ಸೂಪರ್‌ಹಿಟ್ ಸಾಂಗ್‌ಗೆ ಎಸ್‌ಪಿಬಿಗಾಗಿ ಒಂದು ತಿಂಗಳು ಕಾಯ್ದಿದ್ದರಂತೆ ಇಳಯರಾಜಾ!
ಸಂಗೀತ ದಿಗ್ಗಜ ಇಳಯರಾಜಾ ರಚಿಸಿದ ಹಾಡನ್ನು ಖ್ಯಾತ ಸಿಂಗರ್ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರೇ ಹಾಡಲೇಬೇಕೆಂದು ನಿರ್ದೇಶಕರು ಒತ್ತಾಯಿಸಿದ್ದರಂತೆ. ಆದರೆ, ಈ ಒಂದು ಹಾಡು ಹಾಡಲು ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಇಳಯರಾಜಾ ಅವರನ್ನ ಬರೋಬ್ಬರಿ ಒಂದು ತಿಂಗಳು ಕಾಯಿಸಿದ್ದರಂತೆ.
ಇಳಯರಾಜ ಮತ್ತು ಎಸ್.ಪಿ.ಬಾಲಸುಬ್ರಮಣ್ಯಂ ಒಟ್ಟಿಗೆ ಬಂದರೆ ಹಾಡು ಹಿಟ್ ಎಂದೇ ಹೇಳಬಹುದು. ಎಸ್‌ಪಿಬಿ ಮತ್ತು ಇಳಯರಾಜ ಇಬ್ಬರೂ ಒಳ್ಳೆಯ ಸ್ನೇಹಿತರು. ಇಳಯರಾಜ ಅವರು ತಮ್ಮ ಗೆಳೆಯ ಎಸ್.ಪಿ.ಬಾಲಸುಬ್ರಮಣ್ಯಂ ಅವರಿಗಾಗಿ ಒಂದು ತಿಂಗಳು ಕಾದು ಒಂದು ಹಾಡನ್ನು ರೆಕಾರ್ಡ್ ಮಾಡಿದ್ದರಂತೆ.
SP Balasubrahmanyam
ನಿರ್ದೇಶಕ ಆರ್.ವಿ.ಉದಯಕುಮಾರ್ ಒಂದು ಹಾಡು ಬರೆದು ಇಳಯರಾಜ ಅವರಿಗೆ ಕೊಟ್ಟಿದ್ದರು. ಈ ಹಾಡನ್ನು ಎಸ್‌ಪಿಬಿ ಅವರೇ ಹಾಡಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಇಳಯರಾಜ ಎಸ್ ಪಿ ಬಿ ಅವರನ್ನು ಸಂಪರ್ಕಿಸಿದಾಗ ಅವರು ವಿದೇಶದಲ್ಲಿದ್ದು ಒಂದು ತಿಂಗಳು ಬೇಕು ಎಂದು ತಿಳಿಯಿತು. ಆದ್ರೆ ಮತ್ತೊಬ್ಬ ಗಾಯಕ ಹಾಡಲು ಇಳಯರಾಜ, ಆರ್.ವಿ.ಉದಯಕುಮಾರ್ ಸುತಾರಾಮ್ ಒಪ್ಪಲಿಲ್ಲವಂತೆ.
ಎಸ್ ಪಿ ಬಿ ಅವರಿಗಾಗಿ ಎಷ್ಟು ದಿನ ಬೇಕಾದರೂ ಕಾಯೋಣ ಎಂದು ನಿರ್ದೇಶಕರು ಹೇಳಿದ್ದರಂತೆ. ಎಸ್‌ಪಿಬಿಗಾಗಿಯೇ ಬರೋಬ್ಬರಿ ಒಂದು ತಿಂಗಳು ಕಾದು ‘ಪಚ್ಚಮಲೈ ಪೂವು’ ಹಾಡನ್ನು ಎಸ್‌ಪಿಬಿ ಕಂಠಸಿರಿಯಿಂದ ಹಾಡಿಸಿದ್ದರು. ಈ ಸೂಪರ್ ಹಿಟ್ ಹಾಡಿಗಾಗಿ ಇಳಯರಾಜ ಒಂದು ತಿಂಗಳು ಕಾಯಬೇಕಾಯಿತು.
ನಾಯಕಿ, ನಾಯಕನನ್ನು ನಿದ್ದೆಗೆಡಿಸುವ ದೃಶ್ಯದಲ್ಲಿ ಎಸ್ಪಿಬಿ ಈ ಹಾಡನ್ನು ಹಾಡುವುದಿದೆ. ಈ ಸಾಂಗ್ ಕೇಳಿದವರು ಮೈಮರೆಯುತ್ತಾರೆ. ಇಂದಿಗೂ ಈ ಹಾಡು ಅದೆಷ್ಟೋ ಮಂದಿಯ ಮನದಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ. ಇಷ್ಟು ಅದ್ಭುತವಾಗಿ ಇಂತಹ ಹಾಡಿದರೆ ಅವರಿಗಾಗಿ ಒಂದು ತಿಂಗಳಷ್ಟೇ ಅಲ್ಲ, ಒಂದು ವರ್ಷವಾದರೂ ಕಾಯಬಹುದು ಎನಿಸುತ್ತದೆ.