'ಬಾಜಿರಾವ್ ಮಸ್ತಾನಿ' ಚಿತ್ರವನ್ನು ತಾಯಿಗೆ ತೋರಿಸಲು ಇಷ್ಟವಿರಲಿಲ್ಲ ರಣವೀರ್‌ಗೆ
ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ 1985 ರ ಜುಲೈ 6 ರಂದು ಮುಂಬೈನಲ್ಲಿ ಜನಿಸಿದರು. 35 ವರ್ಷದ ರಣವೀರ್ ಸಿಂಗ್ 'ಬ್ಯಾಂಡ್ ಬಾಜಾ ಬರಾತ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಆದರೆ, 2015ರ ಚಲನಚಿತ್ರ 'ಬಾಜಿರಾವ್ ಮಸ್ತಾನಿ'ಯ ನಂತರ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲಾರಂಭಿಸಿದ್ದರು. ಈ ಚಿತ್ರದಿಂದ ಫೇಮಸ್ ಅದರೂ, ರಣವೀರ್ ತನ್ನ ತಾಯಿಗೆ ಈ ಸಿನಿಮಾ ತೋರಿಸಲು ಎಂದಿಗೂ ಬಯಸಲಿಲ್ಲವಂತೆ. ಆದರೆ, ಈ ಚಿತ್ರವನ್ನು ನೋಡುವುದಾಗಿ ತಾಯಿ ಒತ್ತಾಯಿಸಿದ್ದರಂತೆ. ರಣವೀರ್ ಈ ರೀತಿ ನಡೆದುಕೊಂಡಿದ್ದೇಕೆ? ನೀವೇ ಓದಿ..

ತಾಯಿಯ ಬಲವಂತದ ಮೇರೆಗೆ 'ಬಾಜಿರಾವ್ ಮಸ್ತಾನಿ' ಚಿತ್ರವನ್ನು ಅವರಿಗೆ ತೋರಿಸಬೇಕಾಯಿತು. ಆದರೆ, ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ನೋಡಿ ರಣವೀರ್ ತಾಯಿ ದಿಗ್ಭ್ರಮೆಗೊಂಡರು ಮತ್ತು ನಂತರ ದೀರ್ಘಕಾಲ ಕಣ್ಣೀರಿಟ್ಟರಂತೆ.

ರಣವೀರ್ ನಿರ್ವಹಿಸಿದ ಪಾತ್ರವು ಸಾಯುವ ಚಲನಚಿತ್ರಗಳನ್ನು ಅವರ ತಾಯಿ ಇಷ್ಟಪಡುವುದಿಲ್ಲ. 'ಬಾಜಿರಾವ್ ಮಸ್ತಾನಿ' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ರಣವೀರ್ ಅಂದರೆ ಬಾಜಿರಾವ್ ಸಾಯುತ್ತಾನೆ. ಚಿತ್ರದ ಈ ದೃಶ್ಯವನ್ನು ನೋಡಿದ ಅವರ ತಾಯಿ ತುಂಬಾ ದುಃಖಿತರಾಗಿದ್ದರು ಮತ್ತು ನಂತರ ಮಗನನ್ನು ಎದೆಯ ಮೇಲೆ ಅರ್ಧ ಗಂಟೆಯವರೆಗೂ ತಬ್ಬಿಕೊಂಡಿದ್ದರಂತೆ.

ನಂತರ ತಾಯಿ ಮಗನ ಅಭಿನಯವನ್ನು ಮನಸಾರೆ ಹೊಗಳಿದರಂತೆ. ನನ್ನ ಮಗ ಇಲ್ಲದೆ 'ಬಾಜಿರಾವ್ ಮಸ್ತಾನಿ' ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ರಣವೀರ್ ಅವರಲ್ಲದೆ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾರ ಪಾತ್ರಗಳೂ ಅವರಿಗೆ ಇಷ್ಟವಾಗಿತ್ತಂತೆ.

ರಣವೀರ್ ಸಿಂಗ್ ನಟಿ ಸೋನಮ್ ಕಪೂರ್‌ರ ಕಸಿನ್. ಸಂಬಂಧದಲ್ಲಿ ರಣವೀರ್ ತಾಯಿ ಅಂಜು ಭವಾನಿ, ಸೋನಂ ತಾಯಿ ಸುನೀತಾ ಕಪೂರ್‌ಗೆ ಸಹೋದರಿ. ಹಾಗೇ ಸೋನಂ-ರಣವೀರ್ ಸಹೋದರ ಸಹೋದರಿಯರಾಗುತ್ತಾರೆ.

ಅಂದಹಾಗೆ, ಅನಿಲ್ ಕಪೂರ್ ಮತ್ತು ಸೋನಮ್ ಕಪೂರ್ ಅವರಂತಹ ಸ್ಟಾರ್‌ಗಳ ಸಂಬಂಧಿಯಾದರೂ, ರಣವೀರ್ ತಮ್ಮ ಮೊದಲ ಬ್ರೇಕ್‌ಥ್ರೂ ಪಡೆಯಲು 3 ವರ್ಷಗಳ ಕಾಲ ಪ್ರಯಾಸಪಡಬೇಕಾಯಿತು.

