2 ದಿನ ಉಪವಾಸ ಮಾಡಿದ ಸಾಯಿ ಪಲ್ಲವಿ; ನೀನಮ್ಮ ನಿಜವಾದ ನ್ಯಾಷನಲ್ ಕ್ರಶ್ ಎಂದ ನೆಟ್ಟಿಗರು
ವಿರಾಟ ಪರ್ವಂ ಚಿತ್ರಕ್ಕೆ ಎರಡು ದಿನ ಊಟ ಬಿಟ್ಟ ಸಾಯಿ ಪಲ್ಲವಿ. ರಶ್ಮಿಕಾ ಜೊತೆ ಹೋಲಿಸಿದ ನೆಟ್ಟಿಗರು.
ರಾಣಾ ದಗ್ಗುಬಾಟಿಗೆ ಜೋಡಿಯಾಗಿ ಸಾಯಿ ಪಲ್ಲವಿ ಅಭಿನಯಿಸುತ್ತಿರುವ ಸಿನಿಮಾ ವಿರಾಟ ಪರ್ವಂ ಜೂನ್ 17ರಂದು ಬಿಡುಗಡೆಯಾಗುತ್ತಿದೆ.
ವಿಶೇಷ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದು, ಎರದು ದಿನಗಳ ಕಾಲ ಊಟ ಬಿಟ್ಟಿದ್ದರು ಎಂದು ನಿರ್ದೇಶಕರು ಹೇಳಿದ್ದಾರೆ.
ವಿರಾಟ ಪರ್ವಂ ಸಿನಿಮಾದ ದೃಶ್ಯವೊಂದರಲ್ಲಿ ಪಲ್ಪವಿ ಎರಡು ದಿನಗಳ ಕಾಲ ಊಟ ಮಾಡಿರುವುದಿಲ್ಲ. ಪಾತ್ರ ನೈಜವಾಗಿ ಬರಬೇಕೆಂದು ಎರಡು ದಿನಗಳ ಕಾಲ ಊಟ ಬಿಟ್ಟು ಚಿತ್ರೀಕರಣ ಮಾಡಿದ್ದಾರೆ.
ಇಷ್ಟು ದಿನ ಚಿತ್ರತಂಡಕ್ಕೆ ಮಾತ್ರ ಗೊತದ್ದ ಈ ಸತ್ಯವನ್ನು ನಿರ್ದೇಶಕರು ಖಾಸಗಿ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಹೀಗಾಗಿ ಪಲ್ಲವಿ ಶ್ರಮವನ್ನು ನೆಟ್ಟಿಗರು ಮೆಚ್ಚುತ್ತಿದ್ದಾರೆ.
ಸಣ್ಣ ಪುಟ್ಟ ಪಾತ್ರ ಮಾಡಿ ಕೊಂಬು ಬೆಳೆದು ಭಾಷೆ ಮರೆಯುವ ಜನರ ನಡುವೆ ಎರಡು ದಿನಗಳ ಕಾಲ ಊಟ ತ್ಯಾಗ ಮಾಡಿ ಪಾತ್ರ ಮಾಡುವ ನಟಿನೇ ರಿಯಲ್ ಕ್ರಶ್ ಎಂದಿದ್ದಾರೆ.
ಪ್ರತಿಯೊಂದು ಸಿನಿಮಾದಲ್ಲೂ ಪಲ್ಲವಿ ಒಂದಕ್ಕಿಂತ ಒಂದು ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ವಿರಾಟ ಪರ್ವಂನಲ್ಲಿ ನಕ್ಸಲೈಟ್ ಅವರತಾರ ತಾಳಿದ್ದಾರೆ.