MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Varamahalakshmi Wishes
Bengaluru New Elevated Corridor
H1N1 in Bengaluru
Karnataka Apartment Bill 2026
Bengaluru Medical Institutions Fined
Mandya Students Protest
MUDA Sites
Bengaluru Lokayukta Raid
Union Ministers Interaction with Gen Zs
Pakistan occupied Kashmir
  • Home
  • Entertainment
  • Cine World
  • ಅಲ್ಲು ಅರ್ಜುನ್ ಬೌನ್ಸರ್ ಅರೆಸ್ಟ್, ಪುಷ್ಪಾ 2 ಚಿತ್ರದ ನಾಯಕನ ವಿಚಾರಣೆ ಬೆನ್ನಲ್ಲೇ ಶಾಕ್!

ಅಲ್ಲು ಅರ್ಜುನ್ ಬೌನ್ಸರ್ ಅರೆಸ್ಟ್, ಪುಷ್ಪಾ 2 ಚಿತ್ರದ ನಾಯಕನ ವಿಚಾರಣೆ ಬೆನ್ನಲ್ಲೇ ಶಾಕ್!

ಕಾಲ್ತುಳಿತ ಪ್ರಕರಣದಲ್ಲಿ ಅರೆಸ್ಟ್ ಆಗಿ ಜಾಮೀನು ಪಡೆದಿರುವ ಅಲ್ಲು ಅರ್ಜುನ್ ಇಂದು ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಇದರ ಬೆನ್ನಲ್ಲೇ  ಅಲ್ಲು ಅರ್ಜುನ್ ಸಿಬ್ಬಂದಿಯೊಬ್ಬರನ್ನ ಬಂಧಿಸಲಾಗಿದೆ. 

2 Min read
Author : Chethan Kumar
| Updated : Dec 24 2024, 06:11 PM IST
Share this Photo Gallery
  • FB
  • TW
  • Linkdin
  • Whatsapp
16

ಸಂಧ್ಯಾ ಥಿಯೇಟರ್​ನಲ್ಲಿ ನಡೆದ ನೂಕುನುಗ್ಗಲು ಘಟನೆ ಸಂಚಲನ ಮೂಡಿಸಿದೆ. ಮಹಿಳೆ ಸಾವಿನ ಬಗ್ಗೆ ಕೇಸ್ ದಾಖಲಿಸಿರೋ ಪೊಲೀಸರು ಹಲವರನ್ನ ಬಂಧಿಸಿದ್ದಾರೆ. ಅಲ್ಲು ಅರ್ಜುನ್ ಸರಿಯಾದ ಅನುಮತಿ ಇಲ್ಲದೆ ಸಂಧ್ಯಾ ಥಿಯೇಟರ್​ಗೆ ಸಿನಿಮಾ ನೋಡಲು ಹೋಗಿದ್ದೇ ಈ ಅನಾಹುತಕ್ಕೆ ಕಾರಣ ಅಂತ ಪೊಲೀಸರು ಆರೋಪಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಇನ್ನೂ ಮುಂದುವರಿದಿದೆ. ಇತ್ತ ಮತ್ತೊಂದು ಬಂಧನವಾಗಿದೆ. ಅಲ್ಲು ಅರ್ಜುನ್ ವೈಯಕ್ತಿಕ ಸಿಬ್ಬಂದಿಯಲ್ಲಿ ಒಬ್ಬರಾದ ಬೌನ್ಸರ್ ಆಂಟೋನಿ ಬಂಧನವಾಗಿದೆ. ಸಂಧ್ಯಾ ಥಿಯೇಟರ್​ನಲ್ಲಿ ಬೌನ್ಸರ್​ಗಳು ಅಲ್ಲು ಅರ್ಜುನ್ ಅಭಿಮಾನಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋ ಮಾಹಿತಿ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26

ಇಂದು ತೆಲಂಗಾಣ ಪೊಲೀಸರು ಮತ್ತೊಮ್ಮೆ ಅಲ್ಲು ಅರ್ಜುನ್​ರನ್ನ ವಿಚಾರಣೆಗೆ ಕರೆದಿದ್ದಾರೆ. BNS 35(3) ಸೆಕ್ಷನ್ ಅಡಿ ನೋಟಿಸ್ ಜಾರಿ ಮಾಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಅಲ್ಲು ಅರ್ಜುನ್ ಚಿಕ್ಕಡಪಳ್ಳಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ಚಿಕ್ಕಡಪಳ್ಳಿ ಸಿಐ, ಎಸಿಪಿ ಅಲ್ಲು ಅರ್ಜುನ್​ರನ್ನ ವಿಚಾರಣೆ ಮಾಡಿದ್ದಾರೆ. ಕಾಲ್ತುಳಿತ ಪ್ರಕರಣ ಸಂಬಂಧ ಕೆಲ ಕಠಿಣ ಪ್ರಶ್ನೆಗಳನ್ನು ಅಲ್ಲು ಅರ್ಜುನ್ ಎದುರಿಸಿದ್ದಾರೆ. 

