'ಬಿಕಿನಿ ಧರಿಸಿದಾಗ ನನಗಿಂತಲೂ ನಾಚ್ಕೊಂಡಿದ್ದವು ಫೋಟೋಗ್ರಾಫರ್'
ಶರ್ಮಿಳಾ ಟ್ಯಾಗೋರ್ ಒಂದು ಕಾಲದ ಬೋಲ್ಡ್ ಹಾಗೂ ಬ್ಯೂಟಿಫುಲ್ ನಟಿ. ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಶರ್ಮಿಳಾ ಬಾಲಿವುಡ್‌ನ ಎವರ್‌ಗ್ರೀನ್ ನಟಿ. ಮ್ಯಾಗಜೀನ್ ಮುಖಪುಟಕ್ಕಾಗಿ ಬಿಕಿನಿ ಧರಿಸಿದ ಭಾರತದ ಮೊದಲ ಪ್ರಮುಖ ನಟಿ ಎಂಬ ಹೆಗ್ಗಳಿಕೆಗೆ ಇವರದ್ದು.

ಶರ್ಮಿಳಾ ಟ್ಯಾಗೋರ್ ತಮ್ಮ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ನಿಯತಕಾಲಿಕೆಗಾಗಿ ಬಿಕಿನಿ ಧರಿಸಿದ ಭಾರತದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಶರ್ಮಿಳಾ ಫಿಲ್ಮ್‌ಫೇರ್ ಮ್ಯಾಗಜೀನ್ ಮುಖಪುಟಕ್ಕಾಗಿ ಕಪ್ಪು ಮತ್ತು ಬಿಳಿ ಬಿಕಿನಿಯಲ್ಲಿ ಪೋಸ್ ನೀಡಿದ್ದರು.
ಫಿಲ್ಮ್ ಕಂಪ್ಯಾನಿಯನ್ ಜೊತೆಗಿನ ಇತ್ತೀಚಿನ ಆನ್‌ಲೈನ್ ಚಾಟ್‌ನಲ್ಲಿ ಅವರು ವಿಚಾರವೊಂದನ್ನು ಬಹಿರಂಗಪಡಿಸಿದರು.
ಬಿಕಿನಿ ಧರಿಸಿದ್ದ ಬಗ್ಗೆ 'ಇದು ಅಸಾಂಪ್ರದಾಯಿಕ ಆಯ್ಕೆಯಾಗಿದೆ' ಎಂದು ನಟಿ ಹೇಳುತ್ತಾರೆ.
ಜನರು ಆ ಶಾಟ್ ಅನ್ನು ಮರೆಯಲು ನನಗೆ ಬಿಡುವುದಿಲ್ಲ ಕಾರಣ ಏನು ಎಂದು ಗೊತ್ತಿಲ್ಲ. ಆದರೆ ನಾನು ಚೆನ್ನಾಗಿ ಕಾಣುತ್ತಿದ್ದೇನೆ ಎಂದು ನಾನು ಭಾವಿಸುತ್ತೇನೆ.
ಕವರ್ ಶೂಟ್‌ಗಾಗಿ ಬಿಕಿನಿಯಲ್ಲಿ ಪೋಸ್ ನೀಡುವುದು ಅವರ ಮೊದಲ ಪ್ಲಾನ್ ಆಗಿತ್ತು.
'ಚಿಕಿನಿ ಧರಿಸಿದಾಗ ನನಗಿಂತ ನಾಚಿಕೆಪಟ್ಟವರು ಫೋಟೋಗ್ರಾಫರ್. ಆ ಸಂದರ್ರ್ಭದಲ್ಲಿ ನಾನು ಚೆನ್ನಾಗಿ ಕಾಣುತ್ತಿದ್ದೆ ಎಂದು ಶರ್ಮಿಳಾ ಹೇಳಿಕೊಂಡಿದ್ದಾರೆ.
ಫೋಟೋಗ್ರಾಫರ್ ಎದುರು ಬಿಕಿನಿಯಲ್ಲಿ ನಿಂತಾಗ ಅವರೇ ಗೊಂದಲಕ್ಕೆ ಒಳಗಾಗಿದ್ದರು.
'ಕೆಲವು ಶಾಟ್‌ಗಳಲ್ಲೆಂತೂ ಪೋಟೋಗ್ರಾಫರ್ ಮುಂದಾಗಿ ನಿಮ್ಮ ದೇಹದ ಕೆಲ ಭಾಗ ಮುಚ್ಚಿಕೊಳ್ಳಿ ಎಂದು ಸಲಹೆ ನೀಡಿದ್ದರು. ಇಂಥ ಕೆಲಸಗಳು ಒಮ್ಮೊಮ್ಮೆ ಸಂತಸ ತಂದಿಡುತ್ತವೆ ಎಂದು ಅಂದಿನ ಘಟನಾವಳಿಗಳನ್ನು ಶರ್ಮಿಳಾ ಹೇಳಿದ್ದರು .