ಇದು ಅತಿ ಆಯ್ತು, ಸೀತಾ ಈಗ ಶೀಲಾ ಆಗಿದ್ದಾರೆ; ಮೃಣಾಲ್ ಹಾಟ್ ಫೋಟೋಗೆ ಅಭಿಮಾನಿಗಳ ಬೇಸರ
ಸೀತಾ ರಾಮಂ ಖ್ಯಾತಿಯ ನಟಿ ಮೃಣಾಲ್ ಠಾಕೂರ್ ಬೋಲ್ಡ್ ಲುಕ್ನಲ್ಲಿ ಪೋಸ್ ನೀಡಿದ್ದಾರೆ. ಮೃಣಾಲ್ ಫೋಟೋಗೆ ಅಭಿಮಾನಿಗಳು ಸೀತಾ ಈಗ ಶೀಲಾ ಆಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಬಹುಭಾಷಾ ನಟಿ ಮೃಣಾಲ್ ಠಾಕೂರ್ ಸದ್ಯ ಫೋಟೋಸೂಟ್ ಮೂಲಕ ಸದ್ದು ಮಾಡುತ್ತಿದ್ದಾರೆ. ಸದಾ ಫೋಟೋಗಳನ್ನು ಶೇರ್ ಮಾಡುವ ನಟಿ ಮೃಣಾಲ್ ಸಿಕ್ಕಾಪಟ್ಟೆ ಹಾಟ್ ಆಗಿ ಕ್ಯಾಮರಾಗೆ ಪೋಸ್ ನೀಡುತ್ತಾರೆ.
ಸದ್ಯ ಮೃಣಾಲ್ ಮತ್ತಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮೃಣಾಲ್ ಫೋಟೋ ನೋಡಿದ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ. ಸೀತಾ ರಾಮಂ ಚಿತ್ರದಲ್ಲಿ ಸೀರೆಯಲ್ಲಿ ಮಿಂಚಿದ್ದ ನಟಿ ಇದೀಗ ಈ ಪರಿ ಹಾಟ್ ಆಗಿರುವುದು ಅಭಿಮಾನಿಗಳ ನಿದ್ದೆ ಗೆಡಿಸಿದೆ.
ಮೃಣಾಲ್ ಹಾಟ್ನೆಸ್ ನೋಡಿ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಸೀತೆಯಾಗಿ ಕಂಗೊಳಿಸಿದ್ದ ಮೃಣಾಲ್ ಇದೀಗ ಬೋಲ್ಡ್ ಆಗಿ ಮಿಂಚುತ್ತಿದ್ದಾರೆ.
ಮೃಣಾಲ್ ಸದ್ಯ ಶೇರ್ ಮಾಡಿರುವ ಹಾಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸದ್ಯ ಸಮುದ್ರ ತೀರ ಎಂಜಾಯ್ ಮಾಡುತ್ತಿರುವ ನಟಿ ಮೃಣಾಲ್ ಸುಂದರ ಫೋಟೋ ಹಂಚಿಕೊಂಡಿದ್ದಾರೆ.
ಮೃಣಾಲ್ ಫೋಟೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಸೀತಾ ಈಗ ಶೀಲಾ ಆಗಿ ಬದಲಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಸೀತಾ ಅಲ್ಲ ಎಂದು ಮತ್ತೋರ್ವ ವ್ಯಕ್ತಿ ಹೇಳಿದ್ದಾರೆ. ಇನ್ನು ಅನೇಕರು ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸಿದ್ದಾರೆ.
ಸೀತಾ ರಾಮಂ ಸಿನಿಮಾ ಬಳಿಕ ಮೃಣಾಲ್ಗೆ ಬೇಡಿಕೆ ಹೆಚ್ಚಾಗಿದೆ. ಸದ್ಯ ಅನೇಕ ಸಿನಿಮಾಗಳಲ್ಲಿ ಮೃಣಾಲ್ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ ಸೌತ್ನಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ ಮೃಣಾಲ್.
ಸದ್ಯ ತೆಲುಗು ಸ್ಟಾರ್ ನಾನಿ ಜೊತೆ ಮೃಣಾಲ್ ನಟಿಸುತ್ತಿದ್ದಾರೆ. ಜೊತೆಗೆ ಹಿಂದಿ ಸಿನಿಮಾ ಕೂಡ ಮೃಣಾಲ್ ಕೈಯಲ್ಲಿದೆ. ಹಾಟ್ ಆಗಿರುವ ಮೃಣಾಲ್ ಮತ್ತೆ ಯಾವ ಪಾತ್ರದ ಮೂಲಕ ಎಂಟ್ರಿ ಕೊಡುತ್ತಾರೆ ಎಂದು ಕಾದು ನೋಡಬೇಕಿದೆ.
2014ರಲ್ಲಿ ಬಂದ ವಿಟ್ಟಿ ದಂಡು ಎಂಬ ಮರಾಠಿ ಚಿತ್ರದ ಮೂಲಕ ಮೃಣಾಲ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಮೃಣಾಲ್ ಠಾಕೂರ್ 10ಕ್ಕೂ ಹೆಚ್ಚು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.