ಕಾಜಲ್ ಅರ್ವಾಲ್ ಮಗನನ್ನು ಮೊದಲ ಬಾರಿ ಭೇಟಿ ಮಾಡಿದ ಸಹೋದರಿ ನಿಶಾ ರಿಯಾಕ್ಷನ್!
ನೀಲ್ ನೋಡಲು ಯಾರ ರೀತಿ ಇದ್ದಾನೆ? ಸತ್ಯ ರಿವೀಲ್ ಮಾಡಿದ ಸಹೋದರಿ ಕಾಜಲ್...
ಅಕ್ಟೋಬರ್ 2020 ಕೊರೋನಾ ಲಾಕ್‌ಡೌನ್ ಸಮಯದಲ್ಲಿ ನಟಿ ಕಾಜಲ್ ಅಗರ್ವಾಲ್ (Kajal Aggarwal) ಮತ್ತು ಗೌತಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು.
2021ರಲ್ಲಿ ಕೊನೆಯಲ್ಲಿ ತಾಯಿಯಾಗುತ್ತಿರುವ ವಿಚಾರವನ್ನು ಕಾಜಲ್ ಸೋಷಿಯಲ್ ಮೀಡಿಯಾ (Social Media) ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡರು.
ಏಪ್ರಿಲ್ 19ರಂದು ಕಾಜಲ್ ಮತ್ತು ಗೌತಮ್ ಕುಟುಂಬಕ್ಕೆ ಮುದ್ದಾಗ ಗಂಡು ಮಗುವನ್ನು ಬರ ಮಾಡಿಕೊಂಡರು. ಹುಟ್ಟಿದ ಕೆಲವೇ ದಿನಗಳಲ್ಲಿ ಮಗನಿಗೆ ನೀಲ್ ಎಂದು ನಾಮಕರಣ ಕೂಡ ಮಾಡಿದ್ದಾರೆ.
'ನೀಲ್‌ನ ಭೇಟಿ ಮಾಡಿ ಮನೆಗೆ ಒಂದ ಕೆಲವೇ ನಿಮಿಷಗಳಲ್ಲಿ ಮಿಸ್ ಮಾಡಿಕೊಳ್ಳಲು ಶುರು ಮಾಡಿದ್ದೀನಿ. ಇಡೀ ಫ್ಯಾಮಿಲಿ ಎಕ್ಸೈಟ್ ಆಗಿದೆ. ಕಾಜಲ್ ಈಗ ಸುಧಾರಿಸಿಕೊಂಡಿದ್ದಾಳೆ' ಎಂದು ಕಾಜಲ್ ಸಹೋದರಿ ನಿಶಾ ಹೇಳಿದ್ದಾರೆ.
'ಮಗು ನೋಡಲು ಯಾರ ರೀತಿ ಇದೆ ಎಂದು ಹೇಗೆ ಹೇಳಬೇಕು ಗೊತ್ತಿಲ್ಲ ಒಂದು ಸಲ ಕಾಜಲ್ ರೀತಿ ಮತ್ತೊಂದು ಸಲ ಗೌತಮ್ ರೀತಿ ಇದ್ದಾನೆ'
'ನನ್ನ ಪುತ್ರ ಇಶಾನ್‌ನ ಇನ್ನೂ ಮಗು ನೋಡಲು ಬಿಟ್ಟಿಲ್ಲ ಏಕೆಂದರೆ ಅವನಿಗೆ ಕೆಮ್ಮಿದೆ. ಮಗು ಆರೋಗ್ಯದ ಬಗ್ಗೆ ಹೆಚ್ಚಿಗೆ ಕಾಳಜಿ ವಹಿಸಲಾಗುತ್ತಿದೆ' ಎಂದು ಹೇಳಿದ್ದಾರೆ.