ರಾಜಮೌಳಿ 'RRR' ಸಿನಿಮಾ ಫ್ಲಾಪ್ ಆದ್ರೆ ಮೊದಲು ಸಂಭ್ರಮಿಸೋದು ಇವ್ರೆ ಅಂತೆ !
ಟಾಲಿವುಡ್ ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಲು ಸಜ್ಜಾಗಿರುವ ಮಲ್ಟಿಸ್ಟಾರ್ ಆಕ್ಷನ್ ಸಿನಿಮಾ ಅಂದ್ರೆ 'ಆರ್ಆರ್ಆರ್'. ಅದರಲ್ಲೂ ನಿರ್ದೇಶಕ ರಾಜ್ಮೌಳಿ ಕೈಚಳಕವೇ ಡಿಫರೆಂಟ್.....
ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿದೆ 'ಆರ್ಆರ್ಆರ್' ಸಿನಿಮಾ.
ಜೂನಿಯರ್ ಎನ್ಟಿಆರ್ ಹಾಗೂ ರಾಮ್ಚರಣ್ ಕಾಂಬಿನೇಶನ್ನ ಮೊದಲ ಸಿನಿಮಾ.
'ಬಾಹುಬಲಿ' ನಂತರ ರಾಜಮೌಳಿ ನಿರ್ದೇಶನದ ಬಿಗ್ ಬಜೆಟ್ ಸಿನಿಮಾವಿದು.
ಚಿತ್ರರಂಗದಲ್ಲಿ 'ಆರ್ಆರ್ಆರ್' ಸಿನಿಮಾ ಬಗ್ಗೆ ಹರಡುತ್ತಿದೆ ನೂರಾರು ಗಾಸಿಪ್ಗಳು.
ಸಿನಿಮಾ ಫ್ಲಾಪ್ ಆಗ್ಲಿ ಎಂದು ಬಹುತೇಕರು ದೇವರಲ್ಲಿ ಪಾರ್ಥನೆ ಮಾಡುತ್ತಿದ್ದಾರಂತೆ.
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತನಾಡಿರುವ ವಿಡಿಯೋ ಲೀಕ್ ಆಗಿದೆ.
ವಿಡಿಯೋದಲ್ಲಿ ಚಿತ್ರರಂಗದವರ ನಡುವೆ ಒಗ್ಗಟ್ಟು ಇಲ್ಲವೆಂದು, ಒಬ್ಬರ ಯಶಸ್ಸು ಮತ್ತೊಬ್ಬರು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಆರ್ಅರ್ಆರ್ ಸಿನಿಮಾ ಫ್ಲಾಪ್ ಆದರೆ ಜನರು ಹಾಗೂ ಚಿತ್ರರಂಗದವರು ಬಟ್ಟೆ ಬಿಚ್ಚಿ ಡ್ಯಾನ್ಸ್ ಮಾಡುತ್ತಾರೆ ಎಂದಿದ್ದಾರೆ.
ಚಿತ್ರರಂಗದಲ್ಲಿ ರಾಜಮೌಳಿಗೆ ಸಿಗುತ್ತಿರುವ ದೊಡ್ಡ ಯಶಸ್ಸಿನ ಬಗ್ಗೆ ತುಂಬಾನೇ ಅಸೂಯೆ ಇದೆ, ಅದು ಮನುಷ್ಯನ ಸಹಜ ಗುಣ.
ಇಲ್ಲಿ ಒಬ್ಬ ಸ್ಟಾರ್ ಸೋತರೆ ಮತ್ತೊಬ್ಬ ಸ್ಟಾರ್ ಸಂಭ್ರಮಿಸುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.