ರಶ್ಮಿಕಾ ಅಲ್ಲ, ಸಮಂತಾ ಅಲ್ಲ: ಪಡ್ಡೆ ಹುಡುಗರು ಬಯಸಿದ್ದು ರಿಯಾಳನ್ನು
ಸುಶಾಂತ್ ವಿಚಾರವಾಗಿ ಭಾರೀ ಟೀಕೆ, ದ್ವೇಷವನ್ನು ಎದುರಿಸಿದ್ದ ನಟಿ ರೇಪ್, ಕೊಲೆ ಬೆದರಿಕೆಯನ್ನು ಎದುರಸಿದ್ದ ರಿಯಾ ಚಕ್ರವರ್ತಿ ಆದರೆ ಒಂದೇ ವರ್ಷ, ಪಡ್ಡೆ ಹುಡುಗರ ಮೋಸ್ಟ್ ಡಿಸೈರ್ಡ್ ನಟಿ ಈಕೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಸುದ್ದಿಯಾದ ಆತನ ಮಾಜಿ ಗೆಳತಿ ರಿಯಾ ಚಕ್ರವರ್ತಿ ಈಗ ಎಲ್ಲಿದ್ದಾರೆ ? ಏನ್ಮಾಡ್ತಿದ್ದಾರೆ ? ಸಿಕ್ಕಾಪಟ್ಟೆ ಸುದ್ದಿಯಾಗಿ ಸುಶಾಂತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಬೆಡಗಿಯ ಸಿನಿ ಕೆರಿಯರ್ ಏನಾಯ್ತು ?
ಸುಶಾಂತ್ ಸಿಂಗ್ ಸಾವಿನ ನಂತರ ಜೈಲಿಗೆ ಹೋಗಿ, ವಿಲನ್ ಎಂದೇ ಬಿಂಬಿತಳಾಗಿದ್ದ ರಿಯಾ ಚಕ್ರವರ್ತಿಯೇ ಸುಶಾಂತ್ ಸಾವಿಗೆ ಕಾರಣ ಎಂದು ಇಂದೂ ನಟನ ಅಭಿಮಾನಿಗಳ ಆರೋಪ. ಬಾಲಿವುಡ್‌ನಲ್ಲಿ ಮಿಂಚಬೇಕಾಗಿದ್ದ ನಟಿ ಡ್ರಗ್ಸ್ ಲಿಂಕ್ ಇಡ್ಕೊಂಡು, ಡ್ರಗ್ಸ್ ಸಪ್ಲೈ, ಸ್ಟಾಕ್ ಹೀಗೆ ಎಲ್ಲದರಲ್ಲೂ ಸಿಕ್ಕಿ ಹಾಕಿಕೊಂಡು ಎನ್‌ಸಿಬಿ ಅಧಿಕಾರಿಗಳ ಸಾವಿರ ಪ್ರಶ್ನೆಗಳ ನಡುವೆ ಬಡಿದಾಡಿ ಮೇಲೆ ಬಂದಿದ್ದಾರೆ.
ಆದರೆ ರಿಯಾ ಚಕ್ರವರ್ತಿಯ ಸುತ್ತ ಬಹಳಷ್ಟು ನೆಗೆಟಿವ್ ವಿಚಾರಗಳು ಬಿಡಲಾರದಷ್ಟು ಆಳವಾಗಿ ಅಂಟಿಕೊಂಡಾಗಿದೆ. ಆದರೆ ಏನೇ ಇದ್ದರೂ ಜನರಿಗೆ ಮರೆಯೋದಕ್ಕೆ ಕೆಲವೇ ದಿನಗಳು ಸಾಕು ಎನ್ನುವುದು ಮತ್ತೆ ಸಾಬೀತಾಗಿದೆ..
ನಟಿಯ ಸಿನಿಮಾ ಚಹ್ರೆ ನಿರ್ದೇಶಕ ರೂಮಿ ಜೆಫ್ರಿ ಅವರು ರಿಯಾ ಚಕ್ರವರ್ತಿ ಬಗ್ಗೆ ಮಾತನಾಡಿದ್ದಾರೆ. ಆಕೆಯ ಕಷ್ಟಕಾಲದಲ್ಲಿ ಆಕೆಗೆ ಬೆಂಬಲವಾಗಿ ನಿಂತವರ ಬಗ್ಗೆ ತಮಗೆ ಅತ್ಯಂತ ಹೆಚ್ಚು ಗೌರವ ಇರುವುದಾಗಿ ಅವರು ಹೇಳಿದ್ದಾರೆ
ಸಂದರ್ಶನವೊಂದರಲ್ಲಿ ರೂಮಿ ಜಾಫ್ರಿ ರಿಯಾ ಚಕ್ರವರ್ತಿ ಅವರನ್ನು ಜನ 'ಮಾಟಗಾತಿ' ಎಂದು ಕರೆದು ಒಂದು ವರ್ಷದ ನಂತರ 'ಅತ್ಯಂತ ಅಪೇಕ್ಷಿತ ಮಹಿಳೆ' ಎಂದು ಗುರುತಿಸಲ್ಪಟ್ಟ ಬಗ್ಗೆ ಮಾತನಾಡಿದ್ದಾರೆ. ನಟಿಯ ಬಗ್ಗೆ ಸಾರ್ವಜನಿಕರ ಗ್ರಹಿಕೆ ಹೇಗೆ ಬದಲಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ರಿಯಾಳ ಖಾಸಗಿ ವಿಚಾರಗಳಿಂದ ಸಿನಿಮಾ ಬಾಧಿಸಲ್ಪಡಬಹುದೆಂದು ನಾನು ಭಾವಿಸುವುದಿಲ್ಲ. ಕಳೆದ ವರ್ಷ ಸಿನಿಮಾ ರಿಲೀಸ್ ಆಗಿದ್ದರೆ ಸಿನಿಮಾ ಮೇಲೆ ಪರಿಣಾಮ ಉಂಟಾಗುತ್ತಿತ್ತು ಎಂದು ಅಂದುಕೊಂಡಿದ್ದೆ ಎಂದಿದ್ದಾರೆ.
