ರಿಷಿ ಕಪೂರ್‌ ನೆನಪು ಮಾತ್ರ - ಚಿಂಟುವಿನ ಬಾಲ್ಯದ ಝಲಕ್

First Published 30, Apr 2020, 3:25 PM

ಇಡೀ ದೇಶ ಇನ್ನೂ ನಟ ಇರ್ಫಾನ್‌ ಖಾನ್‌ ಕಳೆದು ಕೊಂಡ ದುಃಖದಲ್ಲಿರುವಾಗಲೇ, ಮತ್ತೊಬ್ಬ ಬಾಲಿವುಡ್‌ ನಟನನ್ನು ಕಳೆದುಕೊಂಡಿದ್ದೆ. 70ರ ದಶಕದಲ್ಲಿ ಹಲವು ಹಿಟ್‌ ಸಿನಿಮಾಗಳನ್ನು ನೀಡಿದ ರಿಷಿಯ ಕೊಡುಗೆ ಬಾಲಿವುಡ್‌ಗೆ ಅಪಾರ. ರೋಮ್ಯಾಂಟಿಕ್‌ ಸಿನಿಮಾಗಳ ಮೂಲಕ ಜನರ ಮನಸ್ಸಿನಲ್ಲಿ ಮನೆ ಮಾಡಿದ ರಿಷಿ ನಗು ಮುಖ ಸದಾ ಅಭಿಮಾನಗಳ ಹೃದಯದಲ್ಲಿ ಚಿರಸ್ಥಾಯಿಯಾಗಲಿದೆ. ಹಲವು ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 67 ವರ್ಷದ ರಿ‍ಷಿ ಕಪೂರ್,‌ ಏ.20, 2020ರಂದು ಬದುಕಿನ ಪಯಣ ಮುಗಿಸಿದ್ದಾರೆ.  ಅವರ ಕೆಲವು ಬಾಲ್ಯದ ಚಿತ್ರಗಳ ಮೂಲಕ ಬಾಲಿವುಡ್‌ನ ಹಿರಿಯ ನಟನಿಗೊಂದು ಅಂತಿಮ ನಮನ.

4 ಸೆಪ್ಟೆಂಬರ್‌ 1952ರಲ್ಲಿ ಹುಟ್ಟಿದ ರಿಷಿಗೆ ರಕ್ತದಲ್ಲೇ ಬಂದಿದ್ದು ಆಕ್ಟಿಂಗ್‌. ಅಜ್ಜ ಪೃಥ್ವಿರಾಜ್‌ ಕಪೂರ್‌ ಹಾಗೂ ತಂದೆ ರಾಜ್‌ಕಪೂರ್‌ರ ಹಾಗೇ ತಾವೂ ಒಬ್ಬ ಅಮೇಜಿಂಗ್ ನಟನಾಗಿ ಕುಟುಂಬದ ಹೆಸರುಳಿಸಿದ ರಿಷಿ ಕಪೂರ್‌.

ಕರೀನಾ ಕಪೂರ್‌ ಮಗ ತೈಮೂರ್‌ ಅಲಿ ಖಾನ್‌ ಬಾಲ್ಯದ ರಿಷಿಯ ಹೋಲಿಕೆಯನ್ನು ಹೊತ್ತಿದ್ದಾರೆ ಎಂದು ಫೋಟೋಗಳಲ್ಲಿ ನೋಡಬಹುದು.ಈ ಇಬ್ಬರ ಕೆಲವು ನಡವಳಿಕೆ ಕೂಡ ಒಂದೇ ರೀತಿಯಾಗಿದೆ ಎಂದು ಕಪೂರ್‌ ಕುಟುಂಬದ ಅಂಬೋಣ.

ಬಾಲ್ಯದಲ್ಲಿ ರಿಷಿ ಜನ ಸಮೂಹ ನೋಡಿದರೆ ನರ್ವಸ್‌ ಆಗುತ್ತಿದರಂತೆ, ಅದೇ ರೀತಿ ಕರೀನಾನ ಮಗ ತೈಮೂರ್‌ಗೂ ಆಗುತ್ತದೆಯಂತೆ.

ಚಿಕ್ಕವರಿದ್ದಾಗ ಬಹಳ ತುಂಟರಾಗಿದ್ದ ನಟನ ಹೆಸರು ಚಿಂಟು ಆಗಿತ್ತು.

ಮೇರಾ ನಾಮ್‌ ಜೋಕರ್‌ ಸಿನಿಮಾದಲ್ಲಿ ರಾಜ್‌ಕಪೂರ್‌ ಅವರ ಬಾಲ್ಯದ ರೋಲ್‌ ಮಾಡಿದ್ದ ರಿಷಿಗೆ ನ್ಯಾಷನಲ್ ಆವಾರ್ಡ್‌ ಸಿಕ್ಕಿತ್ತು.

ಆದರೆ ಇದೇ ರಿಷಿಯ ಮೊದಲ ಸಿನಿಮಾವೇನೂ ಅಲ್ಲ, ಇದಕ್ಕೂ ಮೊದಲು ಶ್ರೀ 420 ಸಿನಿಮಾದ ಪ್ಯಾರ್‌ ಹೂವಾ... ಇಕ್ರಾರ್‌ ಹೂವಾ...ಫೇಮಸ್‌ ಸಾಂಗ್‌ನಲ್ಲಿ ಗೆಸ್ಟ್‌ ಅಪಿಯರೆನ್ಸ್‌ ನೀಡಿದ್ದರು.

ಸಹೋದರರೊಂದಿಗೆ ಇರುವ ಈ ಪೋಟೋವನ್ನು ಖುದ್ದು ರಿಷಿ ಕಪೂರ್‌ 2019ರಲ್ಲಿ ಶೇರ್‌ ಮಾಡಿದ್ದರು. ಇದರಲ್ಲಿ ಕೂಲ್‌ ಡ್ರಿಂಕ್‌ಗಾಗಿ ಜಗಳ ಮಾಡುತ್ತಿರುವ ಹುಡುಗ ರಿಷಿಯಾದರೆ, ಮೂಲೆಯಲ್ಲಿ ಕುಳಿತು ಕೂಲ್ಡ್‌ ಡ್ರಿಂಕ್ಸ್‌ ಕುಡಿಯುತ್ತಿರುವುದು ಅನಿಲ್‌ ಕಪೂರ್‌.

ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಮಡಿಲಲ್ಲಿರುವ ಅವರ ಈ ಪೋಟೋವನ್ನು ಅತ್ಯಮೂಲ್ಯ ಎಂದು ಹೇಳಿ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದರು ನಟ ರಿಷಿ ಕಪೂರ್‌.

ಅವರ ಹಲವು ಪೋಟೋಗಳನ್ನು ಸ್ವತಃ ಇವರು ಹಾಗೂ ಮಗಳು ರಿದ್ಧಿಮಾ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು.

ಈಗ ಈ ಪ್ರತಿಭಾನ್ವಿತ ನಟನ ನೆನಪುಗಳ ಜೊತೆ ಫೋಟೋಗಳು ಮಾತ್ರ ಉಳಿದಿವೆ.

loader