- Home
- Entertainment
- Cine World
- OTT Releases This Week: ಫ್ಯಾಮಿಲಿ ಡ್ರಾಮಾ To ಕ್ರೈಮ್ ಥ್ರಿಲ್ಲರ್; ಮಿಸುಕಾಡದಂತೆ ಮಾಡೋ ಸಿನಿಮಾಗಳಿವು
OTT Releases This Week: ಫ್ಯಾಮಿಲಿ ಡ್ರಾಮಾ To ಕ್ರೈಮ್ ಥ್ರಿಲ್ಲರ್; ಮಿಸುಕಾಡದಂತೆ ಮಾಡೋ ಸಿನಿಮಾಗಳಿವು
ಈ ವಾರಾಂತ್ಯದಲ್ಲಿ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಹೊಸ ಸಿನಿಮಾ ಮತ್ತು ವೆಬ್ ಸೀರೀಸ್‌ಗಳು ಬಿಡುಗಡೆಯಾಗುತ್ತಿವೆ. ಥ್ರಿಲ್ಲರ್, ಕಾಮಿಡಿ, ಆಕ್ಷನ್ - ಎಲ್ಲಾ ಪ್ರಕಾರಗಳೂ ಇವೆ. ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಏನು ಬಿಡುಗಡೆಯಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಿ.

ವಿಭಿನ್ನ ವ್ಯಕ್ತಿತ್ವಗಳ ಮುಖಾಮುಖಿ 'ಪ್ರಿನ್ಸ್ ಅಂಡ್ ಫ್ಯಾಮಿಲಿ'
ಮಲಯಾಳಂ ಕಾಮಿಡಿ ಚಿತ್ರ 'ಪ್ರಿನ್ಸ್ ಅಂಡ್ ಫ್ಯಾಮಿಲಿ' ಈಗ ZEE5 ನಲ್ಲಿ. ದಿಲೀಪ್, ರನಿಯಾ ರಾನಾ ಅವರು ನಟಿಸಿದ್ದಾರೆ. ಇಬ್ಬರು ತದ್ವಿರುದ್ಧ ವ್ಯಕ್ತಿತ್ವಗಳು ಮದುವೆ ಆದಾಗ ನಡೆಯುವ ಕಥೆ ಈ ಸಿನಿಮಾದಲ್ಲಿದೆ. ಒಟ್ಟಿನಲ್ಲಿ ಇದೊಂದು ಫ್ಯಾಮಿಲಿ ಡ್ರಾಮಾ ಎನ್ನಬಹುದು.
ಕೊಲೆ ಕಂಡುಹಿಡಿಯುವ 'ಡಿಕೆಕ್ಟಿವ್ ಶೇರ್ದಿಲ್'
ದಿಲ್ಜಿತ್ ದೋಸಾಂಜ್ ಅಭಿನಯದ 'ಡಿಕೆಕ್ಟಿವ್ ಶೇರ್ದಿಲ್' ZEE5 ನಲ್ಲಿ. ಶ್ರೀಮಂತ ಉದ್ಯಮಿಯ ಕೊಲೆ ನಡೆಯುತ್ತದೆ. ಅಲ್ಲಿ ನಿಜಕ್ಕೂ ಏನಾಗಿರುತ್ತದೆ ಎನ್ನೋದನ್ನು ಡಿಟೆಕ್ಟಿವ್ ಶೇರ್ದಿಲ್ ಅವರು ಕಂಡುಹಿಡಿಯುತ್ತಾರೆ.
'ಗ್ರೌಂಡ್ ಝೀರೋ'
ಇಮ್ರಾನ್ ಹಶ್ಮಿ ಅಭಿನಯದ 'ಗ್ರೌಂಡ್ ಝೀರೋ' Amazon Prime Video ದಲ್ಲಿ. 2001 ರ ಭಾರತೀಯ ಸಂಸತ್ತಿನ ದಾಳಿ ಮತ್ತು 2002 ರ ಅಕ್ಷರಧಾಮ ದೇವಾಲಯದ ದಾಳಿ ಕುರಿತ ರಿಯಲ್ ಕಥೆಗಳು ಇಲ್ಲಿವೆ. ಪಕ್ಕಾ ಆಕ್ಷನ್ ಕಥೆ ಇಲ್ಲಿದೆ.
ಸೇಡು ತೀರಿಸಿಕೊಳ್ಳುವ 'ಫೌಂಡ್'
'ಫೌಂಡ್' ಸೀಸನ್ 2 Disney+ Hotstar ನಲ್ಲಿ. ಸ್ವತಃ ಕಿಡ್ನ್ಯಾಪ್ ಆಗಿದ್ದ ಹುಡುಗಿಯೊಬ್ಬಳು, ಆಮೇಲೆ ತನ್ನನ್ನು ಕಿಡ್ನ್ಯಾಪ್ ಮಾಡಿದವನ ವಿರುದ್ಧ ಸೇಡು ತೀರಿಸಿಕೊಳ್ಳಲು ನೋಡ್ತಾಳೆ. ಇದಕ್ಕೆಂದು ಅವಳು ತಂಡ ರಚಿಸುತ್ತಾಳೆ. ಈ ಬಗ್ಗೆ ಈ ಸಿರೀಸ್ ಕಥೆ ಇದೆ.