ಕುಂದ್ರಾ ಜೋಡಿಗೆ ಮತ್ತೊಂದು ಶಾಕ್: ರಾಜ್ ಬ್ಯಾಂಕ್ ಎಕೌಂಟ್ ಸೀಜ್
- ಬಾಲಿವುಡ್‌ನ ಜೋಡಿಗೆ ಮತ್ತೊಂದು ಆಘಾತ
- ವಿಚಾರಣೆ ಬೆನ್ನಲ್ಲೇ ಬ್ಯಾಂಕ್ ಖಾತೆಗಳು ಜಪ್ತಿ
ಮೊಬೈಲ್ ಆ್ಯಪ್ ಅಶ್ಲೀಲ ಸಿನಿಮಾ ಬಿಡುಗಡೆ ಪ್ರಕರಣ ಸಂಬಂಧ ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳ ನಿರ್ದೇಶನದ ಮೇರೆಗೆ ರಾಜ್‌ಕುಂದ್ರಾ ಅವರ ಉತ್ತರ ಪ್ರದೇಶದ SBIನಲ್ಲಿ ಹೊಂದಿದ 2 ಖಾತೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ
ಈ ವೇಳೆ ಈ ಎರಡೂ ಖಾತೆಗಳಲ್ಲಿ ಕೋಟ್ಯಂತರ ರು. ಠೇವಣಿ ಮಾಡಲಾಗಿರುವುದು ಕಂಡುಬಂದಿದೆ. ಜೊತೆಗೆ ರಾಜ್‌ಕುಂದ್ರಾ ಅವರ ಚಿತ್ರ ನಿರ್ಮಾಣ ಕಂಪನಿಯನ್ನು ಅರವಿಂದ್ ಶ್ರೀವಾಸ್ತವ ಅವರು ನಡೆಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ಕುಂದ್ರಾ ಅವರ ಖಾತೆಯಿಂದ ಅರವಿಂದ್ ಅವರ ಪತ್ನಿ ಹರ್ಷಿತಾ ಅವರ ಖಾತೆಗೆ ಹಣ ಜಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದೆರಡು ವರ್ಷಗಳಿಂದ ತಮ್ಮ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದ ಅರವಿಂದ್, ಪ್ರತೀ ತಿಂಗಳು ಖರ್ಚಿಗೆ ಹಣ ನೀಡುತ್ತಿದ್ದ. ಆದರೆ ಆತನ ಯಾವುದೇ ಚಟುವಟಿಕೆಗಳ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಅರವಿಂದ್ ಅವರ ತಂದೆ ಎನ್.ಪಿ ಶ್ರೀವಾಸ್ತವ ತಿಳಿಸಿದ್ದಾರೆ.
ಈ ಎರಡು ಬ್ಯಾಂಕ್ ಖಾತೆಗಳಲ್ಲಿ ಹಲವು ಕೋಟಿ ರೂಪಾಯಿಗಳನ್ನು ಜಮಾ ಮಾಡಲಾಗಿದೆ ಎಂದು ಅಧಿಕಾರಿ ಬಹಿರಂಗಪಡಿಸಿದ್ದಾರೆ.
ಜುಲೈ 27 ರವರೆಗೆ ರಾಜ್ ಕುಂದ್ರಾ ಮುಂಬೈ ಅಪರಾಧ ಶಾಖೆಯ ವಶದಲ್ಲಿರುತ್ತಾರೆ. ಜುಲೈ 27 ರಂದು ಬಾಂಬೆ ಹೈಕೋರ್ಟ್ ರಾಜ್ ಕುಂದ್ರಾ ಅವರ ಜಾಮೀನು ಅರ್ಜಿಯನ್ನು ವಿಚಾರಿಸಲಿದೆ
ಅಶ್ಲೀಲ ಸಿನಿಮಾಗಳ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಶಿಲ್ಪಾಶೆಟ್ಟಿಅವರ ಪತಿ ರಾಜ್‌ಕುಂದ್ರಾ ಮತ್ತು ಇತರ 11 ಮಂದಿಯನ್ನು ಮುಂಬೈ ಪೊಲೀಸರು ಜು.19ರಂದು ಬಂಧಿಸಿದ್ದಾರೆ.