಅಸಮಾಧಾನ ಹೊಂದಿಲ್ಲ; ಅವಳಿಗೆ ಮೋಸ ಮಾಡಿದ ಅಕ್ಷಯ್ ನ ತಪ್ಪು, 'ಇಲ್ಲ, ನನಗೆ ಅವಳ ಮೇಲೆ ಯಾವುದೇ ಅಸಮಾಧಾನವಿಲ್ಲ. ಅವಳ ಗಂಡ ನನಗೆ ಮೋಸ ಮಾಡುತ್ತಿದ್ದರೆ ಅವಳ ತಪ್ಪೇನು? ಬೇರೆ ಯಾವುದೇ ಮಹಿಳೆಯನ್ನು ದೂಷಿಸುವುದರಲ್ಲಿ ಅರ್ಥವಿಲ್ಲ, ಅದು ಸಂಪೂರ್ಣವಾಗಿ ಅಕ್ಷಯ್ ಎಸಗಿದ ದ್ರೋಹ,' ಎಂದು ಸಂದರ್ಶನದಲ್ಲಿ ಶಿಲ್ವಾ ಹೇಳಿದ್ದರು.
ಅದೇ ಸಂದರ್ಶನದಲ್ಲಿ, ತಾನು ಅಕ್ಷಯ್ ಜೊತೆ ಮತ್ತೆ ಕೆಲಸ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು ಮತ್ತು ಹಿಂದಿನದನ್ನು ಮರೆಯುವುದು ಸುಲಭವಲ್ಲ ಎಂದು ಹೇಳಿದರು. ಈ ಸಂದರ್ಶನದ ನಂತರ, ಅಕ್ಷಯ್ ಗಮನ ಸೆಳೆದರು ಆದರೆ ಅವರು ತಮ್ಮ ಮೇಲೆ ಹೊರಿಸಲಾದ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದರು.
'ಅಕ್ಷಯ್ ಕುಮಾರ್ ನನ್ನನ್ನು ಬಳಸಿಕೊಂಡನು ಮತ್ತು ಅವರು ಬೇರೊಬ್ಬರು ಸಿಕ್ಕ ನಂತರ ನನ್ನನ್ನು ಕೈಬಿಟ್ಟನು. ನಾನು ಅಸಮಾಧಾನಗೊಂಡಿರುವ ಏಕೈಕ ವ್ಯಕ್ತಿ ಅವನು. ಆದರೆ ಅವನು ಎಲ್ಲವನ್ನೂ ಮರಳಿ ಪಡೆಯುತ್ತಾನೆ ಎಂದು ನನಗೆ ಖಾತ್ರಿಯಿದೆ. ಹಿಂದಿನದನ್ನು ಇಷ್ಟು ಬೇಗ ಮರೆಯುವುದು ಸುಲಭವಲ್ಲ, ಆದರೆ ನಾನು ಮುಂದುವರಿಯಲು ಶಕ್ತಿ ಹೊಂದಿದ್ದಕ್ಕೆ ನನಗೆ ಸಂತೋಷವಾಗಿದೆ. ಇಂದು, ನನಗೆ ಅವನು ಮರೆತುಹೋದ ಅಧ್ಯಾಯ. ನಾನು ಆತನೊಂದಿಗೆ ಮತ್ತೆ ಕೆಲಸ ಮಾಡುವುದಿಲ್ಲ' ಎಂದು ಅವರು ಹೇಳಿದರು.
ಧಡ್ಕನ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಎಮೋಷನಲ್ ಅಗಿ ಶಿಲ್ಪಾ ಮಾತನಾಡುತ್ತಾ, 'ನಿರ್ಮಾಪಕರಿಗೆ ತೊಂದರೆ ಆಗದ ಹಾಗೆ ನಮ್ಮ ಸಿನಿಮಾ ಮುಗಿದು ಬಿಡುಗಡೆಯಾಗಬೇಕೆಂದು ನಾನು ಬಯಸಿದ್ದೆ. ನನ್ನ ವೈಯಕ್ತಿಕ ಜೀವನ ಹಾಳಾದ ಕಾರಣ ನಾನು ಅವರಿಗೆ ಕಿರುಕುಳ ನೀಡಲು ಸಾಧ್ಯವಿಲ್ಲ. ಹಾಗಾಗಿ, ನಾನು ಧಡ್ಕನ್ ಚಿತ್ರ ಮುಗಿಯುವವರೆಗೆ ಕಾಯುವುದನ್ನು ಆಯ್ಕೆ ಮಾಡಿಕೊಂಡೆ ಎಂದು ಹೇಳಿದ್ದರು ಶಿಲ್ಪಾ ಶೆಟ್ಟಿ.
ಈಗ ಅಕ್ಷಯ್ ಟ್ವಿಂಕಲ್ ಖನ್ನಾರನ್ನು ವಿವಾಹವಾಗಿ ಆರವ್ ಕುಮಾರ್ ಮತ್ತು ನಿತಾರಾ ಕುಮಾರ್ ಪೋಷಕರಾಗಿದ್ದಾರೆ. ಮತ್ತೊಂದೆಡೆ, ಶಿಲ್ಪಾ ರಾಜ್ ಕುಂದ್ರಾಳನ್ನು ವಿವಾಹವಾದರು, ಮತ್ತು ಅವರಿಗೆ ಸಮೀಶಾ ಶೆಟ್ಟಿ ಕುಂದ್ರಾ ಮತ್ತು ವಯಾನ್ ರಾಜ್ ಕುಂದ್ರಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಇತ್ತೀಚೆಗೆ, ಶಿಲ್ಪಾ ಅವರ ವೈಯಕ್ತಿಕ ಜೀವನವು ಅವರ ಉದ್ಯಮಿ ಪತಿಯಿಂದಾಗಿ ಸುದ್ದಿಯಲ್ಲಿತ್ತು. ಕೆಲವು ತಿಂಗಳ ಹಿಂದೆ, ಪೋರ್ನ್ ಸಿನಿಮಾ (Porn Movie) ರಾಕೆಟ್ ಜೊತೆಯ ಸಂಪರ್ಕದಿಂದಾಗಿ ರಾಜ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಈಗ ಸದ್ಯಕ್ಕೆ ಬೇಲ್ ಮೇಲೆ ಹೊರಬಂದಿದ್ದಾರೆ.