ವರುಣ್ ತೇಜ್, ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್ ಅಭಿನಯದ Operation Valentine ತೆರೆಗಪ್ಪಳಿಸಲು ರೆಡಿ!
ವರುಣ್ ತೇಜ್ ಮತ್ತು ಮಾನುಷಿ ಚಿಲ್ಲರ್ ಅಭಿನಯದ ''ಆಪರೇಷನ್ ವ್ಯಾಲೆಂಟೈನ್' ಚಿತ್ರ ಮಾ.1 ರಂದು ತೆಲುಗು-ಹಿಂದಿ ದ್ವಿಭಾಷೆಯಲ್ಲಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ .ಸಲ್ಮಾನ್ ಖಾನ್ ಮತ್ತು ರಾಮ್ ಚರಣ್ ಅವರು ಆಪರೇಷನ್ ವ್ಯಾಲೆಂಟೈನ್‌ನ ಹಿಂದಿ ಮತ್ತು ತೆಲುಗು ಟ್ರೇಲರ್‌ಗಳನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ.
ವರುಣ್ ತೇಜ್ ಮತ್ತು ಮಾನುಷಿ ಚಿಲ್ಲರ್ ಅಭಿನಯದ ''Operation Valentine'' ಚಿತ್ರ ಮಾ.1 ರಂದು ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ . ತೆಲುಗು-ಹಿಂದಿ ದ್ವಿಭಾಷಾ ಚಿತ್ರವಾಗಿದ್ದು, ಈ ಚಿತ್ರವನ್ನು ಶಕ್ತಿ ಪ್ರತಾಪ್ ಸಿಂಗ್ ಹಡಾ ನಿರ್ದೇಶಿಸಿದ್ದಾರೆ. 'ಸೋನಿ ಪಿಕ್ಚರ್ಸ್ ಇಂಟರ್‌ನ್ಯಾಶನಲ್ ಪ್ರೊಡಕ್ಷನ್ಸ್', 'ಸಂದೀಪ್ ಮುದ್ದಾ ರೆನೈಸಾನ್ಸ್ ಪಿಕ್ಚರ್ಸ್' ನಿರ್ಮಿಸಿದೆ ಮತ್ತು ಗಾಡ್ ಬ್ಲೆಸ್ ಎಂಟರ್‌ಟೈನ್‌ಮೆಂಟ್ (ವಕೀಲ್ ಖಾನ್), ನಂದಕುಮಾರ್ ಅಬ್ಬಿನೇನಿ ಸಹ-ನಿರ್ಮಾಣ ಮಾಡಿದ್ದಾರೆ.
ಈ ಚಿತ್ರದ ಗ್ಲಿಂಪ್ಸ್ ಮತ್ತು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆಯನ್ನು ಪಡೆದಿವೆ. ಈ ಸಿನಿಮಾ ಮಾರ್ಚ್ 1 ರಂದು ತೆರೆಗೆ ಬರುತ್ತಿರುವುದು ಗೊತ್ತೇ ಇದೆ. ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ, ಚಿತ್ರದ ಟ್ರೇಲರ್ ಬಿಡುಗಡೆಯಾಯಿತು, ಸಲ್ಮಾನ್ ಖಾನ್ ಮತ್ತು ರಾಮ್ ಚರಣ್ ಅವರು ಆಪರೇಷನ್ ವ್ಯಾಲೆಂಟೈನ್‌ನ ಹಿಂದಿ ಮತ್ತು ತೆಲುಗು ಟ್ರೇಲರ್‌ಗಳನ್ನು ಮಂಗಳವಾರ ಬಿಡುಗಡೆ ಮಾಡಿದರು. ಟ್ರೇಲರ್ ಬಿಡುಗಡೆಯಾಗ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಕಂಡಿತು. ಟ್ರೇಲರ್ 2 ನಿಮಿಷ 42 ಸೆಕೆಂಡುಗಳದ್ದಾಗಿ. ವರುಣ್ ತೇಜ್ ಐಎಎಫ್ ಅಧಿಕಾರಿ ರುದ್ರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ಗಳಲ್ಲೇ ಮೈನವಿರೇಳಿಸುವ ದೃಶ್ಯಗಳಿವೆ.