ನಟನಾಗಿ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು, ರಣವೀರ್ ಜಾಹೀರಾತು ಕಂಪನಿಯಲ್ಲಿ ಕಾಪಿ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದರು.

3 ವರ್ಷಗಳ ಕಠಿಣ ಹೋರಾಟದ ನಂತರ, ನಿರ್ಮಾಪಕ ಆದಿತ್ಯ ಚೋಪ್ರಾ ರಣವೀರ್‌ಗೆ 'ಬ್ಯಾಂಡ್ ಬಾಜಾ ಬರಾತ್' ಚಿತ್ರವನ್ನು ನೀಡಿದಾಗ, ಅವರು ತುಂಬಾ ಭಾವುಕರಾಗಿದ್ದರು. ಪ್ರಸ್ತಾಪವನ್ನು ಸ್ವೀಕರಿಸಿದ ನಂತರ, ಅವರು ಕಾರಿಡಾರ್‌ನಲ್ಲಿ ಅತ್ತಿದ್ದರಂತೆ.

ನಟನ ತಂದೆ ಜಗ್ಜಿತ್ ಸಿಂಗ್ ಭವಾನಿ ಮತ್ತು ತಾಯಿ ಅಂಜು ಭವಾನಿ. ರಿತಿಕಾ ಎಂಬ ಅಕ್ಕ ಕೂಡ ಇದ್ದಾರೆ. ರಣವೀರ್ ತಂದೆ ಬಾಂದ್ರಾ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ. ತಾಯಿ ಗೃಹಿಣಿ.

ರಣವೀರ್‌ಗೆ ಬಾಲ್ಯದಿಂದಲೂ ಡ್ಯಾನ್ಸ್ ಅಂದರೆ ಪ್ರೀತಿ. ಒಮ್ಮೆ ಬರ್ಥ್‌ಡೇ ಪಾರ್ಟಿಗೆ ಹೋಗುವಾಗ, ಅವರ ಅಜ್ಜಿ ರಣವೀರ್‌ಗೆ ಅಲ್ಲಿ ನೃತ್ಯ ಮಾಡಲು ಹೇಳಿದರಂತೆ. ಅಲ್ಲಿ ಹೋಗಿ ಲಾನ್ ಮೇಲೆ 'ಚುಮ್ಮಾ-ಚುಮ್ಮಾ ದೇ ದೇ' ಹಾಡಿಗೆ ಹೆಜ್ಜೆ ಹಾಕಿದ್ರಂತೆ.

ಸ್ಕೂಲ್ ಡೇಸ್‌ನಿಂದಲೇ ರಂಗ ಪ್ರದರ್ಶನಗಳಲ್ಲಿ ಆಸಕ್ತಿ ಹೊಂದಿದ್ದ ರಣವೀರ್, ಯಾವಾಗಲೂ ಮೊನೊ ಆಕ್ಟಿಂಗ್ ಮಾಡುತ್ತಿದ್ದರು. ಹಲವಾರು ಬಹುಮಾನಗಳನ್ನು ಸಹ ಗೆದ್ದಿದ್ದರಂತೆ.ಕಾಲೇಜಿಗೆ ಹೋಗುವಾಗಲೂ ಸಾಕಷ್ಟು ತರಲೆ ಮಾಡುತ್ತಿದ್ದರು. ಆಗಾಗ್ಗೆ ಸೆಲೆಬ್ರೆಟಿಗಳು ಸಿನಿಮಾದ ಪಾತ್ರಗಳನ್ನು ನಕಲಿ ಮಾಡಿ ಇತರರನ್ನು ನಗುವಂತೆ ಮಾಡುತ್ತಿದ್ದರು.

'ಬ್ಯಾಂಡ್ ಬಾಜಾ ಬರಾತ್' ಚಿತ್ರದ ಸೆಟ್‌ನಲ್ಲಿ ರಣವೀರ್ ಅನುಷ್ಕಾರಿಗೆ ಕಪಾಳಮೋಕ್ಷ ಮಾಡುವ ದೃಶ್ಯವಿತ್ತು. ಆದರೆ, ನಂತರ ಇದಕ್ಕೆ ಕ್ಷಮೆಯಾಚಿಸಿದರಂತೆ. ಅಸಲಿಗೆ ರಣವೀರ್ ಮತ್ತು ಅನುಷ್ಕಾ ಒಂದು ದೃಶ್ಯದಲ್ಲಿ ಜಗಳವಾಡಬೇಕಿತ್ತು. ಈ ದೃಶ್ಯದ ಚಿತ್ರೀಕರಣ ಮಾಡುತ್ತಿದ್ದಾಗ ಸಿಟ್ಟಿನಲ್ಲಿ ಅನುಷ್ಕಾಗೆ ಹೊಡೆದೇ ಬಿಟ್ಟರಂತೆ.

ಕೋ ಸ್ಟಾರ್ ದೀಪಿಕಾ ಪಡುಕೋಣೆ ಜೊತೆ 2018 ರ ನವೆಂಬರ್‌ನಲ್ಲಿ ಇಟಲಿಯಲ್ಲಿ ವಿವಾಹವಾದರು ರಣವೀರ್ ಸಿಂಗ್ .

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.