Shahrukh - Salman ಬಾಲಿವುಡ್ ಸ್ಟಾರ್‌ಗಳ ಹೋಳಿ ಹಬ್ಬದ ಥ್ರೋಬ್ಯಾಕ್ ಫೋಟೋಗಳು
ದೇಶದೆಲ್ಲೆಡೆ ಹೋಳಿ (Holi 2022) ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬಾಲಿವುಡ್ ನಲ್ಲೂ ಸಹ ಹೋಳಿ ಹಬ್ಬ ತುಂಬಾ ಸಂಭ್ರಮದಿಂದ ಆಚರಿಸಲಾಗುತ್ತದೆ. ಹೋಳಿಯ ಸಮಯದಲ್ಲಿ ಬಾಲಿವುಡ್ ಸೆಲೆಬ್ರೆಟಿಗಳ ಆಚರಣೆಯ ಹಳೆ ಫೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.
ಬಾಲಿವುಡ್ ಮೋಸ್ಟ ಫೇಮಸ್ ಕಪಲ್‌ಗಳಾದ ಶಾರುಖ್ ಖಾನ್ ಮತ್ತು ಗೌರಿ ಖಾನ್ ಹೋಳಿ ಆಡುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದ್ದವು. ಶತ್ರುಘ್ನ ಸಿನ್ಹಾ ಅವರ ಪುತ್ರಿ ಸೋನಾಕ್ಷಿ ಸಿನ್ಹಾ ಕೂಡ ಕಪ್ಪು ಟಾಪ್ ಮತ್ತು ಸನ್‌ಗ್ಲಾಸ್‌ನೊಂದಿಗೆ ಹೋಳಿ ಆಡುತ್ತಿರುವುದು ಕಂಡುಬಂದಿತ್ತು.
ಪತಿ ಶ್ರೀರಾಮ್ ನೆನ್ ಜೊತೆ ಮಾಧುರಿ ದೀಕ್ಷಿತ್ ಹೋಳಿ ಆಚರಿಸಿದ್ದು ಹೀಗೆ. ಮತ್ತೊಂದೆಡೆ, ರಾಖಿ ಸಾವಂತ್ ಮತ್ತು ಬಿಗ್ ಬಾಸ್ ಎಕ್ಸ್ ಸ್ಪರ್ಧಿ ಸೋಫಿಯಾ ಹಯಾತ್ ಹೋಳಿಯಲ್ಲಿ ಈ ರೀತಿ ಕಾಣಿಸಿಕೊಂಡರು.
ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಹಲವಾರು ವರ್ಷಗಳ ಹಿಂದೆ ಹೋಳಿಯಲ್ಲಿ ಹೀಗೆ ಕಾಣಿಸಿಕೊಂಡಿದ್ದರು. ಮತ್ತೊಂದೆಡೆ, ಶಾರುಖ್ ಖಾನ್ ತಮ್ಮ ಪತ್ನಿ ಗೌರಿಯೊಂದಿಗೆ ಹೋಳಿಯಲ್ಲಿ ಪೋಸ್ ನೀಡಿದ್ದರು.
ಕಳೆದ ವರ್ಷ, ಕತ್ರಿನಾ ಹೋಳಿ ಅತ್ಯಂತ ಸರಳ ರೀತಿಯಲ್ಲಿ ಆಚರಿಸಿದರು. ಮದುವೆಯ ನಂತರ ಕತ್ರಿನಾ ಮತ್ತು ವಿಕ್ಕಿಯ ಮೊದಲ ಹೋಳಿಯಾಗಿದೆ ಮತ್ತು ಈ ನವ ದಂಪತಿಗಳ ಹೋಳಿ ಫೋಟೋ ಆಗಲೇ ವೈರಲ್ ಕೂಡ ಆಗಿದೆ.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಹೋಳಿ ಆಡುತ್ತಿರುವ ಫೋಟೋಗಳು ವೇಗದಲ್ಲಿ ವೈರಲ್ ಆಗಿದ್ದವು. ಕೆಲವು ವರ್ಷಗಳ ಹಿಂದೆ ಅಂಬಾನಿ ಹೋಳಿ ಪಾರ್ಟಿ ಸಂದರ್ಭದಲ್ಲಿ ಪ್ರಿಯಾಂಕಾ ಚೋಪ್ರಾ ನಿಕ್ ಜೋನಾಸ್ ಫೋಟೋವನ್ನು ತೆಗೆಯಲಾಗಿದೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್ ಕೂಡ ಸೆರೆಯಾಗಿದ್ದಾರೆ.
ಹೋಳಿ ಆಚರಣೆಯಲ್ಲಿ ಅಕ್ಷಯ್ ಕುಮಾರ್ ತಲೆಯ ಮೇಲೆ ಬಕೆಟ್ ಮತ್ತು ದೇಹದಾದ್ಯಂತ ಬಣ್ಣ ಬಳಿದುಕೊಂಡು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡರು. ಮತ್ತೊಂದೆಡೆ ಬಾಲಿವುಡ್ ನಟಿ ಪ್ರೀತಿ ಜಿಂಟಾ ತಮ್ಮ ಪತಿಯೊಂದಿಗೆ ಹೋಳಿ ಆಚರಿಸಿದ್ದಾರೆ
ಸನ್ನಿ ಲಿಯೋನ್ ಅವರ ಹೋಳಿ ಆಚರಣೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಹೋಳಿ ಹಬ್ಬದಂದು ಸನ್ನಿ ಲಿಯೋನ್ ತನ್ನ ಮಗನೊಂದಿಗೆ ಕಾಣಿಸಿಕೊಂಡಿದ್ದಾರೆ. ಪ್ರತಿಯೊಂದು ಸಂದರ್ಭದಲ್ಲೂ ಸನ್ನಿ ಲಿಯೋನ್ ತನ್ನ ಕುಟುಂಬದೊಂದಿಗೆ ಸಂಭ್ರಮದಿಂದ ಆಚರಿಸುತ್ತಾರೆ.
ರಿಯಲ್ ಲೈಫ್ ನಲ್ಲಿ ಮಾತ್ರವಲ್ಲ, ರಿಯಲ್ ಲೈಫ್ ನಲ್ಲೂ ಸ್ಟಾರ್ ಗಳು ಹೋಳಿಯನ್ನು ಆಚರಿಸುತ್ತಿದ್ದಾರೆ. ನೇಹಾ ಧುಪಿಯಾ ಹೋಳಿ ಹಬ್ಬದಲ್ಲಿ ಹೀಗೆ ಕಾಣಿಸಿದ್ದರು ಪೂನಂ ಪಾಂಡೆ ಕೂಡ ಹೋಳಿ ಆಡಿದರು.