- Home
- Entertainment
- Cine World
- ಡೇಟಿಂಗ್ ರೂಮರ್ ಖಚಿತಪಡಿಸಿದ್ರಾ ನಟಿ ಸಮಂತಾ, ರಾಜ್ ಜೊತೆ ಸೆಲ್ಫಿ ಪೋಸ್ ನೀಡಿದ ಸುಳಿವು
ಡೇಟಿಂಗ್ ರೂಮರ್ ಖಚಿತಪಡಿಸಿದ್ರಾ ನಟಿ ಸಮಂತಾ, ರಾಜ್ ಜೊತೆ ಸೆಲ್ಫಿ ಪೋಸ್ ನೀಡಿದ ಸುಳಿವು
ನಟಿ ಸಮಂತಾ ಹಾಗೂ ನಿರ್ದೇಶ ರಾಜ್ ನಿಡಿಮೂರು ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಹಲವು ದಿನಗಳಿಂದ ಕೇಳಿಬರುತ್ತಿದೆ. ಇದೀಗ ಸಮಂತ ಪೋಸ್ಟ್ ಮಾಡಿದ ಸೆಲ್ಫಿ ಇವರ ರಿಲೇಶನ್‌ಶಿಪ್ ಕುರಿತು ಹಲವು ಸೂಚನೆ ನೀಡಿದೆ. ಈ ಸೆಲ್ಫಿ ಇವರ ಡೇಟಿಂಗ್ ಖಚಿತಪಡಿಸಿತಾ?

ನಟಿ ಸಮಂತಾ ರುತ್ ಪ್ರಭು ಡಿವೋರ್ಸ್ ಬಳಿಕ ರಿಲೇಶನ್‌ಶಿಪ್‌ನಿಂದ ದೂರ ಉಳಿದಿದ್ದರು. ಆದರೆ ನಿರ್ದೇಶಕ ರಾಜ್ ನಿಡಿಮೂರು ಜೊತೆಗೆ ಹಲವು ಬಾರಿ ಸಮಂತ ಕಾಣಿಸಿಕೊಂಡಿದ್ದರೆ. ನಟಿ ಸಮಂತಾ ತಮ್ಮ ಮೊದಲ ನಿರ್ಮಾಣದ ಚಿತ್ರ 'ಶುಭಂ ಸಿನಿಮಾದಲ್ಲಿ ರಾಜ್ ನಿಡಿಮೂರ ಜೊತೆ ಕೆಲಸ ಮಾಡಿದ್ದಾರೆ. ಇಲ್ಲಿ ನಟಿ ಸಮಂತಾ ಹಾಗೂ ರಾಜ್ ಜೊತೆಗಿನ ಸಂಬಂಧ ಇಷ್ಟಕ್ಕೆ ಸೀಮಿತವಾಗಿಲ್ಲ ಎಂದು ಅಭಿಮಾನಿಗಳು ಹಲವು ಬಾರಿ ಸೋಶಿಯಲ್ ಮೀಡಿಯಾ ಮೂಲಕ ಸೂಚಿಸಿದ್ದರು.ಇದೀಗ ಸಮಂತಾ ಕ್ಲಿಕ್ಲಿಸಿದ ಸೆಲ್ಫಿ ಇವರ ಡೇಟಿಂಗ್ ರೂಮರ್‌ಗೆ ಹಲವು ಸುಳಿವು ನೀಡಿದೆ.
ಸಮಂತಾ ರಾಜ್ ಜೊತೆ ಸೆಲ್ಫಿ ತೆಗೆದುಕೊಂಡ ಫೋಟೋ ಕೂಡ ಇದೆ. ಇಬ್ಬರೂ ಕ್ಯಾಮೆರಾಗೆ ಜೋಡಿಯಾಗಿ ಪೋಸ್ ಕೊಟ್ಟಿದ್ದಾರೆ. ಸಮಂತಾ ಹಾಗೂ ರಾಜ್ ಸೆಲ್ಫಿಯಲ್ಲಿ ಹೆಚ್ಚು ಆತ್ಮೀಯತೆ ಕಾಣುತ್ತಿದೆ. ನಿರ್ದೇಶಕ, ನಟಿ, ನಿರ್ಮಾಪಕಿ ನಡುವಿನ ರಿಲೇಶನ್‌ಶಿಪ್‌ಗಿಂತ ಹೆಚ್ಚಿನ ಸಂಬಂಧ ಇಲ್ಲಿ ಕಾಣುತ್ತಿದೆ ಅನ್ನೋದು ಅಭಿಮಾನಿಗಳ ಅಭಿಪ್ರಾಯ. ಈ ಸೆಲ್ಫಿ ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಸಮಂತಾ ಈಗಾಗಲೇ 'ದಿ ಫ್ಯಾಮಿಲಿ ಮ್ಯಾನ್' ಮತ್ತು 'ಸಿಟಾಡೆಲ್ ಹನಿ ಬನ್ನಿ' ಚಿತ್ರಗಳಲ್ಲಿ ರಾಜ್ ಜೊತೆ ಕೆಲಸ ಮಾಡಿದ್ದಾರೆ. ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಡುತ್ತಿರುವಾಗ, ಸಮಂತಾ ಹೇಳಿರುವ ಹೊಸ ಆರಂಭ ಹೊಸ ಇನ್ನಿಂಗ್ಸ್ ಕುರಿತು ನೀಡಿದ ಸೂಚನೆಯಾಗಿರಬಹುದು ಎಂದು ಹಲವರು ಪ್ರಶ್ನಿಸಿದ್ದಾರೆ.
Samantha
ಸಮಂತಾ ಹಾಗೂ ರಾಜ್ ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮ, ಲೀಗ್ ಟೂರ್ನಿಗಳಲ್ಲೂ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಹರಿದಾಡಿತ್ತು. ಇದೀಗ ಸೆಲ್ಫಿ ಫೋಟೋ ಹಲವು ಅನುಮಾನಗಳಿಗೆ ಉತ್ತರ ನೀಡುವಂತಿದೆ.
ಶುಭಂ ಚಿತ್ರವನ್ನು ಸಮಂತಾ ಅವರ ಸ್ವಂತ ಬ್ಯಾನರ್ Tra-la-la Moving Picture ನಿರ್ಮಿಸಿದೆ, ಇದನ್ನು ಅವರು 2023 ರಲ್ಲಿ ಪ್ರಾರಂಭಿಸಿದರು. ಈ ಮಧ್ಯೆ, ಸಮಂತಾ ಕೊನೆಯದಾಗಿ ಪ್ರೈಮ್ ವೀಡಿಯೊ ಸರಣಿ ಸಿಟಾಡೆಲ್: ಹನಿ ಬನ್ನಿಯಲ್ಲಿ ವರುಣ್ ಧವನ್ ಜೊತೆ ನಟಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

