ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ನಿಶ್ಚಿತಾರ್ಥ: ಯಾರಿರುತ್ತಾರೆ, ಹೇಗಿರುತ್ತೆ ಡ್ರೆಸ್?
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಮತ್ತು ಎಎಪಿ ಸಂಸದ ರಾಘವ್ ಚಡ್ಡಾ (Raghav Chadha) ಸಂಬಂಧದಲ್ಲಿದ್ದಾರೆ ಮತ್ತು ಇಬ್ಬರ ನಿಶ್ಚಿತಾರ್ಥವು ಮೇ 13 ರಂದು ದೆಹಲಿಯಲ್ಲಿ ನಡೆಯಲಿದೆ. ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಳ್ಳಲು ದಂಪತಿ ದೆಹಲಿಗೆ ಬಂದಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ , ನಿಶ್ಚಿತಾರ್ಥಕ್ಕೆ ಸಂಬಂಧಿಸಿದ ಕೆಲವು ವಿವರಗಳು ಮುನ್ನೆಲೆಗೆ ಬಂದಿವೆ. ಅದೇ ಸಮಯದಲ್ಲಿ, ನಿಶ್ಚಿತಾರ್ಥ ಸಮಾರಂಭದಲ್ಲಿ ಇಬ್ಬರೂ ಏನು ಧರಿಸುತ್ತಾರೆ ಎಂಬುದೂ ಬಹಿರಂಗವಾಗಿದೆ. ಇಲ್ಲಿದೆ ಪರಿಣಿತಿ ಚೋಪ್ರಾ ರಾಘವ್ ಚಡ್ಡಾ ನಿಶ್ಚಿತಾರ್ಥ ಸಮಾರಂಭದ ವಿವರ
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಬಾಯ್‌ಫ್ರೆಂಡ್ ರಾಘವ್ ಚಡ್ಡಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ನಡುವೆ ಮೇ 13ರಂದು ದೆಹಲಿಯಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿಯೂ ಇದೆ.
ಇಬ್ಬರ ನಿಶ್ಚಿತಾರ್ಥ ಸಂಪೂರ್ಣ ಸಾಂಪ್ರದಾಯಿಕವಾಗಿ ನಡೆಯಲಿದೆ ಮತ್ತು ಇದರಲ್ಲಿ ಎರಡೂ ಕುಟುಂಬದ ಬಂಧು ಮಿತ್ರರು ಸೇರಿದಂತೆ ಸುಮಾರು 150 ಮಂದಿ ಭಾಗಿಯಾಗಲಿದ್ದಾರೆ. ನಿಶ್ಚಿತಾರ್ಥವನ್ನು ಅತ್ಯಂತ ಖಾಸಗಿಯಾಗಿ ಇರಿಸಲಾಗಿದೆ ಎಂದು ವರದಿಯಾಗಿದೆ.
ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ತಮ್ಮ ನಿಶ್ಚಿತಾರ್ಥಕ್ಕಾಗಿ ಸಾಂಪ್ರದಾಯಿಕ ಮತ್ತು ಸರಳ ಬಟ್ಟೆಗಳನ್ನು ಧರಿಸಲು ಯೋಜಿಸಿದ್ದಾರೆ. ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಉಡುಪನ್ನು ಪರಿಣಿತಿ ಧರಿಸಿದರೆ, ರಾಘವ್ ಅವರ ಫ್ಯಾಷನ್ ಡಿಸೈನರ್ ಚಿಕ್ಕಪ್ಪ ಪವನ್ ಸಚ್‌ದೇವ ವಿನ್ಯಾಸಗೊಳಿಸಿದ ಬಟ್ಟೆಗಳನ್ನು ಧರಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಪರಿಣಿತಿ ಹೆವಿ ವರ್ಕ್ ಔಟ್ ಫಿಟ್ ಆಯ್ಕೆ ಮಾಡಿಕೊಳ್ಳದೆ, ನಿಶ್ಚಿತಾರ್ಥಕ್ಕೆ ಅವರು ತುಂಬಾ ಸೊಗಸಾದ ಮತ್ತು ಸರಳ ಉಡುಪನ್ನು ಧರಿಸುತ್ತಾರೆ. ತಮ್ಮ ನಿಶ್ಚಿತಾರ್ಥದ ಉಡುಪನ್ನು ವಿನ್ಯಾಸಗೊಳಿಸಲು ಮನೀಶ್ ಮಲ್ಹೋತ್ರಾ ಅವರೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದಾರೆ.
ಆದರೆ, ರಾಘವ್ ಅವರು ತಮ್ಮ ತಾಯಿಯ ಚಿಕ್ಕಪ್ಪ ವಿನ್ಯಾಸಗೊಳಿಸಿದ ಕನಿಷ್ಠ ಅಚ್ಕನ್ ಅನ್ನು ಆಯ್ಕೆ ಮಾಡಿದ್ದಾರೆ. ಈ ಜೋಡಿ ಉಡುಪಿನ ಬಣ್ಣವು ಪರಸ್ಪರ ಹೊಂದಿಕೆಯಾಗುವಂತೆ ವಿಶೇಷ ಕಾಳಜಿ ವಹಿಸಲಾಗಿದೆ.
ನಿಶ್ಚಿತಾರ್ಥ ಮೇ 13ರಂದು ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ಕಪುರ್ತಲಾ ಹೌಸ್‌ನಲ್ಲಿ ಸಾಂಪ್ರದಾಯಿಕ ಸಮಾರಂಭವಾಗಿರುತ್ತದೆ ಮತ್ತು ಸಂಜೆ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ.
ಕುಟುಂಬ ಸದಸ್ಯರೊಂದಿಗೆ ಆತ್ಮೀಯ ಸ್ನೇಹಿತರು ಮತ್ತು ಸಂಬಂಧಿಕರು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ತಮ್ಮ ನಿಶ್ಚಿತಾರ್ಥ ಮತ್ತು ಸಮಾರಂಭಕ್ಕೆ ಸಂಬಂಧಿಸಿದಂತೆ ಪರಿಣಿತಿ ಅಥವಾ ರಾಘವ್ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.
ಇಬ್ಬರೂ ಈ ವರ್ಷದ ಅಕ್ಟೋಬರ್‌ನಲ್ಲಿ ಸಪ್ತಪದಿ ತುಳಿಯಲ್ಲಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿವೆ ಆದರೆ, ಇವರಿಬ್ಬರು ಡೆಸ್ಟಿನೇಷನ್ ವೆಡ್ಡಿಂಗ್ ಮಾಡುತ್ತಾರೋ ಅಥವಾ ದೆಹಲಿಯಲ್ಲೇ ಮದುವೆಯ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸುತ್ತಾರೋ ಎಂಬ ಮಾಹಿತಿ ಇನ್ನೂ ಬಯಲಿಗೆ ಬಂದಿಲ್ಲ.