ರೇಖಾ -ಐಶ್ವರ್ಯಾ, ಅನಿಲ್‌ ಕಪೂರ್‌ -ರಣವೀರ್‌ : ಬಾಲಿವುಡ್‌ ಸ್ಟಾರ್ಸ್‌ ಫಿಟ್ನೆಸ್‌ ಗುಟ್ಟು!

First Published Apr 7, 2021, 5:48 PM IST

ಏಪ್ರಿಲ್ 7 ವಿಶ್ವ ಆರೋಗ್ಯ ದಿನ. ದೈಹಿಕವಾಗಿ ಆರೋಗ್ಯವಾಗಿರುವುದು ಮಾತ್ರವಲ್ಲದೇ ಮಾನಸಿಕವಾಗಿ ಫಿಟ್‌ ಆಗಿರುವುದೂ ಮುಖ್ಯ. ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಆರೋಗ್ಯವಾಗಿರಬಹುದು. ವ್ಯಾಯಾಮ ಮತ್ತು ಯೋಗ ದೇಹವನ್ನು ಸದೃಡವಾಗಿಸಲು ಸಹಾಯ ಮಾಡುತ್ತದೆ. ಬಾಲಿವುಡ್‌ ನಟಿ ರೇಖಾಗೆ 66 ವರ್ಷವಾದರೂ ಇನ್ನೂ ಫಿಟ್‌ ಆಗಿದ್ದಾರೆ. ಅದಕ್ಕೆ ಕಾರಣ ಅವರ ಲೈಫ್‌‌ಸ್ಟೈಲ್‌. ಹಾಗೇ ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳು ಎಷ್ಟೇ ಬ್ಯುಸಿ ಆಗಿದ್ದರೂ, ಪ್ರತಿದಿನ ವ್ಯಾಯಾಮ ಮಾಡಲು ಮರೆಯುವುದಿಲ್ಲ. ಕರೀನಾ ಕಪೂರ್‌ನಿಂದ ಮಲೈಕಾ ಅರೋರಾ ಮತ್ತು ಅನಿಲ್ ಕಪೂರ್‌ರಿಂದ ರಣವೀರ್ ಸಿಂಗ್‌ವರೆಗೆ ಪ್ರತಿಯೊಬ್ಬರೂ ತಪ್ಪದೇ ವರ್ಕೌಟ್‌ ಮಾಡುತ್ತಾರೆ.