- Home
- Entertainment
- Cine World
- ಅಣ್ಣಾವ್ರ ಸಿನಿಮಾ ಶೂಟಿಂಗ್ ನಡೆದ ಜಾಗದಲ್ಲೇ ರಜನಿಕಾಂತ್ ಚಿತ್ರದ ಶೂಟಿಂಗ್: ಮೈಸೂರಿನಲ್ಲಿ ತಲೈವಾ
ಅಣ್ಣಾವ್ರ ಸಿನಿಮಾ ಶೂಟಿಂಗ್ ನಡೆದ ಜಾಗದಲ್ಲೇ ರಜನಿಕಾಂತ್ ಚಿತ್ರದ ಶೂಟಿಂಗ್: ಮೈಸೂರಿನಲ್ಲಿ ತಲೈವಾ
ಮೈಸೂರಿನಲ್ಲಿ ಹುಲ್ಲೇನಹಳ್ಳಿ ಎಂಬಲ್ಲಿ ಜೈಲರ್ 2 ಶೂಟಿಂಗ್ ಬಿರುಸಿನಿಂದ ಆರಂಭವಾಗಿದೆ. ಮೂರು ದಿನಗಳ ಕಾಲ ಇಲ್ಲಿ ಚಿತ್ರೀಕರಣ ನಡೆಯಲಿದ್ದು, ರಜನಿಕಾಂತ್ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಮೈಸೂರಿನ ಹುಲ್ಲೇನಹಳ್ಳಿಯಲ್ಲಿ ರಜನಿಕಾಂತ್ ನಟನೆಯ ‘ಜೈಲರ್ 2’ ಸಿನಿಮಾದ ಶೂಟಿಂಗ್ ಆರಂಭವಾಗಿದೆ. 43 ವರ್ಷದ ಹಿಂದೆ ಡಾ. ರಾಜ್‌ಕುಮಾರ್ ನಟನೆಯ ‘ಕಾಮನಬಿಲ್ಲು’ ಸಿನಿಮಾದ ಹಾಡಿನ ಶೂಟಿಂಗ್ ನಡೆದ ಸೇತುವೆಯ ಬಳಿ ಈ ಚಿತ್ರದ ಚಿತ್ರೀಕರಣವೂ ನಡೆಯಲಿದೆ.
ಈ ಜಾಗದಲ್ಲಿ ‘ಜೈಲರ್ 2’ ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ತಂಡ ಪ್ಲಾನ್ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕಾಗಿ ರಜನಿಕಾಂತ್ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ನೆಲ್ಸನ್ ನಿರ್ದೇಶನದ ಈ ಸಿನಿಮಾದಲ್ಲಿ ರಜನಿ ಜೊತೆಗೆ ಶಿವಣ್ಣನೂ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದು, ಅವರು ಆಗಸ್ಟ್ ತಿಂಗಳಿಂದ ಶೂಟಿಂಗ್‌ನಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಮೈಸೂರಿನ ವಿವಿಧೆಡೆ ‘ಜೈಲರ್ 2’ ಚಿತ್ರೀಕರಣ ನಡೆಯಲಿದೆ.
ಜೈಲರ್ 2 ಚಿತ್ರದಲ್ಲಿ ತೆಲುಗು ನಟ ನಂದಮೂರಿ ಬಾಲಕೃಷ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಗಾರ್ಜುನ ಅಕ್ಕಿನೇನಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನೂ ಬಹು ತಾರೆಗಳ ದಂಡೇ ಇರುವ ಈ ಚಿತ್ರದಲ್ಲಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವದಂತಿಯೂ ಹಬ್ಬಿದೆ.