ನಟಿ ಸಮೀರಾ ಲುಕ್ ನೋಡಿ ಫ್ಯಾನ್ಸ್ ಶಾಕ್..!
- ಸೌತ್ ನಟಿ ಸಮೀರಾ ರೆಡ್ಡಿ ಲುಕ್ ನೋಡಿ ಶಾಲ್ ಆದ ಅಭಿಮಾನಿಗಳು
- ಯಾಕಮ್ಮಾ ಹೇರ್ ಕಲರ್ ಮಾಡಲ್ಲ ಎಂದ ಅಪ್ಪ
ಹಲವಾರು ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಸಮೀರಾ ರೆಡ್ಡಿ 'ವಾರಣಂ ಆಯಿರಾಮ್' ನಲ್ಲಿ ಸೂರ್ಯಗೆ ಜೋಡಿಯಾಗಿ ನಟಿಸಿದ್ದಾರೆ. ತನ್ನ ಸ್ಟೈಲಿಷ್ ದಿನಗಳಲ್ಲಿ ನಟಿ ಆಗಾಗ ಫ್ಯಾಶನ್ ಹೇಳಿಕೆಗಳನ್ನು ನೀಡುತ್ತಿದ್ದರು.
ಆದರೆ ಕಳೆದ ಎರಡು ವರ್ಷಗಳಲ್ಲಿ ನಟಿ ಸಮೀರಾ ತುಂಬಾ ಸಹಜವಾಗಿದ್ದುಕೊಂಡು, ನ್ಯಾಚುರಲ್ ಆಗಿಯೇ ಹೆಚ್ಚು ಆರಾಮದಾಯಕವಾಗಿದ್ದಾರೆ. ಸಮೀರಾ ತನ್ನ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವಳು ಸಂಪೂರ್ಣವಾಗಿ ನೋ ಮೇಕಪ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಸಮೀರಾ ತನ್ನ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವಳು ಸಂಪೂರ್ಣವಾಗಿ ನೋ ಮೇಕಪ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಸಮೀರಾ ಅವರು ಕೂದಲಿಗೂ ಹೇರ್ ಕಲರಿಂಗ್ ಮಾಡಿಸಿಲ್ಲ. ಬೆಳ್ಳಿಗೂದಲು ಅದೇ ಬಣ್ಣದಲ್ಲಿರಲು ಅವಕಾಶ ಮಾಡಿಕೊಟ್ಟಿದ್ದಾರೆ. ಆಕೆಯ ಅಭಿಮಾನಿಗಳು ನಿಜಕ್ಕೂ ಫೋಟೋ ನೋಡಿ ಆಘಾತಕ್ಕೊಳಗಾದರು. ಆದರೆ ಎರಡು ಮಕ್ಕಳ ತಾಯಿ ಸಮೀರಾ ತಮ್ಮ ಪೋಟೋ ಕುರಿತು ವಿವರಿಸಿದ್ದಾರೆ.
ನನ್ನ ಬಿಳಿ ಕೂದಲನ್ನು ನಾನು ಏಕೆ ಮುಚ್ಚಿಕೊಳ್ಳುತ್ತಿಲ್ಲ ಎಂದು ನನ್ನ ತಂದೆ ಕೇಳಿದರು. ಜನರು ನನ್ನನ್ನು ಜಡ್ಜ್ ಮಾಡುವುದರ ಬಗ್ಗೆ ಅವರು ಚಿಂತಿತರಾಗಿದ್ದರು ಎಂದಿದ್ದಾರೆ ನಟಿ.
ಇದರರ್ಥ ನನಗೆ ವಯಸ್ಸಾಗಿಲ್ಲ. ಸುಂದರವಾಗಿಲ್ಲ. ಮೇಕಪ್ ಮಾಡಿಕೊಳ್ಳಲಿಲ್ಲ. ಆಕರ್ಷಕವಾಗಿಲ್ಲವೆಂದೇ ? ಎಂದು ನಟಿ ತಂದೆಗೆ ಕೇಳುತ್ತಿದ್ದರು ಎಂದಿದ್ದಾರೆ. ನಾನು ಮೊದಲಿನಂತೆ ವ್ಯಾಮೋಹ ಹೊಂದಿಲ್ಲ.
ನಾನು ಪ್ರತಿ 2 ವಾರಗಳಿಗೊಮ್ಮೆ ಹೇರ್ ಕಲರಿಂಗ್ ಮಾಡುತ್ತಿದ್ದೆ ಎಂದಿದ್ದಾರೆ. ಹಾಗಾಗಿ ಯಾರೂ ಆ ಬಿಳಿ ಕೂದಲು ನೋಡಲು ಸಾಧ್ಯವಿಲ್ಲ. ಇಂದು ನಾನು ನನ್ನ ಸ್ವಂತ ಸಮಯವನ್ನು ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಬಣ್ಣಬಣ್ಣದ ಆಯ್ಕೆಯನ್ನು ಮಾಡಿ ನನಗೆ ಅನಿಸಿದಾಗ ಕಲರಿಂಗ್ ಮಾಡುತ್ತೇನೆ ಎಂದಿದ್ದಾರೆ ನಟಿ.
ನಾನು ಒಬ್ಬಂಟಿಯಾಗಿಲ್ಲ ಎಂದು ನನಗೆ ತಿಳಿದಿದೆ.
ಹಳೆಯ ಆಲೋಚನಾ ಪ್ರಕ್ರಿಯೆಗಳು ಮುರಿದಾಗ ಮಾತ್ರ ಈಗಿನ ಸ್ವೀಕಾರ ಆರಂಭವಾಗುತ್ತದೆ. ಮಾಸ್ಕ್ ಅಥವಾ ಪರದೆ ಹಿಂದೆ ಅಡಗಬೇಕಿಲ್ಲ. ನನ್ನ ತಂದೆ ಇದನ್ನು ಅರ್ಥಮಾಡಿಕೊಂಡರು ಎಂದಿದ್ದಾರೆ.