ಶಾರುಖ್ ಖಾನ್ - ರಜನಿಕಾಂತ್ ಭಾರತದ ಶ್ರೀಮಂತ ನಟರ ನೆಟ್ ವರ್ತ್!
ನಿಮ್ಮ ನೆಚ್ಚಿನ ನಟರು ಎಷ್ಟು ಹಣವನ್ನು ಗಳಿಸುತ್ತಾರೆ ಮತ್ತು ಅವರು ಎಷ್ಷು ಶ್ರೀಮಂತರು ಎಂದು ನಿಮಗೆ ಗೊತ್ತಾ? ದೇಶದ ಕೆಲವು ಸ್ಟಾರ್ಸ್‌ನ ನೆಟ್ ವರ್ತ್ ಮಾಹಿತಿ ಇಲ್ಲಿದೆ.
ಶಾರುಖ್ ಖಾನ್:
ಎಸ್‌ಆರ್‌ಕೆ ನಿವ್ವಳ ಮೌಲ್ಯ 600 ಮಿಲಿಯನ್ ಡಾಲರ್. ಇಲ್ಲಿಯವರೆಗೆ 80 ಸಿನಿಮಾಗಳನ್ನು ಮಾಡಿರುವ ಶಾರುಖ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ ಕಂಪನಿಯನ್ನು ಸಹ ನೆಡೆಸುತ್ತಿದ್ದಾರೆ.
ಅಮಿತಾಬ್ ಬಚ್ಚನ್:
ಬಿಗ್ ಬಿ ನೆಟ್ ವರ್ತ್ 400 ಮಿಲಿಯನ್ ಡಾಲರ್. ವೃತ್ತಿಜೀವನದಲ್ಲಿ 175 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅಮಿತಾಬ್ ಅನೇಕ ಬ್ರ್ಯಾಂಡ್‌ಗಳಿಗೆ ಸಹ ಕೆಲಸ ಮಾಡುತ್ತಾರೆ.
ಹೃತಿಕ್ ರೋಷನ್:
ಬಾಲಿವುಡ್‌ನ ಗ್ರೀಕ್ ಗಾಡ್ ಹೃತಿಕ್ ನಿವ್ವಳ ಮೌಲ್ಯ 370 ಮಿಲಿಯನ್ ಡಾಲರ್. ಅವರು ದೇಶದ ಶ್ರೀಮಂತ ನಟರಲ್ಲಿ ಒಬ್ಬರು.
ಅಕ್ಷಯ್ ಕುಮಾರ್:
ಬಾಲಿವುಡ್‌ನ ಖಿಲಾಡಿ ಒಂದು ವರ್ಷದಲ್ಲಿ ಅನೇಕ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುವುದಕ್ಕೆ ಫೇಮಸ್. ಅವರ ನಿವ್ವಳ ಮೌಲ್ಯ 325 ಮಿಲಿಯನ್ ಡಾಲರ್ ಮತ್ತು 125 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಅನೇಕ ಚಿತ್ರಗಳಲ್ಲಿ ನಟಿಸಿರುವು ಸಲ್ಮಾನ್ ಖಾನ್ ತಮ್ಮದೇ ಬಟ್ಟೆ ಕಂಪನಿ ಬೀಯಿಂಗ್ ಹ್ಯೂಮನ್ ಸಹ ಹೊಂದಿದ್ದಾರೆ. ಇವರ ನೆಟ್ ವರ್ಥ್ 360 ಮಿಲಿಯನ್ ಡಾಲರ್ ಎನ್ನಲಾಗುತ್ತದೆ.
ಅಮೀರ್ ಖಾನ್:
ಬಾಲಿವುಡ್‌ನ ಪರ್ಫೇಕ್ಷನಿಸ್ ತುಂಬಾ ಕಡಿಮೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಾರೆ. ಆದರೆ ಪ್ರತಿ ಚಿತ್ರವೂ ಅವರಿಗೆ ಕೋಟಿ ಸಂಪಾದನೆ ನೀಡುತ್ತದೆ. ಅವರ ನಿವ್ವಳ ಆಸ್ತಿ 225 ಮಿಲಿಯನ್ ಡಾಲರ್.
ರಜನಿಕಾಂತ್:
ತಲೈವಾ ನಿವ್ವಳ ಆಸ್ತಿ 50 ಮಿಲಿಯನ್ ಡಾಲರ್. ಈವರೆಗೆ 92 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಅಜಯ್ ದೇವ್‌ಗನ್:
ಅಜಯ್ ದೇವ್‌ಗನ್ 40 ಮಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ್ದಾರೆ. ಹಾಗೇ ಹಲವಾರು ಇನ್ವೆಸ್ಟ್‌ಮೆಂಟ್ ಸಹ ಹೊಂದಿದ್ದಾರೆ .
ರಣವೀರ್ ಸಿಂಗ್:
ರಣವೀರ್ ಸಿಂಗ್ ಅವರ ನೆಟ್ ವರ್ತ್ 223 ಕೋಟಿ ರೂಪಾಯಿಗಳು. ಬಾಜಿರಾವ್ ಮಸ್ತಾನಿ, ಗಲ್ಲಿ ಬಾಯ್ ಮತ್ತು ಪದ್ಮಾವತ್ ಚಿತ್ರಗಳು ಸೇರಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ ರಣವೀರ್ ಶ್ರೀಮಂತ ನಟರಲ್ಲಿ ಒಬ್ಬರು.