ಸಿನಿಮಾ ವಿಶೇಷ ಎಂದರೆ ಇದೇ ಮೊದಲ ಬಾರಿಗೆ ವಿಶ್ವಸುಂದರಿ ಮಾನುಷಿ ಚಿಲ್ಲರ್ ನಾಯಕಿಯಾಗಿ ನಟಿಸಿದ್ದರೆ, ಮತ್ತೊಬ್ಬ ನಾಯಕಿ ರುಹಾನಿ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಅಲ್ಲದೆ ನವದೀಪ್ ಮತ್ತು ಅಲಿ ರೆಜಾ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಮಾನುಷಿ ಚಿಲ್ಲರ್ ಜೊತೆ ವರುಣ್ ಕೆಮಿಸ್ಟ್ರಿ ಕೂಡ ಆಕರ್ಷಕವಾಗಿದೆ. ಮಿಕ್ಕಿ ಜೆ ಮೇಯರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಟ್ರೇಲರ್‌ನಲ್ಲಿ ಬ್ಯಾಕ್‌ಗ್ರೌಂಡ್ ಸ್ಕೋರ್ ಕೂಡ ಹೈಲೈಟ್ ಆಗಿದೆ. ಅದರಲ್ಲೂ ಈ ಟ್ರೇಲರ್‌ನಲ್ಲಿರುವ ದೃಶ್ಯಗಳು ಅತ್ಯುನ್ನತ ಮಟ್ಟದಲ್ಲಿವೆ.
ಫೈಟರ್ ಸಿನಿಮಾದೊಂದಿಗೆ ಹೋಲಿಕೆ?
ಆಪರೇಷನ್ ವ್ಯಾಲೆಂಟೈನ್ ಚಿತ್ರವನ್ನು ಸಿದ್ಧಾರ್ಥ್ ಆನಂದ್ ಅವರ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ-ನಟಿಸಿದ ಫೈಟರ್ಸ್ ಗೆ ಹೋಲಿಕೆಯಾಗುತ್ತದೆಯೇ? ಈ ಬಗ್ಗೆ ವರುಣ್ ಪ್ರತಿಕ್ರಿಯಿಸಿದ್ದು, ನಾನು ಫೈಟರ್ ಅನ್ನು ನೋಡಿಲ್ಲ. ಆದರೆ ನಮ್ಮ ಸಿನಿಮಾ ಫೈಟರ್ಸ್ ಗಿಂತ ವಿಭಿನ್ನವಾಗಿದೆ ಎಂದು ಹೇಳಿಕೊಂಡಿದ್ದಾರೆ. ನಾವು ಸಿನಿಮಾದಲ್ಲಿ ಯಾವುದನ್ನೂ ವೈಭವಿಕರಿಸಿಲ್ಲ, ಬಾಲಾಕೋಟ್‌ನಲ್ಲಿ ನಡೆದ ಘಟನೆಯ ಮೇಲೆ ಕೇಂದ್ರೀಕರಿಸಿಲ್ಲ. ನಮ್ಮ ಚಿತ್ರ ಮುಖ್ಯವಾಗಿ ಐಎಎಫ್ ಅಧಿಕಾರಿಗಳ ವೈಯಕ್ತಿಕ ಜೀವನದ ಮೇಲೆ ಕೇಂದ್ರೀಕೃತವಾಗಿದೆ. ಕಾಕ್‌ಪಿಟ್‌ನಲ್ಲಿರುವಾಗ ಪೈಲಟ್‌ಗೆ ಹೇಗೆ ಅನಿಸುತ್ತದೆ ಎಂಬುದರ ಬಗ್ಗೆ ಮಾತ್ರವಲ್ಲ, ಅವನು ಮನೆಗೆ ಹಿಂದಿರುಗಿದಾಗ ಕೆಲಸದ ಬಗ್ಗೆಯೂ ಸಹ ಅನಿಸುತ್ತದೆ ಎಂಬುದನ್ನು ತೋರಿಸಲಾಗಿದೆ. ನಾವು ಯಾವುದೇ ದೇಶ ಅಥವಾ ಯಾವುದೇ ವ್ಯಕ್ತಿಯನ್ನು ಕೆಟ್ಟ ದೃಷ್ಟಿಯಲ್ಲಿ ತೋರಿಸಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಸದ್ಯ ತೆಲುಗು ಹಿಂದಿ ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ. ಟ್ರೇಲರ್ ಬಿಡುಗಡೆ ಬಳಿಕ ಅಭಿಮಾನಿಗಳು ಕಾತುರದಿಂದ ಕಾಯುವಂತೆ ಮಾಡಿದೆ