ನೆಗೆಟಿವ್ ಜನರ ಜೊತೆ ಹೇಗೆ ಡೀಲ್ ಮಾಡಬೇಕೆಂದು ಹೇಳಿಕೊಟ್ಟ ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ನೆಗೆಟಿವ್ ಜನರ ಜೊತೆ ಹೇಗೆ ಡೀಲ್ ಮಾಡುತ್ತಾರೆ ಎಂದು ಬಹಿರಂಗ ಪಡಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ಮತ್ತು ಬಾಲಿವುಡ್ ಎರಡು ಕಡೆ ಬ್ಯುಸಿಯಾಗಿರುವ ರಶ್ಮಿಕಾ ಆಗಾಗ ಅಭಿಮಾನಿಗಳ ಜೊತೆ ಮಾತುಕತೆ ನಡೆಸುತ್ತಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ.
ಇತ್ತೀಚಿಗಷ್ಟೆ ರಶ್ಮಿಕಾ ಅಭಿಮಾನಿಗಳ ಜೊತೆ ಆಸ್ಕ್ ಮಿ ಎನಿಥಿಂಗ್ ಸೆಷನ್ ನಡಿಸಿದ್ದರು. ಅಭಿಮಾನಿಗಳು ತರಹೇವಾರಿ ಪ್ರಶ್ನೆಗಳನ್ನು ಕೇಳಿದ್ದರು. ಅದಕ್ಕೆ ರಶ್ಮಿಕಾ ಉತ್ತರ ನೀಡಿದ್ದಾರೆ. ಅದರಲ್ಲಿ ಅಭಿಮಾನಿಯೊಬ್ಬ ನೆಗೆಟಿವ್ ಜನರ ಜೊತೆ ಹೇಗೆ ಡೀಲ್ ಮಾಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಪ್ರಶ್ನೆಗೆ ರಶ್ಮಿಕಾ ಕೊಟ್ಟ ಉತ್ತರ ಅಭಿಮಾನಿಗಳ ಹೃದಯ ಗೆದ್ದಿದೆ. ಅವರಿಗೂ ತುಂಬಾ ಪ್ರೀತಿ ತೋರಿಸಿದ್ರೆ ಅವರ ನೆಗೆಟಿವಿ ಪ್ರೀತಿಯಾಗಿ ಬದಲಾಗುತ್ತದೆ' ಎಂದು ಹೇಳಿದ್ದಾರೆ.
ಈ ಸೆಷನ್ ಪ್ರಾರಂಭಿಸುವ ಮೊದಲು ಸಾಮಾಜಿಕ ಜಾಲತಾಣದಲ್ಲಿ 'ನಮಸ್ಕಾರ ನನ್ನ ಪ್ರಿಯರೇ... ನಾನು ನಿಮ್ಮ ಎಲ್ಲಾ ಟ್ವೀಟ್‌ಗಳು ಮತ್ತು ಕಾಮೆಂಟ್‌ಗಳನ್ನು ಓದಿದ್ದೇನೆ ಮತ್ತು ನನ್ನ ಹೃದಯವು ನಿಮ್ಮಲ್ಲಿ ಪ್ರತಿಯೊಬ್ಬರ ಮೇಲಿನ ಪ್ರೀತಿಯಿಂದ ತುಂಬಿದೆ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಂಡಿದ್ದೇನೆ. ಹಾಗಾಗಿ ಈಗ ಚಾಟ್ ಮಾಡೋಣ' ಎಂದು ಹೇಳಿದ್ದರು. ರಶ್ಮಿಕಾ ಹೇಳುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದು ಪ್ರಶ್ನೆ ಕೇಳಿದ್ದರು.
ರಶ್ಮಿಕಾ ಕೊನೆಯದಾಗಿ ಹಿಂದಿಯಲ್ಲಿ ಮಿಷನ್ ಮಜ್ನು ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸಿದ್ಧಾರ್ಥ್ ಮಲ್ಹೋತ್ರಾ ನಾಯಕನಾಗಿ ಕಾಣಿಸಿಕೊಂಡಿದ್ದರು. ಇದು ರಶ್ಮಿಕಾ ಸಹಿ ಮಾಡಿದ್ದ ಮೊದಲ ಹಿಂದಿ ಸಿನಿಮಾವಾಗಿತ್ತು. ಆದರೆ ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಂಡಿಲ್ಲ.
ಸದ್ಯ ರಶ್ಮಿಕಾ ಹಿಂದಿಯಲ್ಲಿ ಅನಿಮಲ್ ಶೂಟಿಂಗ್ ನಲ್ಲಿದ್ದಾರೆ. ರಣಬೀರ್ ಕಪೂರ್ ಜೊತೆ ನಟಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಪುಷ್ಪ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆ ನಟಿಸುತ್ತಿದ್ದಾರೆ. ಮೊದಲ ಭಾಗ ಸೂಪರ್ ಸಕ್ಸಸ್ ಕಂಡ ಬಳಿಕ ಇದೀಗ 2ನೇ ಭಾಗದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ರಶ್ಮಿಕಾ ಶೂಟಿಂಗ್ ಪ್ರಾರಂಭಿಸಲಿದ್ದಾರೆ.