ಕಿಂಗ್ ಖಾನ್‌ ಅಂತ ಸುಮ್ನೆ ಬಂದಿಲ್ಲ ಹೆಸರು ಶಾರುಖ್‌ಗೆ, ಒಟ್ಟು ಆಸ್ತಿ ಎಷ್ಟು ಗೊತ್ತಾ?

First Published 19, Jul 2020, 3:43 PM

ಬಾಲಿವುಡ್‌ನಲ್ಲಿ 'ಕಿಂಗ್ ಆಫ್ ರೋಮ್ಯಾನ್ಸ್' ಎಂದು ಜನಪ್ರಿಯವಾಗಿರುವ ಶಾರುಖ್ ಖಾನ್ ಸುಮಾರು ಒಂದೂವರೆ ವರ್ಷಗಳಿಂದ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಶಾರುಖ್ ಕೊನೆಯ ಬಾರಿಗೆ ಡಿಸೆಂಬರ್ 2018ರ  ಜಿರೋ ಸಿನಿಮಾದಲ್ಲಿ ಕಾಣಿಸಿಕೊಂಡರು. ಇದರ ಹೊರತಾಗಿಯೂ, ಶಾರುಖ್ ಖಾನ್ ಐಷಾರಾಮಿ ಜೀವನಶೈಲಿಯಲ್ಲಿ ಯಾವುದೇ ಕೊರತೆಯಿಲ್ಲ. ಒಂದೂವರೆ ವರ್ಷ ಮನೆಯಲ್ಲಿ ಕುಳಿತ ನಂತರವೂ ಶಾರುಖ್ ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರಿಗಿಂತ ಹೆಚ್ಚು ಶ್ರೀಮಂತರು.

ಶಾರುಖ್ 600 ಮಿಲಿಯನ್ ಡಾಲರ್ (ಸುಮಾರು 4500 ಕೋಟಿ ರೂ.) ಆಸ್ತಿಯನ್ನು ಹೊಂದಿದ್ದಾರೆ. ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಸಲ್ಮಾನ್ ಖಾನ್ ಈ ವಿಷಯದಲ್ಲಿ ತೀರಾ ಹಿಂದುಳಿದಿದ್ದಾರೆ. ಸಲ್ಮಾನ್ ಖಾನ್ 310 ಮಿಲಿಯನ್ ಡಾಲರ್ (2325 ಕೋಟಿ) ಆಸ್ತಿಯನ್ನು ಹೊಂದಿದ್ದರೆ, ಅಕ್ಷಯ್ ಕುಮಾರ್ ಅವರ ಆಸ್ತಿ  273 ಮಿಲಿಯನ್ ಡಾಲರ್‌ (2047 ಕೋಟಿ) ಎಂದು ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಮಾಹಿತಿ ಹೇಳುತ್ತದೆ.

ಬಹಳ ದಿನಗಳಿಂದ ಕಿಂಗ್ ಖಾನ್‌ ಶಾರುಖ್‌ರ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ  ಹೇಳಿಕೊಳ್ಳುವಷ್ಟು ಹೆಸರು ಮಾಡಿಲ್ಲ.ಅದರೂ ಶಾರುಖ್‌ ಇನ್ನೂ ಅದೇ ಛಾಪನ್ನು ಉಳಿಸಿಕೊಂಡಿದ್ದಾರೆ.

ಟಿವಿಯ ಮೂಲಕ ಕೆರಿಯರ್‌ ಶುರುಮಾಡಿ ಬಾಲಿವುಡ್‌ನ ಅತಿದೊಡ್ಡ ತಾರೆ ಎನಿಸಿಕೊಂಡಿರುವರು ಶಾರುಖ್‌ಖಾನ್‌. ಬಾಲಿವುಡ್‌ಗೆ ಕಾಲಿಡುವ ಮೊದಲು ಅವರು ಫೌಜಿ, ಸರ್ಕಸ್‌ನಂತಹ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದರು. ಅದರ ನಂತರ ಲೆಕ್ಕವಿಲ್ಲದಷ್ಟು ಹಿಟ್‌ ಸಿನಿಮಾಗಳನ್ನು ನೀಡಿದರು.

ಚೊಚ್ಚಲ ಚಿತ್ರ ದಿವಾನ ಬಾಲಿವುಡ್‌ನಲ್ಲಿ ಭಾರಿ ಯಶಸ್ಸನ್ನು ಕಂಡಾಗ ಶಾರುಖ್ ಕೆರಿಯರ್‌ ಗ್ರಾಫ್ ಏರಲು ಪ್ರಾರಂಭವಾಯಿತು. ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟವೂ ಅವರಿಗೆ ಸಪೋರ್ಟ್‌ ಮಾಡಿದೆ.

