ಫೇಕ್ ಸ್ಕ್ರೀನ್ ಶಾಟ್ ತೋರಿಸಿ ನಿರ್ದೇಶಕನ ವಿರುದ್ಧ ಆರೋಪಿಸಿದ ನಟಿ ಈಕೆಯೇ..!
ನಿರ್ದೇಶಕ ಅನುರಾಗ್ ಕಷ್ಯಪ್ ವಿರುದ್ಧ ಬೆಂಗಾಲಿ ನಟಿ ರೂಪಾ ದತ್ತ ಚಾಟ್ ಕುರಿತ ಸ್ಕ್ರೀನ್ ಶಾಟ್ ಶೇರ್ ಮಾಡಿದ್ದಾರೆ
ನಿರ್ದೇಶಕ ಅನುರಾಗ್ ಕಷ್ಯಪ್ ವಿರುದ್ಧ ಬೆಂಗಾಲಿ ನಟಿ ರೂಪಾ ದತ್ತ ಚಾಟ್ ಕುರಿತ ಸ್ಕ್ರೀನ್ ಶಾಟ್ ಶೇರ್ ಮಾಡಿದ್ದಾರೆ. 2014ರಲ್ಲಿ ಮಾಡಿದ್ದರು ಎನ್ನಲಾಗಿದ್ದ ಚಾಟ್ ಸ್ಕ್ರೀನ್ ಶಾಟನ್ನು ನಟಿ ಶೇರ್ ಮಾಡಿಕೊಂಡಿದ್ದರು.
ಆದರೆ ಇದೀಗ ಈ ಚಾಟ್ ಫೇಕ್ ಎಂಬುದು ಗೊತ್ತಾಗಿದೆ.
ಚಾಟ್ ಮಾಡಿದ ವ್ಯಕ್ತಿ ಬೇರೆಯವನಾಗಿದ್ದು, ಆತ ನಿರ್ದೇಶಕರ ಹೆಸರನ್ನು ತನ್ನ ಫೇಸ್‌ಬುಕ್ ಹೆಸರಿನೊಂದಿಗೆ ಸೇರಿಸಿದ್ದ ಎನ್ನಲಾಗಿದೆ.
ನಟಿ ಪಾಯಲ್ ಘೋಷ್ ಅನುರಾಗ್ ಕಷ್ಯಪ್ ತನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾಗಿ ಆರೋಪಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕ ನನ್ನ ಜೊತೆ ಮಾಡಿದ ಚಾಟ್ ಎಂದು ನಟಿ ಇದನ್ನು ಶೇರ್ ಮಾಡಿದ್ದರು.
2014ರಲ್ಲಿ ನಾನು ಅನುರಾಗ್ ಕಷ್ಯಪ್ ಜೊತೆ ಮಾತನಾಡಿದ ಚಾಟ್ ಇದು ಎಂದಿದ್ದಾರೆ.
ಅನುರಾಗ್ ಕಷ್ಯಪ್ ಕಣ್ಣಲ್ಲಿ ಹೆಣ್ಣಿಗೆ ಗೌರವವಿಲ್ಲ. ಅವನನ್ನು ಅರ್ಥ ಮಾಡಿಕೊಂಡ ಮೇಲೆ ಇದು ತಿಳಿದಿದೆ. ಇಲ್ಲಿ ಸಂಭಾಷಣೆ ನೋಡಿ ಎಂದಿದ್ದಾರೆ.
ಪಾಯಲ್ ಆರೋಪ ಸರಿ. ಅನುರಾಗ್‌ಗೆ ಕಠಿಣ ಶಿಕ್ಷೆಯಾಗಬೇಕು ಎಂದಿದ್ದಾರೆ.
ಆದರೆ ಇದು ನಿರ್ದೇಶಕನ ಫೇಸ್‌ಬುಕ್ ಎಕೌಂಟ್ ಅಲ್ಲ ಎಂದು ತಿಳಿದು ಬಂದಿದೆ.
ಅನುರಾಗ್ ಸಫರ್ ಎಂಬ ಐಡಿ ಅನುರಾಗ್ ಕಷ್ಯಪ್ ಎಂದು ಮಾಡಲಾಗಿತ್ತು. ನಾನು ನಿರ್ದೇಶಕ ಅನುರಾಗ್ ಕಷ್ಯಪ್ ಅಲ್ಲ. ನಾನು ಬೇರೆ ಅನುರಾಗ್ ಎಂದು ಆತ 2010ರಲ್ಲಿ ಫೇಸ್‌ಬುಕ್‌ನಲ್ಲಿ ಬರೆದಿದ್ದರು.
ಆರೋಪವನ್ನು ಅನುರಾಗ್ ಕಷ್ಯಪ್ ತಳ್ಳಿ ಹಾಕಿದ್ದು ನನ್ನದು ವೇರಿಫೈಡ್ ಖಾತೆ ಎಂದಿದ್ದಾರೆ.