Shaakuntalam: ಬಾಕ್ಸ್ ಆಫೀಸ್‌ನಲ್ಲಿ ಸೋತ ಸಮಂತಾ ಸಿನಿಮಾ: 2ನೇ ದಿನ ಗಳಿಸಿದ್ದಷ್ಟು?
ಸಮಂತಾ ನಟನೆಯ ಶಾಕುಂತಲಂ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿದೆ. ಸಿನಿಮಾ ರಿಲೀಸ್ ಆಗಿ 2ನೇ ದಿನ ಕೇವಲ 1.5 ಕೋಟಿ ಗಳಿಕೆ ಮಾಡಿದೆ.
ಸಮಂತಾ ನಟನೆಯ ಶಾಕುಂತಲಂ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿತ್ತು. ಬಿಗ್ ಬಜೆಟ್‌ನಲ್ಲಿ ತಯಾರಾಗಿದ್ದ ಶಾಕುಂತಲಂ ಸಿನಿಮಾ ರಿಲೀಸ್‌ಗೂ ಮೊದಲು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅದ್ದೂರಿಯಾಗಿ ತೆರೆಗೆ ಬಂದಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮೋಡಿ ಮಾಡಲು ವಿಫಲವಾಗಿದೆ.
ಶಾಕುಂತಲಂ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದೆ. ಮೊದಲ ದಿನ 5 ರೂಪಾಯಿ ಗಳಿಸಿದ್ದ ಶಾಕುಂತಲಂ 2ನೇ ದಿನ ಇದರ ಅರ್ಧದಷ್ಟು ಕಲೆಕ್ಷನ್ ಮಾಡಲು ವಿಫಲವಾಗಿದೆ. ಹೌದು 2ನೇ ದಿನ ಶಾಕುಂತಲಂ ಕೇವಲ 1.5 ಕೋಟಿ ರೂಪಾಯಿ ಬಾಚಿಕೊಂಡಿದೆ.
ಪೌರಾಣಿಕ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಸಮಂತಾ ಶಕುಂತಲೆಯ ಪಾತ್ರ ಮಾಡಿದ್ದಾರೆ. ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಕೂಡ ನಟಿಸಿದ್ದಾರೆ. ಸಮಂತಾ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಚಿತ್ರಕ್ಕೆ ಜನಮೆಚ್ಚುಗೆ ಸಿಗುತ್ತಿಲ್ಲ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಶಾಕುಂತಲಂ’ ಸಿನಿಮಾ ಬಿಡುಗಡೆ ಆಗಿದೆ. ಮೊದಲ ದಿನ ಎಲ್ಲಾ ಭಾಷೆಗಳಲ್ಲೂ ಸೇರಿ ಕೇವಲ 5 ಕೋಟಿ ರೂಪಾಯಿ ಮಾತ್ರ ಕಲೆಕ್ಷನ್ ಮಾಡಿತ್ತು. ಎರಡನೇ ದಿನವೂ ಪರಿಸ್ಥಿತಿ ಹೀನಾಯ ಆಗಿದ್ದು ವೀಕೆಂಡ್‌ನಲ್ಲೂ ಕಲೆಕ್ಷನ್ ಮಾಡದೇ ಇರುವುದು ಸಿನಿಮಾತಂಡ ತಲೆನೋವಿಗೆ ಕಾರಣವಾಗಿದೆ.
ಶಾಕುಂತಲೆಯಾಗಿ ಸಮಂತಾ ನಟಿಸಿದ್ರೆ ಮಲಯಾಳಂ ನಟ ದೇವ್ ಮೋಹನ್ ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಬಾಬು ದುರ್ವಾಸ ಮಹರ್ಷಿ ಪಾತ್ರದಲ್ಲಿ ನಟಿಸಿದ್ದಾರೆ. ಸಮಂತಾ ಮಗಳ ಪಾತ್ರದಲ್ಲಿ ಅಲ್ಲುಅರ್ಜುನ್ ಪುತ್ರಿ ಅಲ್ಲು ಅರ್ಹಾ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾದ ಮೇಲೆ ಸಮಂತಾ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಅನಾರೋಗ್ಯದ ನಡುವೆಯೂ ಸಮಂತಾ ಶಾಕುಂತಲಂ ಸಿನಿಮಾ ಮಾಡಿ ಮುಗಿಸಿದ್ದರು. ಪ್ರಮೋಷನ್‌ಗಳಲ್ಲಿ ಭಾಗಿಯಾಗಿ ಸಿನಿಮಾ ರಿಲೀಸ್ ಆಗುವವರೆಗೂ ತಂಡದ ಜೊತೆ ನಿಂತಿದ್ದರು. ಪ್ರಮೋಷನ್‌ನಲ್ಲಿ ಸಿಕ್ಕಾಪಟ್ಟೆ ಓಡಾಡಿದ ಕಾರಣ ಸಮಂತಾ ಮತ್ತೆ ಅನೋರಾಗ್ಯಕ್ಕೆ ಒಳಗಾಗಿದ್ದರು. ಶಾಕುಂತಲಂ ಮೂಲಕ ಮತ್ತೆ ಸಕ್ಸಸ್ ಕಾಣುವ ಕಸನು ಕಂಡಿದ್ದ ಸಮಂತಾಗೂ ಈ ಸೋಲು ಬೇಸರ ಮೂಡಿಸಿದೆ.