ವಿಶ್ವದಾದ್ಯಂತ ಅವರ  ಒಟ್ಟು ಆಸ್ತಿಯ ಬಗ್ಗೆ ಹೇಳುವಾಗ ನಟನಿಗೆ ಕಿಂಗ್‌ ಖಾನ್‌ ಎಂಬ ಹೆಸರು ಸುಮ್ಮನೆ ಬಂದಿಲ್ಲ ಎಂದು ತಿಳಿಯುತ್ತದೆ. ಮುಂಬೈನ ಐಷಾರಾಮಿ ಮನೆಯ ಹೊರತಾಗಿ, ಅವರು ಯುಕೆ, ದುಬೈ ಮತ್ತು ವಿಶ್ವದ ಇತರೆಡೆಗಳಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ. ಬಾಲಿವುಡ್‌ ಸೂಪರ್‌ ಸ್ಟಾರ್‌ನ ಅತಿದೊಡ್ಡ ಆಸ್ತಿ  ಮುಂಬೈ ಬಂಗಲೆ 'ಮನ್ನತ್'.

ಕೇವಲ 13 ಕೋಟಿಗಳಿಗೆ ಖರೀದಿಸಿದ ಬಂಗಲೆ 'ಮನ್ನತ್' ಇಂದು ಸುಮಾರು 200 ಕೋಟಿಗಿಂತ ಹೆಚ್ಚು ಬೆಲೆ ಬಾಳುತ್ತದೆ.  ಖಾನ್ ಕುಟುಂಬ ಕಳೆದ 25 ವರ್ಷಗಳಿಂದ ಈ ಬಂಗಲೆಯಲ್ಲಿ ವಾಸಿಸುತ್ತಿದೆ.

1995 ರಲ್ಲಿ ಶಾರುಖ್ ಖರೀದಿಸಿದ  26 ಸಾವಿರ ಚದರ ಅಡಿ ವಿಸ್ತೀರ್ಣದ ಈ ಬಂಗಲೆಗೆ 'ವಿಲ್ಲಾ ವಿಯೆನ್ನಾ' ಎಂದು ಹೆಸರಿತ್ತು ಹಾಗೂ ಇದರ ಓನರ್‌ ಪಾರ್ಸಿ ಗುಜರಾತಿ  ಕೆಕು ಗಾಂಧಿಯಾಗಿದ್ದರು.

ಅರಮನೆಯಂಥ ಮನೆಯ ಮುಂದೆ ಬಾಲಿವುಡ್ ಕಿಂಗ್ ಖಾನ್.

ನಟನೆಯ ಹೊರತಾಗಿ, ಶಾರುಖ್ ಖಾನ್ ಯಶಸ್ವಿ ನಿರ್ಮಾಪಕನೂ ಕೂಡ ಹೌದು. ಅವರ ಚಲನಚಿತ್ರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲಿ ಬಾಲಿವುಡ್‌ನ ಯಶಸ್ವಿ ಕಂಪನಿಗಳಲ್ಲೊಂದು. ಇದಕ್ಕೂ ಮೊದಲು, ತಮ್ಮ ಪಾರ್ಟ್‌ನರ್‌ಗಳಾದ ಜುಹಿ ಚಾವ್ಲಾ ಮತ್ತು ಅಜೀಜ್ ಮಿರ್ಜಾ ಜೊತೆ ಸೇರಿ ಡ್ರೀಮ್ಜ್ ಅನ್ಲಿಮಿಟೆಡ್  ಪ್ರಾರಂಭಿಸಿದ್ದರು.

2008 ರಲ್ಲಿ, ಶಾರುಖ್ ಖಾನ್ ಐಪಿಎಲ್ ತಂಡ ಕೋಲ್ಕತಾ ನೈಟ್ ರೈಡರ್ಸ್ ಅನ್ನು ಜುಹಿ ಚಾವ್ಲಾ ಅವರ ಪತಿ ಜೈ ಮೆಹ್ತಾ ಅವರ ಸಹಭಾಗಿತ್ವದಲ್ಲಿ 7.5  ಮಿಲಿಯನ್‌ ಡಾಲರ್‌ಗೆ ಖರೀದಿಸಿದರು. ಆ ಸಮಯದಲ್ಲಿ ಮೊದಲ ಬಾರಿಗೆ ನಟನ ಆಸ್ತಿಯ ಬಗ್ಗೆ ಜನರಿಗೆ ತಿಳಿಯಿತು.

