ಮಹೇಶ್ ಬಾಬು-ರಾಜಮೌಳಿ SSMB29 ಸಿನಿಮಾಗೆ ವಿಕ್ರಮ್ ಪವರ್: ಏನಿದು ಹೊಸ ಟ್ವಿಸ್ಟ್!
ಟಾಲಿವುಡ್ ದಿಗ್ಗಜ ಎಸ್.ಎಸ್. ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ಅಭಿನಯದ SSMB29 ಚಿತ್ರಕ್ಕೆ ತಮಿಳು ಸ್ಟಾರ್ ವಿಕ್ರಮ್ ಅವರನ್ನು ಪರಿಗಣಿಸುತ್ತಿದ್ದಾರಂತೆ.

ಸೂಪರ್ ಸ್ಟಾರ್ ಮಹೇಶ್ ಬಾಬು & ರಾಜಮೌಳಿ ಕಾಂಬಿನೇಷನ್ ನ SSMB29 ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ವಿಕ್ರಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ರಾಜಮೌಳಿ ವಿಕ್ರಮ್ ಜೊತೆ ಚಿತ್ರದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಮಹೇಶ್ ಬಾಬು ಸ್ಟಾರ್ ಡಮ್ ಗೆ ಸರಿಸಮನಾದ ನಟ ಬೇಕೆಂದು ರಾಜಮೌಳಿ ಭಾವಿಸಿದ್ದಾರಂತೆ. ವಿಕ್ರಮ್ ಆ ಕ್ರೈಟೀರಿಯಾಕ್ಕೆ ಸರಿಯಾಗಿ ಹೊಂದುತ್ತಾರೆ.
ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಪ್ರಿಯಾಂಕಾ ಚೋಪ್ರಾ ಕೂಡ ನಟಿಸುತ್ತಿದ್ದಾರೆ. ಚಿತ್ರದ ಮಟ್ಟ ಇನ್ನಷ್ಟು ಹೆಚ್ಚಿಸಲು ರಾಜಮೌಳಿ ಮತ್ತೊಬ್ಬ ಸ್ಟಾರ್ ನಟನನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.
ವಿಕ್ರಮ್ ತೆಲುಗು ಪ್ರೇಕ್ಷಕರಿಗೆ ಹೊಸಬರಲ್ಲ. 'ಅಪರಿಚಿತ', 'ಐ' ಮತ್ತು 'ಪೊನ್ನಿಯನ್ ಸೆಲ್ವನ್' ಚಿತ್ರಗಳಿಂದ ಅವರಿಗೆ ಒಳ್ಳೆಯ ಫ್ಯಾನ್ ಬೇಸ್ ಇದೆ. ಬಹುಭಾಷಾ ಚಿತ್ರ ಮಾಡಬೇಕೆಂಬ ರಾಜಮೌಳಿ ಯೋಜನೆಗೆ ವಿಕ್ರಮ್ ಸೂಕ್ತ ಎನಿಸಿದ್ದಾರೆ.
ಮಹೇಶ್ ಬಾಬು ಮತ್ತು ವಿಕ್ರಮ್ ಮೊದಲ ಬಾರಿಗೆ ಒಟ್ಟಿಗೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ. ಆದರೆ ಇನ್ನೂ ಚರ್ಚೆ ಹಂತದಲ್ಲಿದೆ. ವಿಕ್ರಮ್ ಇತ್ತೀಚಿನ ಚಿತ್ರಗಳು ಹೆಚ್ಚು ಜನಪ್ರಿಯತೆ ಗಳಿಸಿಲ್ಲ. ಈ ಪಾತ್ರಕ್ಕೆ ಒಪ್ಪುತ್ತಾರೋ ಇಲ್ಲವೋ ಕಾದು ನೋಡಬೇಕು.
SSMB29 ತೆಲುಗು ಮತ್ತು ಭಾರತೀಯ ಚಿತ್ರರಂಗದ ಮೈಲಿಗಲ್ಲಾಗಬೇಕೆಂಬುದು ರಾಜಮೌಳಿ ಆಶಯ. ಪ್ಯಾನ್ ವರ್ಲ್ಡ್ ಸಿನಿಮಾ ನಿರ್ಮಾಣ ಮಾಡುತ್ತಾರೋ ಇಲ್ಲವೋ ಕಾದು ನೋಡಬೇಕು.