ಸುಶಾಂತ್ ಸಿಂಗ್ ಕೇಸ್ ಹಾಗೂ ರಿಯಾ ಚಕ್ರವರ್ತಿ ಅರೆಸ್ಟ್‌ನಲ್ಲಿ ಮೀಡಿಯಾ ಏನು ಮಾಡಿತೆಂದು ಎಲ್ಲರಿಗೂ ಗೊತ್ತು. ಕಳೆದ ವರ್ಷ ಅವಳು ಮಾಟಗಾತಿ, ಗೋಲ್ಡ್ ಡಿಗ್ಗರ್ ಆಗಿದ್ದಳು. ಈ ವರ್ಷ ಇ-ಟೈಮ್ಸ್ ಅತಿ ಹೆಚ್ಚು ಬಯಸೋ ಮಹಿಳೆ ಎಂದು ಗುರುತಿಸಲ್ಪಟ್ಟಳು ಎಂದಿದ್ದಾರೆ. ಈಗ ಜನರ ನಿಲುವು ಬದಲಾಗಿದೆ. ಹಾಗಾಗಿ ಸಿನಿಮಾ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ನನಗನಿಸುವುದಿಲ್ಲ ಎಂದಿದ್ದಾರೆ.
ಸಾವಿನ ಸಮಯದಲ್ಲಿ ಸುಶಾಂತ್ ಜೊತೆ ಡೇಟಿಂಗ್ ಮಾಡುತ್ತಿದ್ದ ರಿಯಾಳನ್ನು ಆತನಿಗೆ ಡ್ರಗ್ಸ್ ಖರೀದಿಸಿ ಕೊಟ್ಟ ಆರೋಪದ ಮೇಲೆ ಬಂಧಿಸಲಾಯಿತು. ಜಾಮೀನು ಪಡೆಯುವ ಮೊದಲು ಸುಮಾರು ಒಂದು ತಿಂಗಳು ಜೈಲಿನಲ್ಲಿ ಕಳೆದಿದ್ದರು ನಟಿ.
ಸುಶಾಂತ್ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದಾಳೆ, ಆತನ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾಳೆ ಎಂದು ಆಕೆ ಆರೋಪಿಸಿದ್ದಾಳೆ ಎಂಬ ಆರೋಪ ಆಕೆಯ ಮೇಲಿತ್ತು. ಆದರೆ ನಟಿ ರಿಯಾ ಚಕ್ರವರ್ತಿ ಇದನ್ನು ನಿರಾಕರಿಸಿದ್ದಾರೆ.
ರಿಯಾ ಒಬ್ಬ ಒಳ್ಳೆಯ ವ್ಯಕ್ತಿ. ಅವಳು ಒಳ್ಳೆಯ ಕುಟುಂಬದಿಂದ ಬಂದವಳು. ನೀವು ಅವಳನ್ನು ಚೆಹ್ರೆನಲ್ಲಿ ನೋಡಿದಾಗ, ಅವಳು ಎಷ್ಟು ಒಳ್ಳೆಯ ನಟಿ ಎಂಬುದನ್ನು ನೀವು ನೋಡುತ್ತೀರಿ. ಸಿನಿಮಾದಲ್ಲಿ ಆಕೆಯದು ವಿಭಿನ್ನ ಪಾತ್ರ. ಅವರು ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ ಎಂದಿದ್ದಾರೆ ರೂಮಿ
ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಜೊತೆಗಿನ ರಿಯಾಳ ಕ್ಲೋಸ್ ಫೋಟೋಸ್ ವೈರಲ್ ಆಗಿದ್ದವು. ತಂದೆಯ ವಯಸ್ಸಿನ ನಿರ್ದೇಶಕನ ಜೊತೆ ನಟಿಯ ಕ್ಲೋಸ್‌ಅಪ್ ಫೋಟೋಗಳು ಭಾರೀ ಚರ್ಚೆಯಾಗಿದ್ದವು. ರಿಯಾ ಹಾಗೂ ಸುಶಾಂತ್ ಬ್ರೇಕಪ್‌ಗೆ ಮಹೇಶ್ ಭಟ್ ಕಾರಣ ಎಂಬ ಸುದ್ದಿಯೂ ಕೇಳಿ ಬಂದಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.