 

36

ಮೂರು ಗಂಟೆಗೂ ಹೆಚ್ಚು ಕಾಲ ನಡೆದ ವಿಚಾರಣೆಯಲ್ಲಿ 20ಕ್ಕೂ ಹೆಚ್ಚು ಪ್ರಶ್ನೆಗಳನ್ನ ಅಲ್ಲು ಅರ್ಜುನ್​ಗೆ ಕೇಳಲಾಗಿದೆ. ಕೆಲವು ಪ್ರಶ್ನೆಗಳಿಗೆ ಅಲ್ಲು ಅರ್ಜುನ್ ಮೌನವಾಗಿದ್ದಾರೆ ಎನ್ನಲಾಗಿದೆ. ಅಲ್ಲು ಅರ್ಜುನ್ ಜೊತೆ ವಕೀಲ ಅಶೋಕ್ ರೆಡ್ಡಿ ಇದ್ದರು. ಅವರ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 18 ಜನರನ್ನ ಆರೋಪಿಗಳನ್ನಾಗಿ ಮಾಡಲಾಗಿದೆ. ಮೈತ್ರಿ ಮೂವಿ ಮೇಕರ್ಸ್ ಜೊತೆಗೆ, ಅಲ್ಲು ಅರ್ಜುನ್ ವೈಯಕ್ತಿಕ ಸಿಬ್ಬಂದಿ ಹೆಸರುಗಳನ್ನೂ ರಿಮಾಂಡ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

46

ಡಿಸೆಂಬರ್ 4ರಂದು ರಾತ್ರಿ ಪುಷ್ಪ 2 ಪ್ರೀಮಿಯರ್ ಪ್ರದರ್ಶನದ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ನಾಯಕಿ ರಶ್ಮಿಕಾ ಜೊತೆ ಸಂಧ್ಯಾ ಥಿಯೇಟರ್​ಗೆ ಹೋಗಿದ್ದರು. ಅಲ್ಲು ಅರ್ಜುನ್ ಬಂದಿದ್ದರಿಂದ ಅಭಿಮಾನಿಗಳು ಥಿಯೇಟರ್​ಗೆ ಮುಗಿಬಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಯ್ತು. ರೇವತಿ ಎಂಬ ಮಹಿಳೆ ಸಾವನ್ನಪ್ಪಿದರು. ರೇವತಿ 9 ವರ್ಷದ ಮಗ ಶ್ರೀತೇಜ್​ಗೆ ಗಂಭೀರ ಗಾಯಗಳಾಗಿವೆ.

56

ಈ ಘಟನೆ ಬಗ್ಗೆ ತೆಲಂಗಾಣ ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಅಲ್ಲು ಅರ್ಜುನ್ ಹೆಸರನ್ನ A11 ಆಗಿ ಸೇರಿಸಿದ್ದಾರೆ. ಡಿಸೆಂಬರ್ 13ರಂದು ಅಲ್ಲು ಅರ್ಜುನ್ ಬಂಧನವಾಯಿತು. ಅವರಿಗೆ ನಾಂಪಳ್ಳಿ ನ್ಯಾಯಾಲಯ 14 ದಿನಗಳ ರಿಮಾಂಡ್ ವಿಧಿಸಿತು. ಅಲ್ಲು ಅರ್ಜುನ್ ಪರ ವಕೀಲರು ಹೈಕೋರ್ಟ್ ಮೊರೆ ಹೋದರು. ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದರು. ವೈಎಸ್​ಆರ್​ಸಿಪಿ ಸಂಸದ, ವಕೀಲ ನಿರಂಜನ್ ರೆಡ್ಡಿ ಅವರನ್ನ ಕಣಕ್ಕಿಳಿಸಲಾಯಿತು.

 

66

ಅವರ ವಾದವನ್ನ ಒಪ್ಪಿಕೊಂಡ ನ್ಯಾಯಾಲಯ ಅಲ್ಲು ಅರ್ಜುನ್​ಗೆ 4 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತು. ಆದ್ರೆ ಒಂದು ದಿನ ರಾತ್ರಿ ಅಲ್ಲು ಅರ್ಜುನ್ ಚಂಚಲ್​ಗೂಡ ಜೈಲಿನಲ್ಲಿ ಕಳೆಯಬೇಕಾಯಿತು. ಹೈಕೋರ್ಟ್​ನಲ್ಲಿ ವಾದ ನಡೆಯುತ್ತಿದ್ದಂತೆಯೇ ಕೆಳ ನ್ಯಾಯಾಲಯದ ತೀರ್ಪಿನಂತೆ ಅಲ್ಲು ಅರ್ಜುನ್​ರನ್ನ ಚಂಚಲ್​ಗೂಡ ಜೈಲಿಗೆ ಕಳುಹಿಸಲಾಯಿತು. ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ರೂ ಆದೇಶದ ಪ್ರತಿ ಜೈಲು ಅಧಿಕಾರಿಗಳಿಗೆ ತಲುಪಬೇಕಿತ್ತು. ಆ ಪ್ರತಿ ಸಕಾಲಕ್ಕೆ ಸಿಗಲಿಲ್ಲ ಅನ್ನೋ ಕಾರಣಕ್ಕೆ ಅಲ್ಲು ಅರ್ಜುನ್​ರನ್ನ ಜೈಲಿನಲ್ಲಿ ಇರಿಸಲಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಅಲ್ಲು ಅರ್ಜುನ್
ಪೊಲೀಸ್
ಕಾಲ್ತುಳಿತ

Latest Videos
Recommended Stories
Recommended image1
ಸರ್ಕಲ್ ಗೆ ಎಷ್ಟು ಸೈಡ್ಸ್ ? ಉತ್ತರ ನೀಡಿ ಟ್ರೋಲರ್ಸ್ ಬಾಯಿಗೆ ಆಹಾರವಾದ ವಿನಯ್ ಗೌಡ
Recommended image2
ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ನಟಿ ಈಗ ಸಖತ್ ಸ್ಲಿಮ್: ಅಷ್ಟಕ್ಕೂ ಯಾರು ಗೊತ್ತಾ?
Recommended image3
ಪುಟ್ನಂಜ ನಟಿ ಮೀನಾ ಪತಿಯನ್ನು ಉಳಿಸಲು ಮಾಡಿದ್ದ ಪ್ರಯತ್ನಗಳೆಷ್ಟು? ಇಷ್ಟು ದಿನದ ಬಳಿಕ ಬಯಲಾಯ್ತು ಸತ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved