Nayanthara Honeymoon: ಹನಿಮೂನ್ ರೊಮ್ಯಾನ್ಸ್ ಫೋಟೋ ಲೀಕ್, ಎಲ್ಲಿದ್ದಾರೆ ನೋಡಿ
ಲೇಡಿ ಸೂಪರ್ ಸ್ಟಾರ್ ಮತ್ತು ನಿರ್ದೇಶಕನ ಹನಿಮೂನ್ ಫೋಟೋ ವೈರಲ್, ಎಲ್ಲಿದ್ದಾರೆ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ...

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹನಿಮೂನ್ ಫೋಟೋ ಹಂಚಿಕೊಂಡಿದ್ದಾರೆ.
ಥೈಲೆಂಡ್‌ನಲ್ಲಿ ನಯನತಾರಾ ಮತ್ತು ವಿಘ್ನೇಶ್ ಹನಿಮೂನ್ ಮಾಡಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಬ್ಬರೂ ರೊಮ್ಯಾಂಟಿಕ್ ಫೋಟೋ ಅಪ್ಲೋಡ್ ಮಾಡಿರುವುದು.
ಒಂದು ಕಡೆ ಸೂರ್ಯಾಸ್ತ ಆಗುತ್ತಿದ್ದಂತೆ ಮತ್ತೊಂದು ಕಡೆ ಇಬ್ಬರೂ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಹಳದಿ ಮ್ಯಾಕ್ಸಿಯಲ್ಲಿ ನಯನಾ ಕಾಣಿಸಿಕೊಂಡಿದ್ದಾರೆ.
ನೆಟ್ಟಿಗರಿಗೆ ಇರುವ ಪ್ರಶ್ನೆ ಏನೆಂದರೆ ಹನಿಮೂನ್‌ಗೆ ಇಬ್ಬರೇ ಹೋಗಿರುತ್ತಾರೆ ಅಂದ ಮೇಲೆ ಈ ಫೋಟೋ ಕ್ಲಿಕ್ ಮಾಡಿರುವುದು ಯಾರು ಎಂದು.
ನಯನತಾರಾ ಎಲ್ಲೇ ಹೋದರೂ ಸಖತ್ ಫಿಟ್ ಆಂಡ್ ಫೈನ್ ಆಗಿ ರೆಡಿಯಾಗಿರುತ್ತಾರೆ. ಆದರೆ ವಿಘ್ನೇಶ್ ಮಾತ್ರ ಮನೆಯಲ್ಲಿ ಇದ್ದ ಹಾಗೆ ಇರುತ್ತಾರೆ. ಮ್ಯಾಚ್ ಆಗುವುದಿಲ್ಲ ಎಂದಿದ್ದಾರೆ.
ಜೂನ್ 9ರಂದು ನಯನತಾರಾ ಮತ್ತು ವಿಘ್ನೇಶ್ ತಮಿಳುನಾಡಿನ ಮಹಾಬಲಿಪುರಂನಲ್ಲಿ (Mahabalipuram) ವೈವಾಹಿಕ ಜೀವನಕ್ಕೆ ಕಾಲಿಟ್ಟರು.
2015ರಿಂದ ನಯನತಾರಾ ಮತ್ತು ವಿಘ್ನೇಶ್ ಪ್ರೀತಿಸುತ್ತಿದ್ದರು. ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಮದುವೆ ಯಾವಾಗ ಎಂದು ಅಭಿಮಾನಿಗಳು ಕೇಳಿದ್ದರೆ ಹಣವಿಲ್ಲ ಎನ್ನುತ್ತಿದ್ದರು. ಆದರೆ ಸರ್ಪ್ರೈಸಿಂಗ್ ಆಗಿ ಮದುವೆ ಡೇಟ್ ಅನೌನ್ಸ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.