ತೆಲುಗಿನ ಸ್ಟಾರ್ ನಟನ ಕೈ ಹಿಡಿಯಲಿರುವ ಈ ಮಗು ಯಾರು ಹೇಳಿ ನೋಡೋಣ
ಫೋಟೋದಲ್ಲಿರುವ ಈ ಮಗು ಖ್ಯಾತ ನಟಿಯಾಗಿದ್ದು, ತಮಿಳಿನಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಿ ಸಾವಿರ ಕೋಟಿ ಒಟ್ಟುಗೂಡಿಸಿತು. ಹಾಗಿದ್ರೆ ಯಾರು ಆಕೆ ನೋಡೋಣ ಬನ್ನಿ.

ಅಂದಹಾಗೆ ಈ ನಟಿ ಶೀಘ್ರದಲ್ಲೇ ತೆಲುಗಿನ ಖ್ಯಾತ ನಟರೊಬ್ಬರನ್ನು ಮದುವೆಯಾಗಲಿದ್ದಾರೆ. ಖ್ಯಾತ ನಟಿಯಿಂದ ವಿಚ್ಛೇದನ ಪಡೆದಿರುವ ಆ ನಟನಿಗೆ ಇದು ಎರಡನೇ ಮದುವೆಯಾಗಿದ್ದಾರೆ ಈಕೆಗೆ ಇದು ಮೊದಲ ಮದುವೆ. ವಿಚ್ಛೇದಿತ ನಟನನ್ನು ಆಸ್ತಿಗಾಗಿ ಮದುವೆಯಾಗಲಿದ್ದಾರೆ ಎಂಬ ಆರೋಪಗಳ ನಡುವೆ ಆ ನಟಿ ಯಾರು ಎಂಬುದನ್ನು ನೋಡೋಣ.
ಅಂದಹಾಗೆ ಈ ಫೋಟೋದಲ್ಲಿರುವ ಮಗು 'ಪೊನ್ನಿಯಿನ್ ಸೆಲ್ವನ್' ಚಿತ್ರದ ನಟಿ ಶೋಭಿತಾ ದುಲಿಪಾಲಾ ತೆಲುಗಿನ ಖ್ಯಾತ ನಟ ನಾಗಚೈತನ್ಯ ಜೊತೆ ಅವರು ಶೀಘ್ರದಲ್ಲೇ ದಾಂಪತ್ಯಕ್ಕೆ ಕಾಲಿಡಲಿದ್ದಾರೆ.
ಮಾಡೆಲಿಂಗ್ ಮಾಡುತ್ತಲೇ ಚಲನಚಿತ್ರಗಳಲ್ಲಿ ಅವಕಾಶಗಳನ್ನು ಹುಡುಕಲು ಶುರುಮಾಡಿದ ಶೋಭಿತಾಗೆ ಬಾಲಿವುಡ್ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು.
ಡಿವೋರ್ಸಿ ಆಗಿರುವ ನಟ ನಾಗ ಚೈತನ್ಯ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದ ಶೋಭಿತಾ, ಮುಂದಿನ ವರ್ಷ ಅವರನ್ನು ವಿವಾಹವಾಗಲಿದ್ದಾರೆ.
3330 ಕೋಟಿ ರೂ. ಆಸ್ತಿಯ ಒಡೆಯ ಹಾಗೂ ತೆಲುಗಿನ ಖ್ಯಾತ ನಟ ನಾಗಾರ್ಜುನ ಅವರ ಹಿರಿಯ ಪುತ್ರ ನಾಗ ಚೈತನ್ಯ ಅವರನ್ನು ಸೋಭಿತಾ ಮದುವೆಯಾಗಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.