ದುಬೈನ ಪಾಮ್ ಜುಮೇರಾದಲ್ಲಿರುವ ಶಾರುಖ್ ಖಾನ್‌ರ ವಿಲ್ಲಾ ಕೆ -93 14000 ಚದರ ಅಡಿ ವಿಸ್ತೀರ್ಣದಲ್ಲಿದೆ. ಪಾಮ್ ಜುಮೇರಾದ ಡೆವಲ್ಪರ್ಸ್‌ ಈ ಬಂಗಲೆಯನ್ನು ಶಾರುಖ್‌ಗೆ ಗಿಫ್ಟ್‌ ನೀಡಿದ್ದಾಗಿದೆ. ಸುಮಾರು 18 ಕೋಟಿ ರೂ ಬೆಲೆಬಾಳುವ ಬೀಚ್‌ ಫೇಸಿಂಗ್‌ ಬಂಗಲೆ ಎರಡು ರಿಮೋಟ್‌ ಕಂಟ್ರೋಲ್‌ ಗ್ಯಾರೇಜು,ಇಂಡಿಪೆಂಡೆಂಟ್‌ ಬೀಚ್ ಮತ್ತು ಪ್ರವೈಟ್‌  ಪೂಲ್ ಹೊಂದಿದ್ದು ಹೆಚ್ಚಾಗಿ  ಖಾನ್ ಫ್ಯಾಮಿಲಿ ಹಾಲೀಡೆಗಾಗಿ ಇಲ್ಲಿಗೆ ಬರುತ್ತದೆ.

ಇದಲ್ಲದೆ, ಅಲಿಬಾಗ್‌ನಲ್ಲಿ ಹಾಲಡೇ ಹೋಮ್‌  ಹೊಂದಿದ್ದಾರೆ. 20 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿರುವ ಈ ಫಾರ್ಮ್‌ಹೌಸ್‌ 146 ಮಿಲಿಯನ್ ಡಾಲರ್ (ಸುಮಾರು 1 ಸಾವಿರ ಕೋಟಿ) ಮೌಲ್ಯದ್ದಾಗಿದೆ. ಹೆಲಿಪ್ಯಾಡ್ ಹೊಂದಿದ್ದು .ಶಾರುಖ್ ಖಾನ್ ತಮ್ಮ ಸ್ನೇಹಿತರೊಂದಿಗೆ  ಮತ್ತು ಕುಟುಂಬದೊಂದಿಗೆ ರಜಾದಿನಗಳನ್ನು ಕಳೆಯಲು ಆಗಾಗ್ಗೆ ಇಲ್ಲಿಗೆ ಬರುತ್ತಾರೆ.

ಲಂಡನ್‌ನ ಐಷಾರಾಮಿ ಪ್ರದೇಶವಾದ ಪಾರ್ಕ್ ಲೇನ್‌ನಲ್ಲಿ ಕೂಡ ಒಂದು ಸುಂದರವಾದ ಮನೆ ಹೊಂದಿದ್ದಾರೆ ಸ್ಟಾರ್‌ ನಟ. ಈ ಮನೆಯ ಬೆಲೆ ಸುಮಾರು 176 ಕೋಟಿ. ಇದಲ್ಲದೆ ಶಾರುಖ್ ಕೂಡ ಸ್ಟೇಜ್ ಶೋಗಳಿಂದ ದೊಡ್ಡ  ಮೊತ್ತದ ಹಣವನ್ನು ಗಳಿಸುತ್ತಾರೆ.

ಲಕ್ಷುರಿ ಕಾರುಗಳ ಬಗ್ಗೆ ಒಲವು ಹೊಂದಿರುವ ಇವರ ಸಂಗ್ರಹದಲ್ಲಿ ಅನೇಕ ಬ್ರಾಂಡ್‌ಗಳ ಕಾರುಗಳಿವೆ. ಆಡಿ ಎ 6 (28 ಲಕ್ಷ ರೂ.), ಬುಗಾಟ್ಟಿ ವೇರಾನ್ (12 ಕೋಟಿ ರೂ.), ಟೊಯೋಟಾ ಲ್ಯಾಂಡ್ ಕ್ರೂಜರ್ (44 ಲಕ್ಷ ರೂ.), ರೋಲ್ಸ್ ರಾಯ್ಸ್ (2.9 ಕೋಟಿ ರೂ.), ಬಿಎಂಡಬ್ಲ್ಯು ಐ 8 (2.29 ಕೋಟಿ ರೂ.), ಮರ್ಸಿಡಿಸ್ ಬೆಂಜ್ ಎಸ್ 600 ಗಾರ್ಡ್ (2.8 ಕೋಟಿ) ರೂಪಾಯಿಗಳು), ಬಿಎಂಡಬ್ಲ್ಯುಐ 8 (ರೂ. 90 ಲಕ್ಷ) ನಂತಹ ದುಬಾರಿ ಕಾರುಗಳಿವೆ.

ಮುಂಬೈನ ಬಾಂದ್ರಾ (ಬ್ಯಾಂಡ್‌ಸ್ಟ್ಯಾಂಡ್) ನಲ್ಲಿರುವ ಐಷಾರಾಮಿ ಬಂಗಲೆ ಮನ್ನತ್‌ನಲ್ಲಿ ಶಾರುಖ್ ಖಾನ್.

loader