- Home
- Entertainment
- Cine World
- ಬಿಗ್ ಬಜೆಟ್ ಭಯ, 15 ವರ್ಷದ ಹಿಂದೆ 64 ಕೋಟಿ ವೆಚ್ಚದ ಸಲ್ಮಾನ್ ಸಿನಿಮಾ ಗಳಿಸಿದ್ದೆಷ್ಟು?
ಬಿಗ್ ಬಜೆಟ್ ಭಯ, 15 ವರ್ಷದ ಹಿಂದೆ 64 ಕೋಟಿ ವೆಚ್ಚದ ಸಲ್ಮಾನ್ ಸಿನಿಮಾ ಗಳಿಸಿದ್ದೆಷ್ಟು?
ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಸಿನಿಮಾ 200 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. 15 ವರ್ಷಗಳ ಹಿಂದೆ ಸಲ್ಮಾನ್ ಖಾನ್ ಸಿನಿಮಾ 64 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿತ್ತು. ಈ ಸಿನಿಮಾ ಅಂದಿನ ಕಾಲದ ಬಿಗ್ ಬಜೆಟ್ ಮೂವಿ. ಆದರೆ ಈ ಸಿನಿಮಾ ಗಳಿಸಿದ್ದೆಷ್ಟು?

ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಅವರ ಸಿಕಂದರ್ ಸಿನಿಮಾ ಬಿಡುಗಡೆಯಾಗುತ್ತಿದೆ. ಮಾ.30ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಸಿಕಂದರ್ ಸಿನಿಮಾ ಬರೋಬ್ಬರಿ 200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ 120 ಕೋಟಿ ರೂಪಾಯಿ ಸಲ್ಮಾನ್ ಖಾನ್ ಸೇರಿದಂತೆ ನಟ ನಟಿಯರಿಗೆ ಸಂಭಾವನೆ ರೂಪದಲ್ಲಿ ನೀಡಲಾಗಿದೆ. ಇನ್ನುಳಿದ 80 ಕೋಟಿಯಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ.
ಸಿಕಂದರ್ ಸಲ್ಮಾನ್ ಖಾನ್ ಬಿಗ್ ಬಜೆಟ್ ಮೂವಿ. ಆದರೆ ಸಲ್ಮಾನ್ ಖಾನ್‌ಗೆ ದೊಡ್ಡ ಬಜೆಟ್ ಸಿನಿಮಾ ಅಂದರೆ ಆತಂಕವಾಗುತ್ತಾ? 15 ವರ್ಷಗಳ ಹಿಂದೆ ಅಂದರೆ 2010ರಲ್ಲಿ ಅಂದಿನ ಕಾಲದ ಬಿಗ್ ಬಜೆಟ್ ಮೂವಿ ರಿಲೀಸ್ ಆಗಿತ್ತು. ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ವೀರ್ ಸಿನಿಮಾ ಇದಾಗಿತ್ತು.
2010ರಲ್ಲಿ ತೆರೆ ಕಂಡ ವೀರ್ ಸಿನಿಮಾ 64 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿತ್ತು. ಝರೀನ್ ಖಾನ್ ನಾಯಕಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 2010ರಲ್ಲಿ ಬಿಡುಗಡೆಯಾದ ಬಿಗ್ ಬಜೆಟ್ ಸಿನಿಮಾ ಪೈಕಿ ವೀರ್‌ಗೆ ಅಗ್ರಸ್ಥಾನ. ಆದರೆ ಈ ಸಿನಿಮಾಗೆ ಯಶಸ್ಸು ಸಿಗಲಿಲ್ಲ. ಪ್ರೇಕ್ಷರು ಮೆಚ್ಚಿಕೊಳ್ಳಲಿಲ್ಲ.
ಸಲ್ಮಾನ್ ಹೊಸ ಅವಾತಾರದಲ್ಲಿ ಕಾಣಿಸಿಕೊಂಡರೂ ಜನರಿಗೆ ಇಷ್ಟವಾಗಲಿಲ್ಲ. 64 ಕೋಟಿ ವೆಚ್ಚದ ಈ ಸಿನಿಮಾ ಗಳಿಸಿದ್ದು 38 ಕೋಟಿ ರೂಪಾಯಿ ಮಾತ್ರ. ದೊಡ್ಡ ಸಿನಿಮಾ ಒಂದು ಫ್ಲಾಪ್ ಆಗಿತ್ತು. ಈ ಸೋಲು ಸಲ್ಮಾನ್ ಖಾನ್‌ಗೆ ಹೆಚ್ಚಾಗಿ ಬಾಧಿಸಲಿಲ್ಲ. ಕಾರಣ ಇದೇ 2010ರಲ್ಲಿ ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು.
ಇದೀಗ ಸಿಕಂದರ್ ಸಿನಿಮಾ ಕುರಿತು ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಆದರೆ ನಿರೀಕ್ಷೆಗಳು ಹೆಚ್ಚಾಗಿದೆ. ಸಿಕಂದರ್ ಸಿನಿಮಾ ಬಾಲಿವುಡ್‌ನ ಕೆಲ ದಾಖಲೆ ಮುರಿಯಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ದೇಶ ವಿದೇಶಗಳಲ್ಲಿ ಸಿಕಂದರ್ ಸಿನಿಮಾ ಬಿಡುಗಡೆಯಾಗುತ್ತಿದೆ.